59 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಮೂರು ಶುಭ ಗ್ರಹಗಳು: ಬೆಳಗಲಿದೆ ಐದು ರಾಶಿಯವರ ಅದೃಷ್ಟ

Rare Raja Yoga: ಈ ವರ್ಷ ನವರಾತ್ರಿಗೂ ಮೊದಲೇ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮೂರು ಶುಭ ಗ್ರಹಗಳು ಒಂದೇ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಐದು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದ್ದು, ಹಣದ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Sep 20, 2022, 07:25 AM IST
  • ನವರಾತ್ರಿಗೂ ಮೊದಲು ನಿರ್ಮಾಣಗೊಳ್ಳಲಿದೆ ಅಪರೂಪದ ರಾಜಯೋಗ
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 59 ವರ್ಷಗಳ ನಂತರ ಇಂತಹ ಅಪರೂಪದ ರಾಜಯೋಗ ನಿರ್ಮಾಣವಾಗುತ್ತಿದೆ.
  • ಈ ಸಮಯವು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.
59 ವರ್ಷಗಳ ನಂತರ, ಒಂದೇ ರಾಶಿಯಲ್ಲಿ ಮೂರು ಶುಭ ಗ್ರಹಗಳು: ಬೆಳಗಲಿದೆ ಐದು ರಾಶಿಯವರ ಅದೃಷ್ಟ  title=
Rare Raja Yoga

ನವರಾತ್ರಿಗೂ ಮೊದಲು ಅಪರೂಪದ ರಾಜಯೋಗ: ಈ ವರ್ಷ ನವರಾತ್ರಿಗೂ ಮೊದಲು ಸೆಪ್ಟೆಂಬರ್ 24ರಂದು ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಯೋಗವು ಐದು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಇದೇ ಸೆಪ್ಟೆಂಬರ್ 24ರಂದು ನ್ಯಾಯದ ಗ್ರಹ ಶನಿ ಹಾಗೂ ದೇವಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿಯು ಹಿಮ್ಮುಖ ಸ್ಥಿತಿಯಲ್ಲಿರುತ್ತಾರೆ. ಇದೇ ದಿನ ಐಶಾರಾಮಿ ಜೀವನ ಕಾರಕನಾದ ಶುಕ್ರನು ಕನ್ಯಾರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಈಗಾಗಲೇ ಕನ್ಯಾ ರಾಶಿಯಲ್ಲಿರುವ ಸೂರ್ಯ ಮತ್ತು ಬುಧ ಬುಧಾದಿತ್ಯ ಯೋಗವನ್ನು ರೂಪಿಸಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಕನ್ಯಾ ರಾಶಿಗೆ ಶುಕ್ರನ ಪ್ರವೇಶದಿಂದಾಗಿ ಈ ರಾಶಿಚಕ್ರದಲ್ಲಿ ತ್ರಿಯೋಗ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 59 ವರ್ಷಗಳ ನಂತರ ಇಂತಹ ಅಪರೂಪದ ರಾಜಯೋಗ ನಿರ್ಮಾಣವಾಗುತ್ತಿದೆ. ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಉಂಟಾಗಲಿದೆ. ಆದರೂ, ಈ ಸಮಯವು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ವೃಷಭ ರಾಶಿಯ ಜನರು ವ್ಯಾಪಾರ ವಿಸ್ತರಣೆ ಮಾಡುವ ಸಾಧ್ಯತೆ:
ನವರಾತ್ರಿಗೂ ಮೊದಲು ನಿರ್ಮಾಣಗೊಳ್ಳಲಿರುವ ಅಪರೂಪದ ರಾಜಯೋಗದಿಂದಾಗಿ ಈ ರಾಶಿಯ ಜನರು ಯಾವುದೇ ಯೋಜನೆಗಳನ್ನು ಮಾಡಿದರೂ ಅದರಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ. ಹಣ ಗಳಿಸುವುದರ ಜೊತೆಗೆ ವ್ಯಾಪಾರ-ವ್ಯವಹಾರಗಳನ್ನು ವಿಸ್ತರಿಸಲು ಇದು ಶುಭ ಸಮಯ. 

ಮಿಥುನ ರಾಶಿಯವರು ವೃತ್ತಿ ರಂಗದಲ್ಲಿ ಉತ್ತುಂಗಕ್ಕೇರುತ್ತಾರೆ:
ಸೆಪ್ಟೆಂಬರ್ 24ರಂದು ರೂಪುಗೊಳ್ಳಲಿರುವ ವಿಶೇಷ ರಾಜಯೋಗದಿಂದಾಗಿ ಮಿಥುನ ರಾಶಿಯವರು ವೃತ್ತಿ ಜೀವನದಲ್ಲಿ ಬಹಳ ಉತ್ತುಂಗಕ್ಕೇರುತ್ತಾರೆ. ವ್ಯಾಪಾರ-ವ್ಯವಹಾರಗಳು ವೃದ್ದಿಯಾಗಲಿದೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ಈ ರಾಶಿಯ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ-  ಐದು ದಿನಗಳಲ್ಲಿ ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಕನ್ಯಾ ರಾಶಿಯವರಿಗೆ ಹೂಡಿಕೆಗೆ ಉತ್ತಮ ಸಮಯ:
ಕನ್ಯಾರಾಶಿಯಲ್ಲಿ ಶುಕ್ರನು ಕ್ಷೀಣಿಸುವ ರಾಜಯೋಗವನ್ನು ಸೃಷ್ಟಿಸುತ್ತಿದ್ದು ರಾಶಿಯವರಿಗೆ ಇನ್ನು ನಾಲ್ಕು ದಿನಗಳಲ್ಲಿ ಸುವರ್ಣ ದಿನಗಳು ಆರಂಭವಾಗಲಿದೆ. ಈ ಕಾರಣದಿಂದಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಹೂಡಿಕೆಗೆ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ.

ಧನು ರಾಶಿಯವರಿಗೆ ಕುಟುಂಬದಲ್ಲಿ ಸಂತಸದ ವಾತಾವರಣ:
ಸೆಪ್ಟೆಂಬರ್ 24ರ ನಂತರದ ಸಮಯವು ಧನು ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತದೆ.  ಈ ರಾಶಿಚಕ್ರದಲ್ಲಿ ನೀಚಭಂಗ, ಹಂಸ, ಭದ್ರ ಎಂಬ ರಾಜಯೋಗಗಳು ರೂಪುಗೊಳ್ಳುತ್ತಿವೆ.  ಈ ಸಮಯದಲ್ಲಿ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಬಿಸಿನೆಸ್ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. 

ಇದನ್ನೂ ಓದಿ- Budhaditya Yog 2022: ಇಂದು ಈ ರಾಶಿಯಲ್ಲಿ ರೂಪುಗೊಂಡ ‘ಬುಧಾದಿತ್ಯ’ ಯೋಗ, ಪ್ರಗತಿ ಜೊತೆಗೆ ಧನಲಾಭ!

ಮೀನ ರಾಶಿಯವರಿಗೆ ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿವೆ:
ಈ ರಾಶಿಯಲ್ಲಿ ಉತ್ತಮ ಹಾಗೂ ಕ್ಷೀಣಗೊಳಿಸುವ ರಾಜಯೋಗವು ರೂಪುಗೊಳ್ಳುತ್ತಿದೆ. ಇದರಿಂದ ಮೀನ ರಾಶಿಯವರಿಗೆ ಅನೇಕ ಶುಭ ಸುದ್ದಿಗಳು ಕೇಳಿ ಬರಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದ್ದು, ವೇತನವೂ ಹೆಚ್ಚಾಗಬಹುದು. ಈ ರಾಶಿಯ ಜನರ ಜಾತಕದಲ್ಲಿ ಶನಿದೇವನು ಲಾಭಸ್ಥಾನದಲ್ಲಿ ಕುಳಿತಿದ್ದಾನೆ. ಆದ್ದರಿಂದ, ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿವೆ. ಈ ಸಮಯದಲ್ಲಿ ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News