Spiritual News: ಚಾಣಕ್ಯ ನೀತಿ, ವಿದುರ ನೀತಿಯಂತೆಯೇ ಶುಕ್ರ ನೀತಿ ಕೂಡ ಒಂದು ಪ್ರಖ್ಯಾತ ಗ್ರಂಥವಿದೆ. ದೈತ್ಯ ಗುರು ಎಂದೇ ಹೇಳಲಾಗುವ ಶುಕ್ರಾಚಾರ್ಯರು ತನ್ನ ನೀತಿಯಲ್ಲಿ ಹಲವು ಸಂಗತಿಗಳ ಕುರಿತು ಮಾತನಾಡಿದ್ದಾರೆ. ಶುಕ್ರಾಚಾರ್ಯರನ್ನು ಕೂಡ ಪ್ರಖಂಡ ಪಂಡಿತರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಯಶಸ್ವಿ ಜೀವನ ಸಾಗಿಸಲು ಬೇಕಾಗುವ ಹಲವು ಸಂಗತಿಗಳನ್ನು ಅವರು ತನ್ನ ನೀತಿ ಗ್ರಂಥದಲ್ಲಿ ಬರೆದುಕೊಂಡಿದ್ದಾರೆ. ಅವರು ಆಗ ಹೇಳಿರುವ ಕೆಲ ನೀತಿಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಹೀಗಿರುವಾಗ ಶುಕ್ರ ನೀತಿಯಲ್ಲಿ ಹೇಳಲಾಗಿರುವ 9 ಗುಟ್ಟುಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಗುಟ್ಟುಗಳನ್ನು ಎಂದಿಗೂ ಕೂಡ ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಎನ್ನಲಾಗಿದೆ. ಶುಕ್ರಾಚಾರ್ಯರ ಪ್ರಕಾರ ಈ ಗುಟ್ಟುಗಳನ್ನು ಹಂಚಿಕೊಳ್ಳುವ ವ್ಯಕ್ತಿಗೆ ಶಾರೀರಿಕ, ಮಾನಸಿಕ ಅಥವಾ ಆರ್ಥಿಕ ಹಾನಿ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬನ್ನಿ ಆ 9 ಸಂಗತಿಗಳು ಯಾವುವು ತಿಳಿದುಕೊಳ್ಳೋಣ,
ಶ್ಲೋಕ- ಆಯುರ್ವಿತ್ತಮ್ ಗ್ರಹಚ್ಚಿದ್ರಂ ಮಂತ್ರಮೈಥುನಭೇಷಜಮ್,
ದಾನಮಾನಾಪಮಾನಂ ಚ ನವೈತಾನೀಸುಗೋಪಯೇತ್
ಅರ್ಥ- ಇದರರ್ಥ ವ್ಯಕ್ತಿ ತನ್ನ ವಯಸ್ಸು, ಗೃಹದೋಷ, ಮಂತ್ರ, ಮೈಥುನ, ಧನ-ಸಂಪತ್ತು, ಔಷಧಿ, ದಾನ, ಮಾನ-ಸನ್ಮಾನ, ಅಪಮಾನ ಹಾಗೂ ಅಯೋಗ್ಯತೆಯ ಕುರಿತಾದ ಮಾಹಿತಿ ಇತರದೊಂದಿಗೆ ಹಂಚಿಕೊಳ್ಳಬಾರದು. ಅಂದರೆ ಈ ಸಂಗತಿಗಳನ್ನು ಯಾವಾಗಲೂ ಗುಟ್ಟಾಗಿಯೇ ಇರಲು ಬಿಡಬೇಕು ಎಂದರ್ಥ.
ವಯಸ್ಸು: ಶುಕ್ರಾಚಾರ್ಯರ ಪ್ರಕಾರ, ಯಾರೂ ಕೂಡ ಯಾರೊಂದಿಗೂ ಕೂಡ ತನ್ನ ವಯಸ್ಸಿನ ಮಾಹಿತಿಯನ್ನು ಹಂಚಿಕೊಳ್ಳಬಾರದು ಎನ್ನಲಾಗಿದೆ. ಏಕೆಂದರೆ ಭವಿಷ್ಯದಲ್ಲಿ ಎದುರಿಗೆ ಇರುವ ವ್ಯಕ್ತಿ ನಿಮ್ಮ ವಿರುದ್ಧ ಅದನ್ನು ಬಳಕೆ ಮಾಡಬಹುದು.
ಗ್ರಹದೋಷ: ಒಂದು ವೇಳೆ ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ, ಅದನ್ನು ಯಾರಿಗೂ ಹೇಳಬೇಡಿ. ಏಕೆಂದರೆ ಈ ಗ್ರಹದೋಷಗಳ ನಕಾರಾತ್ಮಕ ಪ್ರಭಾವ ಹೆಚ್ಚಾಗಿರುತ್ತದೆ. ಹೀಗಿರುವಾಗ ನಿಮಗೆ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.
ಮಂತ್ರ: ದೇವ-ದೇವತೆಗಳ ಕೃಪೆ ಪ್ರಾಪ್ತಿಗಾಗಿ ಒಂದು ವೇಳೆ ನೀವು ವಿಭಿನ್ನ ಮಂತ್ರಗಳನ್ನು ಪಠಿಸುತ್ತಿದ್ದರೆ, ಅದರಿಂದ ಆ ದೇವರ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ಹೀಗಿರುವಾಗ ಆ ಮಂತ್ರಗಳ ಉಲ್ಲೇಖ ಇತರರ ಮುಂದೆ ಮಾಡಬೇಡಿ.
ಕಾಮ ಕ್ರಿಯೆ: ಕಾಮಕ್ರಿಯೆ ಅತ್ಯಂತ ಖಾಸಗಿ ಸಂಗತಿಯಾಗಿದೆ. ಅದರ ಬಗ್ಗೆ ಸಂಗಾತಿಯನ್ನು ಹೊರತುಪಡಿಸಿ ಇತರರಿಗೆ ಮಾಹಿತಿಯನ್ನು ನೀಡಬೇಡಿ. ಇದರಿಂದ ನೀವು ಅಪಹಾಸ್ಯಕ್ಕೆ ಪಾತ್ರರಾಗಬಹುದು.
ದಾನ: ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಶಾಸ್ತ್ರಗಳ ಪ್ರಕಾರ ಒಂದು ವೇಳೆ ನೀವು ಯಾವುದೇ ನಿರ್ಗತಿಕರಿಗೆ ದಾನವನ್ನು ಮಾಡಿದರೆ, ಆ ಕುರಿತು ಯಾರಿಗೂ ಹೇಳಬೇಡಿ ಎನ್ನಲಾಗುತ್ತದೆ. ಏಕೆಂದರೆ, ಕೆಲವರು ದೊಡ್ಡಸ್ತಿಕೆಯನ್ನು ಮೇರೆಯಲು ಕೆಲವೊಮ್ಮೆ ಅಂತಹ ತಪ್ಪು ಮಾಡುತ್ತಾರೆ. ಆದರೆ, ಈ ರೀತಿ ಮಾಡುವುದರಿಂದ ದಾನದ ಫಲ ಪ್ರಾಪ್ತಿಯಾಗುವುದಿಲ್ಲ ಎನ್ನಲಾಗುತ್ತದೆ.
ಧನ ಸಂಪತ್ತು: ನಿಮ್ಮ ಬಳಿ ಇರುವ ಧನ-ಸಂಪತ್ತಿನ ಕುರಿತು ಯಾರಿಗೂ ಮಾಹಿತಿಯನ್ನು ನೀಡಬೇಡಿ. ಏಕೆಂದರೆ ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಹಣದ ದುರಾಸೆಯ ಹಿನ್ನೆಲೆ ಆತ ನಿಮಗೆ ಹಾನಿ ತಲುಪಿಸುವ ಸಾಧ್ಯತೆ ಇರುತ್ತದೆ.
ಸ್ಥಾನ ಮಾನ: ಘನತೆ ಗೌರವ: ಇತರರಿಂದ ದೊರೆಯುವ ಸ್ಥಾನಮಾನ ಹಾಗೂ ಘನತೆ-ಗೌರವದ ಕುರಿತು ಯಾರ ಮುಂದೆಯೂ ಹೇಳಿಕೊಳ್ಳಬೇಡಿ ಎಂದು ಶುಕ್ರಾಚಾರ್ಯರು ಹೇಳಿದ್ದಾರೆ. ಏಕೆಂದರೆ ಅದರಿಂದ ನಿಮ್ಮಿಬ್ಬರ ಮಧ್ಯೆ ಅಂತರ ನಿರ್ಮಾಣಗೊಳ್ಳುವ ಸಾಧ್ಯತೆ ಇರುತ್ತದೆ.
ಅಪಮಾನ: ಒಂದು ವೇಳೆ ಯಾವುದೇ ವ್ಯಕ್ತಿ ನಿಮಗೆ ಅವಮಾನಿಸಿದ್ದರೆ, ಅದನ್ನು ಇನ್ನೊಬ್ಬರ ಬಳಿ ಉಲ್ಲೇಖಿಸಬೇಡಿ. ಏಕೆಂದರೆ, ಅದರಿಂದ ನೀವು ಅಪಹಾಸ್ಯಕ್ಕೆ ಗುರಿಯಾಗಬಹುದು.
ಇದನ್ನೂ ಓದಿ-ವಿವಾಹಿತ ಪುರುಷರಿಗೆ ಬೇರೆಯವರ ಪತ್ನಿಯರು ಏಕೆ ಇಷ್ಟವಾಗುತ್ತಾರೆ? ಇಲ್ಲಿದೆ ಕಾರಣ!
ವೈದ್ಯ: ಚಿಕಿತ್ಸಕನಿಗೆ ನಿಮಗೆ ಇರುವ ಪ್ರತಿಯೊಂದು ಕಾಯಿಲೆಯ ಮಾಹಿತಿ ಇರುತ್ತದೆ. ಹೀಗಿರುವಾಗ ಯಾರಿಗೂ ಕೂಡ ನಿಮ್ಮ ವೈದ್ಯರ ಬಗ್ಗೆ ಮಾಹಿತಿಯನ್ನು ನೀಡಬೇಡಿ. ಏಕೆಂದರೆ ನಿಮಗೆ ಆಗದೆ ಇರುವವರು ನಿಮ್ಮ ಕಾಯಿಲೆಯನ್ನು ದುರುಪಯೋಗಪಡಿಸಿಕೊಂಡು, ನಿಮ್ಮನ್ನು ತಲೆತಗ್ಗಿಸುವಂತೆ ಮಾಡಬಹುದು.
ಇದನ್ನೂ ಓದಿ-ಮದುವೆಯಾದ ಬಳಿಕ ಏಕೆ ಪತ್ನಿಯರು ತಮ್ಮ ಪತಿಗೆ ದ್ರೋಹ ಬಗೆಯುತ್ತಾರೆ? ಕಾರಣ ಇಲ್ಲಿದೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.