Surya Gochar: ಮೇ 14ರ ನಂತರ ಈ ರಾಶಿಯವರ ಜೀವನವೇ ಬದಲಾಗಲಿದೆ

Sun Transit: ಕೇವಲ ಇನ್ನು ಹತ್ತೇ ಹತ್ತು ದಿನಗಳಲ್ಲಿ ಗ್ರಹಗಳ ರಾಜನಾದ ಸೂರ್ಯನು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಜೀವನವೂ ಸೂರ್ಯನಂತೆ ಉಜ್ವಲಿಸಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : May 4, 2023, 03:08 PM IST
  • ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಸೂರ್ಯನು 13 ಮೇ 2023 ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿ ಪದಾರ್ಪಣೆ ಮಾಡಲಿದ್ದಾನೆ.
  • ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಸಂಕ್ರಮಣವು ಭೂಮಿಯ ಮೇಲಿರುವ ಪ್ರತಿ ಜೀವಿಯ ಮೇಲೆ ಪ್ರಭಾವ ಬೀರುತ್ತದೆ.
  • ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Surya Gochar: ಮೇ 14ರ ನಂತರ ಈ ರಾಶಿಯವರ ಜೀವನವೇ ಬದಲಾಗಲಿದೆ title=

Surya Rashi Parivartane Effect On Zodaic Signs: ಹಿಂದೂ ಧರ್ಮದಲ್ಲಿ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವಣೆಯೂ ಸಹ ಪ್ರತಿ ಜೀವ ರಾಶಿಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ ಎಂದು ನಂಬಲಾಗಿದೆ. ಇದೀಗ ಇನ್ನು ಹತ್ತು ದಿನಗಳ ಬಳಿಕ ಗ್ರಹಗಳ ರಾಜ, ಬ್ರಹ್ಮಾಂಡದ ಅಧಿಪತಿ ಸೂರ್ಯ ದೇವ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಸೂರ್ಯನು 13 ಮೇ 2023 ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿ ಪದಾರ್ಪಣೆ ಮಾಡಲಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಸಂಕ್ರಮಣವು ಭೂಮಿಯ ಮೇಲಿರುವ ಪ್ರತಿ ಜೀವಿಯ ಮೇಲೆ ಪ್ರಭಾವ ಬೀರುತ್ತದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಇದೀಗ ಹತ್ತು ದಿನಗಳ ಬಳಿಕ ಸೂರ್ಯ ರಾಹಿ ಪರಿವರ್ತನೆಯಿಂದ ಕೆಲವು ರಾಶಿಯವರ ಮೇಲೆ ಸೂರ್ಯ ದೇವನ ಅಪಾರ ಕೃಪಾಕಟಾಕ್ಷ ಇರಲಿದ್ದು ಅವರ ಜೀವನ ಬಂಗಾರದಂತೆ ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ. 

ಇದನ್ನೂ ಓದಿ- Shani-Shukra In Navpancham Yog: ಶೀಘ್ರದಲ್ಲಿಯೇ ನವಪಂಚಮ ರಾಜಯೋಗ ನಿರ್ಮಾಣ, ಧನದಾತ ಶುಕ್ರ- ಕರ್ಮಫಲದಾತ ಶನಿ ಕೃಪೆಯಿಂದ ಅಪಾರ ಧನಲಾಭ!

ಹತ್ತು ದಿನಗಳ ನಂತರ ಸೂರ್ಯನಂತೆ ಉಜ್ವಲಿಸಲಿದೆ  ಈ ರಾಶಿಯವರ ಭವಿಷ್ಯ: 
ಮೇಷ ರಾಶಿ: 

ಮೇ ತಿಂಗಳಿನಲ್ಲಿ ಸೂರ್ಯ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರಿಗೆ ಅದೃಷ್ಟ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದ್ದು ಇವರ ಆದಾಯದಲ್ಲಿ ಭಾರೀ ಹೆಚ್ಚಳವನ್ನು ಕಾಣಬಹುದು. ನೀವು ಹೊಸ ವ್ಯವಹಾರವನ್ನು ಆರಂಭಿಸುವ ಬಗ್ಗೆ ಚಿಂತಿಸುತ್ತಿದ್ದರೆ ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎಂದು ಹೇಳಲಾಗುತ್ತಿದೆ. ಉದ್ಯೋಗಕ್ಕಾಗಿ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. 

ಸಿಂಹ ರಾಶಿ: 
ಸಿಂಹ ರಾಶಿಗೆ ಅಧಿಪತಿ ಆಗಿರುವ ಸೂರ್ಯದೇವನ ರಾಶಿ ಪರಿವರ್ತನೆಯು ಈ ರಾಶಿಯವರಿಗೂ ಕೂಡ ತುಂಬಾ ಶುಭ ಫಲಗಳನ್ನು ನೀಡಲಿದ್ದಾನೆ. ಈ ವೇಳೆ ಸಿಂಹ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಆಕರ್ಷಕ ಅವಕಾಶಗಳು ಲಭ್ಯವಾಗಲಿವೆ. ಮಾತ್ರವಲ್ಲ, ವ್ಯಾಪಾರ, ವ್ಯವಹಾರದಲ್ಲಿಯೂ ಬಂಪರ್ ಲಾಭ ಗಳಿಸುವ ಸುಯೋಗವಿದ್ದು ಇದರಿಂದ ಆರ್ಥಿಕ ಲಾಭವನ್ನು ಕಾಣಬಹುದು. ಹಣಕಾಸಿನ ಹರಿವು ಹೆಚ್ಚಾಗುವುದರಿಂದ ನಿಮ್ಮ ಬಹಳಷ್ಟು ಕಷ್ಟ ಕಾರ್ಪಣ್ಯಗಳು ಕೊನೆಗೊಳ್ಳಲಿವೆ. 

ಇದನ್ನೂ ಓದಿ- Guru Uday: ಗುರು ಉದಯದಿಂದ 'ಮಹಾಧನ ಯೋಗ', ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

ಕನ್ಯಾ ರಾಶಿ: 
ಮೇ ಮಧ್ಯ ಭಾಗದಲ್ಲಿ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪ್ರವೇಶಿಸಲಿರುವ ಸೂರ್ಯ ದೇವನು ಕನ್ಯಾ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾನೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಪ್ರತಿ ಹೆಜ್ಜೆಯಲ್ಲೂ ವಿಜಯ ಸಾಧಿಸಲಿದ್ದು  ವೃತ್ತಿ, ವ್ಯವಹಾರ, ವಿದ್ಯಾಭ್ಯಾಸ ಎಲ್ಲದರಲ್ಲಿಯೂ ಯಶಸ್ಸಿನ ಉತ್ತುಂಗವನ್ನು ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News