Vastu For Calendar: ಜೀವನದಲ್ಲಿ ಏಳ್ಗೆಗಾಗಿ ಮನೆಯ ಈ ದಿಕ್ಕಿನಲ್ಲಿರಲಿ ಕ್ಯಾಲೆಂಡರ್

Vastu For Calendar: ವಾಸ್ತು ಶಾಸ್ತ್ರದಲ್ಲಿ ಹಲವು ವಿಷಯಗಳ  ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಇಡುವುದರಿಂದ ಶುಭ ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ. 

Written by - Yashaswini V | Last Updated : Jun 6, 2023, 08:03 AM IST
  • ನಮ್ಮಲ್ಲಿ ಬಹಳಷ್ಟು ಮಂದಿ ಆತುರಾತುರವಾಗಿ, ಇಲ್ಲವೇ ಏನಾದರೂ ಲೆಕ್ಕಾಚಾರದಿಂದಾಗಿ ಹಳೆಯ ಕ್ಯಾಲೆಂಡರ್ ಮೇಲೆಯೇ ಹೊಸ ಕ್ಯಾಲೆಂಡರ್ ಹಾಕುವ ಅಭ್ಯಾಸ ಹೊಂದಿರುತ್ತಾರೆ.
  • ನೀವೂ ಈ ತಪ್ಪನ್ನು ಮಾಡುತ್ತಿದ್ದರೆ ಹುಷಾರಾಗಿರಿ.
  • ಏಕೆಂದರೆ ವಾಸ್ತು ಪ್ರಕಾರ, ನಿಮ್ಮ ಈ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು.
Vastu For Calendar: ಜೀವನದಲ್ಲಿ ಏಳ್ಗೆಗಾಗಿ ಮನೆಯ ಈ ದಿಕ್ಕಿನಲ್ಲಿರಲಿ ಕ್ಯಾಲೆಂಡರ್  title=

Vastu Tips For Calendar: ಪ್ರತಿಯೊಬ್ಬರ ಮನೆಯಲ್ಲೂ ಕ್ಯಾಲೆಂಡರ್ ಇದ್ದೇ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಕ್ಯಾಲೆಂಡರ್ ಹಾಕುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾ ಅಗತ್ಯ. ಇಲ್ಲದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. 

ಕ್ಯಾಲೆಂಡರ್ ವಿಷಯದಲ್ಲಿ ಈ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು: 
ವಾಸ್ತವವಾಗಿ, ನಮ್ಮಲ್ಲಿ ಬಹಳಷ್ಟು ಮಂದಿ ಆತುರಾತುರವಾಗಿ, ಇಲ್ಲವೇ ಏನಾದರೂ ಲೆಕ್ಕಾಚಾರದಿಂದಾಗಿ ಹಳೆಯ ಕ್ಯಾಲೆಂಡರ್ ಮೇಲೆಯೇ ಹೊಸ ಕ್ಯಾಲೆಂಡರ್ ಹಾಕುವ ಅಭ್ಯಾಸ ಹೊಂದಿರುತ್ತಾರೆ. ನೀವೂ ಈ ತಪ್ಪನ್ನು ಮಾಡುತ್ತಿದ್ದರೆ ಹುಷಾರಾಗಿರಿ. ಏಕೆಂದರೆ ವಾಸ್ತು ಪ್ರಕಾರ, ನಿಮ್ಮ ಈ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಕ್ಯಾಲೆಂಡರ್ ಅನ್ನು ಸರಿಯಾದ ಸ್ಥಳದಲ್ಲಿ, ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸುವುದು ಬಹಳ ಅಗತ್ಯ. 

ಇದನ್ನೂ ಓದಿ- Vastu Tips: ಈ ವಸ್ತುಗಳನ್ನು ಮನೆಗೆ ತಂದು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ

ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇದ್ದರೆ ತುಂಬಾ ಶುಭ: 
ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅಥವಾ ಪಂಚಾಂಗವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿಸುವುದನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. 

ಕುಬೇರನ ದಿಕ್ಕು: 
ಒಂದೊಮ್ಮೆ ಪಶ್ಚಿಮ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲು ಸಾಧ್ಯವಾಗದಿದ್ದರೆ, ಉತ್ತರ ದಿಕ್ಕಿನಲ್ಲೂ ಕೂಡ ಕ್ಯಾಲೆಂಡರ್ ಇರಿಸಬಹುದು. ಉತ್ತರ ದಿಕ್ಕು ಕುಬೇರನ ದಿಕ್ಕು. ಹಾಗಾಗಿ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದಲೂ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ

ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲೇಬಾರದು: 
ದಕ್ಷಿಣ ದಿಕ್ಕು: 

ವಾಸ್ತು ಪ್ರಕಾರ, ಅಪ್ಪಿತಪ್ಪಿಯೂ ಕೂಡ ಮನೆಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲೇಬಾರದು. ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಅದು ಮನೆಯ ಹಿರಿಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಬಾಗಿಲ ಹಿಂದೆ/ಮುಖ್ಯ ಬಾಗಿಲಿನ ಬಳಿ: 
ಮನೆಯ ಬಾಗಿಲಿನ ಹಿಂದೆ ಕ್ಯಾಲೆಂಡರ್ ಇಡುವ ತಪ್ಪನ್ನು ನೀವು ಎಂದಿಗೂ ಮಾಡಲೇಬಾರದು. ಇದಲ್ಲದೆ, ಮನೆಯ ಮುಖ್ಯ ಬಾಗಿಲಿನ ಬಳಿಯೂ ಕೂಡ ಕ್ಯಾಲೆಂಡರ್ ಹಾಕಬಾರದು ಎಂದು ನೆನಪಿಡಿ. 

ಹೆಚ್ಚು ಗಾಳಿ ಬೀಸುವ ಕಡೆ: 
ವಾಸ್ತು ಪ್ರಕಾರ, ಹೆಚ್ಚು ಗಾಳಿ ಬೀಸುವ ಕಡೆ ಕೂಡ ಕ್ಯಾಲೆಂಡರ್ ಹಾಕಬಾರದು. ಈ ರೀತಿ ಮಾಡುವುದರಿಂದ ಅದು ಇದು ಮನೆಯ ಏಳ್ಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News