Vastu Shastra: ಮನೆ ಮುಂದಿನ ಈ 5 ವಸ್ತುಗಳನ್ನು ಇಂದೇ ತೆಗೆಯಿರಿ, ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ!

ನಿಮ್ಮ ಮನೆಯಲ್ಲಿ ಯಾರಾದರೂ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ಕೈಯಲ್ಲಿ ಹಣ ನಿಲ್ಲದಿದ್ದರೆ ಮನೆಯ ವಾಸ್ತುದೋಷವೇ ಕಾರಣ. ಈ ವಾಸ್ತುದೋಷ ನಿವಾರಣೆಗೆ ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ ನೋಡಿ. 

Written by - Puttaraj K Alur | Last Updated : Sep 8, 2022, 06:25 AM IST
  • ಮನೆಯ ಮುಂಭಾಗ ಮುಳ್ಳಿನ ಗಿಡಗಳನ್ನು ಎಂದಿಗೂ ನೆಡಬಾರದು
  • ವಾಸ್ತುಶಾಸ್ತ್ರದ ಪ್ರಕಾರ ಮನೆ ಮುಂಭಾಗ ವಿದ್ಯುತ್ ಕಂಬ ಇರಬಾರದು
  • ಮನೆಯ ಮುಂಭಾಗ ಕಸದ ರಾಶಿ & ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು
Vastu Shastra: ಮನೆ ಮುಂದಿನ ಈ 5 ವಸ್ತುಗಳನ್ನು ಇಂದೇ ತೆಗೆಯಿರಿ, ಇಲ್ಲದಿದ್ದರೆ ತೊಂದರೆ ತಪ್ಪಿದ್ದಲ್ಲ!   title=
Vastu Shastra Tips for Home

ನವದೆಹಲಿ: ಯಾವುದೇ ಒಬ್ಬ ವ್ಯಕ್ತಿ ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತಾನೆ, ಆದರೂ ಆತನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗುವುದಿಲ್ಲ. ಅವರ ಕುಟುಂಬದಲ್ಲಿ ರೋಗಗಳು ಹೆಚ್ಚಾಗಿ ಕಾಡುತ್ತವೆ. ಮನೆಯವರು ಜಗಳವಾಡುತ್ತಾರೆ ಮತ್ತು ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುತ್ತದೆ. ಈ ರೀತಿ ನನ್ನ ಜೀವನದಲ್ಲಿ ಏಕೆ ನಡೆಯುತ್ತಿದೆ ಎಂದು ಅನೇಕರು ಚಿಂತಿತರಾಗಿರುತ್ತಾರೆ.

ಇದೆಲ್ಲದರಲ್ಲಿ ವ್ಯಕ್ತಿಯ ತಪ್ಪಿರುವುದಿಲ್ಲ, ಆದರೆ ಮನೆಯ ವಾಸ್ತು ದೋಷಗಳೇ ಇದಕ್ಕೆ ಕಾರಣ. ನೀವು ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ, ಇದರ ನಿವಾರಣೆಗೆ ಇಂದು ನಾವು ನಿಮಗೆ 5 ಪರಿಪೂರ್ಣ ಮಾರ್ಗಗಳನ್ನು ಹೇಳಿಕೊಡಲಿದ್ದೇವೆ. ಇದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನೆಯ ಸಂತೋಷದ ವಾತಾವರಣಕ್ಕೆ ಮರಳಬಹುದು. ಆ ಪರಿಹಾರಗಳು ಯಾವುವು ಎಂದು ತಿಳಿಯಿರಿ.

ಮನೆ ಬಳಿ ಮುಳ್ಳಿನ ಗಿಡಗ ನೆಡಬೇಡಿ

ಮನೆಯ ಅಲಂಕಾರದ ದೃಷ್ಟಿಯಿಂದ ವಿವಿಧ ರೀತಿಯ ಸಸಿ-ಗಿಡಗಳನ್ನು ನೆಟ್ಟು ಬೆಳೆಸಲು ಹಲವರು ಇಷ್ಟಪಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮುಳ್ಳಿನ ಗಿಡಗಳನ್ನು ಮನೆಯ ಒಳಗೆ ಅಥವಾ ಮುಖ್ಯ ಬಾಗಿಲಿನ ಮುಂದೆ ನೆಡಬಾರದು. ಈ ರೀತಿ ಮಾಡುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ ಮತ್ತು ಇದು ಜೀವನದ ಹಾದಿಯಲ್ಲಿ ಅನೇಕ ಕಂಟಕಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ನೀವು ಇಂತಹ ಮುಳ್ಳಿನ ಸಸ್ಯಗಳಿಂದ ದೂರವಿದ್ದರೆ ಅದು ಉತ್ತಮ.

ಇದನ್ನೂ ಓದಿ: Dream Predictions: ಈ ರೀತಿಯ ಕನಸು ಬಿದ್ದರೆ, ಪ್ರಮೋಶನ, ಘನತೆ-ಗೌರವ ವೃದ್ಧಿ ಗ್ಯಾರಂಟಿ!

ಮನೆ ಮುಂಭಾಗದ ವಿದ್ಯುತ್ ಕಂಬ ತೆಗೆದುಹಾಕಿ

ನಿಮ್ಮ ಮನೆಯ ಮುಂದೆ ವಿದ್ಯುತ್ ಕಂಬವಿದ್ದರೆ ಆದಷ್ಟು ಬೇಗ ಅದನ್ನು ತೆಗೆಯಿರಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ವಿದ್ಯುತ್ ಕಂಬವಿದ್ದರೆ ವಾಸ್ತು ದೋಷ ಉಂಟಾಗುತ್ತದೆ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯ ಪ್ರವೇಶವನ್ನು ತಡೆಯುತ್ತದೆ. ಇದರಿಂದ ಮನೆಯವರ ನಡುವೆ ವೈಮನಸ್ಸು, ಜಗಳಗಳು ಹೆಚ್ಚಾಗುತ್ತವೆ. ಇದರಿಂದ ಮನೆ ಒಡೆದು ಹೋಗುವ ಪರಿಸ್ಥಿತಿ ಇರುತ್ತದೆ.

ಮನೆ ಮುಂಭಾಗ ರಸ್ತೆಗಿಂತ ಕೆಳಗಿರಬಾರದು

ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆ ಯಾವಾಗಲೂ ಮುಂದೆ ಹಾದುಹೋಗುವ ರಸ್ತೆಗಿಂತ ಎತ್ತರವಾಗಿರಬೇಕು. ನಿಮ್ಮ ಮನೆಯು ಈ ರಸ್ತೆಯ ಕೆಳಗಿದ್ದರೆ, ನಕಾರಾತ್ಮಕ ಶಕ್ತಿಯು ಇದರಲ್ಲಿ ಸೇರಿಕೊಳ್ಳುತ್ತದೆ. ಇದರಿಂದಾಗಿ ಮನೆಯ ತೊಂದರೆಗಳು ಮತ್ತು ಆರ್ಥಿಕ ನಿರ್ಬಂಧಗಳು ಕುಟುಂಬವನ್ನು ತೊಂದರೆಗೊಳಿಸುತ್ತವೆ. ಆದ್ದರಿಂದ ನೀವು ಹೊಸ ಮನೆಯನ್ನು ನಿರ್ಮಿಸಿದಾಗ, ಅದು ಹಲವು ವರ್ಷಗಳವರೆಗೆ ನಿಮ್ಮ ಮನೆ ಮುಂದೆ ಇರುವ ರಸ್ತೆಯ ಕೆಳಗಿರದಂತೆ ನೋಡಿಕೊಳ್ಳಿರಿ.

ಮನೆ ಮುಂದೆ ನೀರು ನಿಲ್ಲಬಾರದು

ನಿಮ್ಮ ಮನೆಯ ಮುಂದೆ ಕೊಳಕು ನೀರು ಸಂಗ್ರಹವಾಗಲು ಬಿಡಬೇಡಿ. ಇಲ್ಲದಿದ್ದರೆ ತಾಯಿ ಲಕ್ಷ್ಮಿದೇವಿ ಎಂದಿಗೂ ಆ ಮನೆಗಳಲ್ಲಿ ನೆಲೆಸುವುದಿಲ್ಲ. ಮನೆಯ ಮುಂದೆ ಕೊಳಕು ನೀರು ಇರುವುದರಿಂದ ಧನಾತ್ಮಕ ಶಕ್ತಿಯ ಹರಿವು ಅಲ್ಲಿ ನಿರ್ಬಂಧಿಸಲ್ಪಡುತ್ತದೆ. ಈ ಕಾರಣದಿಂದ ಕುಟುಂಬವು ಯಾವಾಗಲೂ ಅನಾರೋಗ್ಯ ಮತ್ತು ಆರ್ಥಿಕ ನಿರ್ಬಂಧಗಳ ಕೆಟ್ಟ ಸಮಸ್ಯೆ ಎದುರಿಸುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್ 17 ರಿಂದ ಈ ರಾಶಿಯವರಿಗೆ ಅದೃಷ್ಟ, ಕೈ ಹಾಕಿರುವ ಕೆಲಸದಲ್ಲಿ ಯಶಸ್ಸು ನೀಡಲಿದ್ದಾರೆ ಸೂರ್ಯ ಮತ್ತು ಬುಧ

ಮುಖ್ಯ ದ್ವಾರದ ಮುಂದೆ ಕಸದ ರಾಶಿ

ಪ್ರತಿದಿನ ಬೆಳಿಗ್ಗೆ ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಕಸವನ್ನು ಡಸ್ಟ್‌ಬಿನ್‌ಗೆ ಹಾಕುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ಎಂದಿಗೂ ಸಂಗ್ರಹಿಸಬಾರದು. ಮನೆಯ ಬಾಗಿಲಿನ ಮುಂದೆ ಕಸವನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇಂತಹ ಮನೆಗಳಿಗೆ ತಾಯಿ ಲಕ್ಷ್ಮಿದೇವಿ ಎಂದಿಗೂ ಪ್ರವೇಶಿಸುವುದಿಲ್ಲ. ಇಂತಹ ಪರಿಸ್ಥಿತಿಯು ಕುಟುಂಬದಲ್ಲಿ ಬಡತನವನ್ನು ಆಹ್ವಾನಿಸುತ್ತದೆ. ಇದರೊಂದಿಗೆ ಹಣಕಾಸಿನ ನಷ್ಟ, ವೈಷಮ್ಯ ಮತ್ತು ರೋಗಗಳು ಸಹ ಮನೆಯಲ್ಲಿ ತಮ್ಮ ಸ್ಥಾನ ಪಡೆದುಕೊಳ್ಳುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News