ಶೀಘ್ರದಲ್ಲೇ ಬುಧನ ಅಂಗಳದಲ್ಲಿ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರಿಗೆ ಅಪಾರ ಧನಲಾಭ!

Mars Sun Conjunction In Kanya: ವೈದಿಕ ಜೋತಿಷ್ಯ ಶಾಸ್ತ್ರದ  ಪ್ರಕಾರ ಕನ್ಯಾ ರಾಶಿಯಲ್ಲಿ ಮಂಗಳ ಹಾಗೂ ಸೂರ್ಯನ ಯುತಿ ಶೀಘ್ರದಲ್ಲಿಯೇ ನೆರವೇರಲಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.  

Written by - Nitin Tabib | Last Updated : Aug 26, 2023, 09:11 PM IST
  • ಸೆಪ್ಟೆಂಬರ್ ತಿಂಗಳಿನಲ್ಲಿ ನೆರವೇರಲಿರುವ ಈ ಮೈತ್ರಿಯ ಪ್ರಭಾವ ಮೂರು ರಾಶಿಗಳ ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ.
  • ಇದು ಅವರ ಜೀವನದಲ್ಲಿ ಅಪಾರ ಭಾಗ್ಯೋದಯ ಹಾಗೂ ಧನಲಾಭಕ್ಕೆ ಕಾರಣವಾಗಲಿದೆ.
  • ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,
ಶೀಘ್ರದಲ್ಲೇ ಬುಧನ ಅಂಗಳದಲ್ಲಿ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರಿಗೆ ಅಪಾರ ಧನಲಾಭ! title=

ಬೆಂಗಳೂರು: ಎಲ್ಲಾ ಗ್ರಹಗಳು ಒಂದು ನಿಶ್ಚಿತ ಕಾಲಾತರದಲ್ಲಿ ಗೋಚರಿಸಿ ಅನ್ಯ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ ಮತ್ತು ಅದರ ಪ್ರಭಾವ ಮಾನವ ಸೇರಿದಂತೆ ಪೃಥ್ವಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಹಾಗೂ ಸಾಹಸ ಮತ್ತು ಶೌರ್ಯದ ಕಾರಕ ಗ್ರಹ ಮಂಗಳರ ನಡುವೆ ಕನ್ಯಾ ರಾಶಿಯಲ್ಲಿ ಮೈತ್ರಿ ನೆರವೇರಲಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನೆರವೇರಲಿರುವ ಈ ಮೈತ್ರಿಯ ಪ್ರಭಾವ ಮೂರು ರಾಶಿಗಳ ಜಾತಕದವರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಇದು ಅವರ ಜೀವನದಲ್ಲಿ ಅಪಾರ ಭಾಗ್ಯೋದಯ ಹಾಗೂ ಧನಲಾಭಕ್ಕೆ ಕಾರಣವಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ, 

ಸಿಂಹ ರಾಶಿ: ಸೂರ್ಯ-ಮಂಗಳರ ಈ ಯುತಿ ನಿಮ್ಮ ಗೋಚರ ಜಾತಕಾ ಧನ ಹಾಗೂ ವಾಣಿ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಯುತಿ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಪ್ರಾಪ್ತಿಯಾಗುವ ಎಲ್ಲಾ ಸಾಧ್ಯಎಗಳಿವೆ. ಈ ಅವಧಿಯಲ್ಲಿ ಒಂದು ವೇಳೆ ನೀವು ಯಾವುದಾದರೊಂದು ಯೋಜನೆಯನ್ನು ಆರಂಭಿಸಲು ಯೋಚಿಸುತ್ತಿದ್ದರೆ, ನಿಮಗೆ ಉತ್ತಮ ಲಾಭವಾಗಲಿದೆ. ವ್ಯಾಪಾರಿಗಳು ನೀಡಿದ ಉದ್ರಿ ಅಥವಾ ಎರವಲು ಅವರಿಗೆ ವಾಪಸ್ಸು ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ನಿಮಗೆ ನೋಡಲು ಸಿಗಲಿದೆ. ಅದರಿಂದ ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. 

ಮಿಥುನ ರಾಶಿ: ಮಂಗಳ ಹಾಗೂ ಸೂರ್ಯರ ಈ ಯುತಿ ನಿಮಗೆ ಅನುಕೂಲಕರವಾಗಿದೆ. ಈ ಯುತಿ ನಿಮ್ಮ ಗೋಚರ ಜಾತಕದ ಚತುರ್ಥಭಾವದಲ್ಲಿ ರೂಪುಗೊಳ್ಳುತ್ತಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ವಾಹನ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಯಾತ್ರೆಗಳು ಯಶಸ್ವಿಯಾಗಲಿವೆ ಮತ್ತು ನಿಮಗೆ ಉತ್ತಮ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಾಯಿಯ ಬೆಂಬಲ ಸಿಗಲಿದೆ. ರಿಯಲ್ ಎಸ್ಟೇಟ್ ಅಥವಾ ಆಸ್ತಿ-ಪಾಸ್ತಿಗೆ ಸಂಬಂಧಿಸಿದಂತೆ ನೀವು ವ್ಯವಹಾರ ಮಾಡುತ್ತಿದ್ದರೆ. ನಿಮಗೆ ಅಪಾರ ಧನಲಾಭವಾಗಲಿದೆ.

ಇದನ್ನೂ ಓದಿ-ರಕ್ಷಾಬಂಧನದ ದಿನ ಪೂರ್ವಾಫಾಲ್ಗುಣಿ ನಕ್ಷತ್ರಕ್ಕೆ ಸೂರ್ಯನ ಪ್ರವೇಶ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಹಣದ ಸುರಿಮಳೆ!

ಧನು ರಾಶಿ: ಮಂಗಳ ಹಾಗೂ ಸೋರ್ಯರ ಮೈತ್ರಿ ನಿಮ್ಮ ಪಾಲಿಗೆ ಲಾಭದಾಯಕವಾಗಿದೆ. ಇದು ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳಲಿದೆ. ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ವೃತ್ತಿ ಜೀವನಾದ ಕ್ಷೇತ್ರದಲ್ಲಿ ವೃದ್ಧಿಯ ಸಂಕೇತಗಳಿವೆ. ಹೊಸ ನೌಕರಿಯ ಹುಡುಕಾಟದಲ್ಲಿ ತೊಡಗಿರುವವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಧಿಕ ಧನಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. 

ಇದನ್ನೂ ಓದಿ-ವಕ್ರ ಭಾವದಲ್ಲಿ 'ಮಹಾ ವಿಪರೀತ ರಾಜಯೋಗ' ರೂಪಿಸಿದ ಗ್ರಹಗಳ ರಾಜಕುಮಾರ, ಈ ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News