ಲಕ್ಷ್ಮಿ-ನಾರಾಯಣರ ಕೃಪೆ ಸದಾ ನಿಮ್ಮ ಮನೆಯ ಮೇಲೆ ಇರಬೇಕೆ? ಮನೆಯಲ್ಲಿರಲಿ ಈ ಸಸ್ಯಗಳು

Plant For Money: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುವ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಕೃಪಾಶಿರ್ವಾದವು ಕೂಡ ಲಭಿಸುತ್ತದೆ. 

Written by - Nitin Tabib | Last Updated : Feb 16, 2023, 10:40 PM IST
  • ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ.
  • ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ.
  • ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ.
ಲಕ್ಷ್ಮಿ-ನಾರಾಯಣರ ಕೃಪೆ ಸದಾ ನಿಮ್ಮ ಮನೆಯ ಮೇಲೆ ಇರಬೇಕೆ? ಮನೆಯಲ್ಲಿರಲಿ ಈ ಸಸ್ಯಗಳು title=
ಲಕ್ಷ್ಮಿ ನಾರಾಯಣ ಕೃಪೆಗೆ ಈ ಸಸ್ಯಗಳು ನಿಮ್ಮ ಮನೆಯಲ್ಲಿರಲಿ

Plant For Money: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುವ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಕೃಪಾಶಿರ್ವಾದವು ಕೂಡ ಲಭಿಸುತ್ತದೆ. ಈ ಸಸ್ಯಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಈ ಸಸ್ಯಗಳು ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ಕೂಡ ಈ ಸಸ್ಯಗಳನ್ನು ನೆಡಲು ಸಲಹೆ ನೀಡಲಾಗುತ್ತದೆ. 

ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ
ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ. 

1. ಅರಿಶಿಣ ಗಿಡ- ವಾಸ್ತು ಶಾಸ್ತ್ರದಲ್ಲಿ ತುಳಸಿಯಂತೆಯೇ ಅರಿಶಿಣ ಗಿಡ ನೆಡುವ ಸಲಹೆಯನ್ನು ಕೂಡ ನೀಡಲಾಗುತ್ತದೆ. ಈ ಗಿಡ ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತವೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತವೆ. ವಿವಾಹದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಈ ಸಸ್ಯ ನಿವಾರಿಸುತ್ತದೆ. ನಿಯಮಿತ ರೂಪದಲ್ಲಿ ಅರಿಶಿಣ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬೃಹಸ್ಪತಿಯ ಸ್ಥಾನಕ್ಕೆ ಬಲ ಸಿಗುತ್ತದೆ.

ಇದನ್ನೂ ಓದಿ-Mahashivratri: ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿಪಡೆಯಲು ಈ ಉಪಾಯ ಮಾಡಿ!

2. ಶಮಿ ವೃಕ್ಷ- ಶನಿದೇವರಿಗೆ ಶಮಿ ವೃಕ್ಷ ತುಂಬಾ ಇಷ್ಟ. ಶನಿದೇವರನ್ನು ಪ್ರಸನ್ನಗೊಳಿಸಲು ನಿಯಮಿತವಾಗಿ ಈ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಮನೆಯಿಂದ ಹೊರಹೋಗುವಾಗ ಬಲಭಾಗದಿಂದ ಈ ಗಿಡದ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಉತ್ತಮ ರೀತಿಯಲ್ಲಿ ಕಳೆಯುತ್ತದೆ.

ಇದನ್ನೂ ಓದಿ-ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಉದಯ, ತ್ರಿಕೋನ ರಾಜಯೋಗದಿಂದ 3 ರಾಶಿಗಳ ಭಾಗ್ಯೋದಯ!

3. ದಾಸವಾಳದ ಗಿಡ- ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ದಾಸವಾಳ ಗಿಡ ನೆಡುವುದರಿಂದ ವ್ಯಕ್ತಿಯ ಜಾತಕದಲ್ಲಿನ ಮಂಗಳದೋಷದಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜಾತಕದಲ್ಲಿ ಸೂರ್ಯನ ಸ್ಥಿತಿಗೆ ಬಲ ಸಿಗುತ್ತದೆ. ಜೀವನದಲ್ಲಿ ಬರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮನೆಯಲ್ಲಿ ದಾಸವಾಳ ಗಿಡ ನೆಡಲು ಸಲಹೆಯನ್ನು ನೀಡಲಾಗುತ್ತದೆ. 

ಇದನ್ನೂ ಓದಿ-Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ!​

4. ದಾಳಿಂಬೆ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಫಲದಾಯಿ ಸಾಬೀತುಪಡಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಹಲವು ರೀತಿಯ ಗ್ರಹ ದೋಷಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜೇನು ತುಪ್ಪದಲ್ಲಿ ದಾಳಿಂಬೆಯ ಹೂವುಗಳನ್ನು ಅದ್ದಿ ಶಿವನಿಗೆ ಅರ್ಪಿಸಬೇಕು. ಇದರಿಂದ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News