IND vs ZIM 1st T20 Highlights: ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ಧ T20 ಸರಣಿ ಆಡುತ್ತಿರುವ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. 116 ರನ್’ಗಳ ಗುರಿ ಬೆನ್ನಟ್ಟಿದ ಭಾರತದ ಬ್ಯಾಟ್ಸ್‌ಮನ್’ಗಳು ಕೇವಲ 102 ರನ್’ಗಳಿಗೆ ಆಲೌಟ್ ಆದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ
ಜಿಂಬಾಬ್ವೆಯಂತಹ ತಂಡದ ವಿರುದ್ಧ ಸೋಲುವ ಮೂಲಕ ಯುವ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಗರಂ ಆಗಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿತ್ತು. ದೇಶಾದ್ಯಂತ ಭಾರೀ ಸಂಭ್ರಮಾಚರಣೆ ನಡೆದಿತ್ತು, ಆದರೆ ಜಿಂಬಾಬ್ವೆ ವಿರುದ್ಧದ ಈ ಸೋಲು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಸದ್ಯ 5 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ 1-0 ಮುನ್ನಡೆ ಸಾಧಿಸಿದೆ.
ಆಯ್ಕೆಗಾರರು ಜಿಂಬಾಬ್ವೆ ವಿರುದ್ಧ ಯುವ ಆಟಗಾರರಿಗೆ ಅವಕಾಶ ನೀಡಿದ್ದರು, ಆದರೆ ಮೊದಲ ಪಂದ್ಯದಲ್ಲೇ ಯುವ ಆಟಗಾರರು ವಿಫಲರಾಗಿದ್ದು, ಇದೇನಾ ಟೀಂ ಇಂಡಿಯಾ ಭವಿಷ್ಯ ಎಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಐಪಿಎಲ್’ನಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಚೊಚ್ಚಲ ಪಂದ್ಯಗಳಲ್ಲೇ ವಿಫಲವಾಗಿದ್ದಾರೆ,
ಇದನ್ನೂ ಓದಿ: ಟಿ20 ವಿಶ್ವಕಪ್ ವಿಜಯೋತ್ಸವದ ಬಳಿಕ ಬಾಲ್ಯದ ಕೋಚ್ ಭೇಟಿಯಾದ ವಿರಾಟ್!
ಜಿಂಬಾಬ್ವೆಯನ್ನು 115 ರನ್’ಗಳಿಗೆ ಸೀಮಿತಗೊಳಿಸಿದ ಭಾರತಕ್ಕೆ ಗೆಲುವು ತನ್ನದೇ ಎಂಬ ಭರವಸೆ ಮೂಡಿತ್ತು. ಆದರೆ ಅಪಾಯಕಾರಿ ಬ್ಯಾಟ್ಸ್ ಮನ್’ಗಳಿಂದ ತುಂಬಿದ್ದ ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಪ್ಲಾಪ್ ಆಗಿತ್ತು. ಶುಭಮನ್ ಗಿಲ್ (31 ರನ್) ಮತ್ತು ವಾಷಿಂಗ್ಟನ್ ಸುಂದರ್ (27 ರನ್) ಬಿಟ್ಟರೆ ಬೇರೆ ಯಾರೂ ಹೆಚ್ಚು ಹೊತ್ತು ಕ್ರೀಸ್’ನಲ್ಲಿ ಉಳಿಯಲಿಲ್ಲ. ಒಂದು ಸಮಯದಲ್ಲಿ ಭಾರತದ 6 ಬ್ಯಾಟ್ಸ್‌ಮನ್’ಗಳು 47 ರನ್’ಗಳಿಗೆ ಪೆವಿಲಿಯನ್;ಗೆ ಮರಳಿದ್ದರು. ವಾಷಿಂಗ್ಟನ್ ಸುಂದರ್ ಅವರಿಂದ ತಂಡವು ನಿರೀಕ್ಷೆ ಹೊಂದಿತ್ತಾದರೂ, ಇನ್ನೊಂದು ತುದಿಯಿಂದ ಬೀಳುವ ವಿಕೆಟ್’ಗಳ ನಡುವೆ ಅವರು ಸಹ ಕೈಚೆಲ್ಲಿ ಕೂರುವ ಪರಿಸ್ಥಿತಿಗೆ ಬಂದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ