Asia Cup 2022 ರಲ್ಲಿ ಹೆಚ್ಚು ರನ್ ಗಳಿಸಿದ್ದು ರೋಹಿತ್-ವಿರಾಟ್ ಅಲ್ಲ, ಈ ಆಟಗಾರ!

ಇಂದು ನಾವು ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಮಾಹಿತಿ ತಂದಿದ್ದೇವೆ. ಹೌದು, ಈ ಪಟ್ಟಿಯಲ್ಲಿ ಭಾರತದ ಇಬ್ಬರು ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ.

Written by - Channabasava A Kashinakunti | Last Updated : Sep 4, 2022, 03:04 PM IST
  • ಏಷ್ಯಾ ಕಪ್ ಮೊದಲ ಬಾರಿ 1984 ರಲ್ಲಿ ಪ್ರಾರಂಭ
  • ಭಾರತ ತಂಡ 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದೆ
  • ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಮಾಹಿತಿ
Asia Cup 2022 ರಲ್ಲಿ ಹೆಚ್ಚು ರನ್ ಗಳಿಸಿದ್ದು ರೋಹಿತ್-ವಿರಾಟ್ ಅಲ್ಲ, ಈ ಆಟಗಾರ! title=

Asia Cup 2022 : ಏಷ್ಯಾ ಕಪ್ ಮೊದಲ ಬಾರಿ 1984 ರಲ್ಲಿ ಪ್ರಾರಂಭವಾಯಿತು. ಭಾರತ ತಂಡ ಅತಿ ಹೆಚ್ಚು ಅಂದರೆ, 7 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಹಾಗೆ, ಶ್ರೀಲಂಕಾ ಐದು ಬಾರಿ ಮತ್ತು ಪಾಕಿಸ್ತಾನ ತಂಡ ಎರಡು ಬಾರಿ ಏಷ್ಯಾಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಏಷ್ಯಾ ಆಗಸ್ಟ್ 27 ರಿಂದ ಆರಂಭವಾಗಿದೆ. ಇಂದು ನಾವು ಏಷ್ಯಾಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಮಾಹಿತಿ ತಂದಿದ್ದೇವೆ. ಹೌದು, ಈ ಪಟ್ಟಿಯಲ್ಲಿ ಭಾರತದ ಇಬ್ಬರು ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ.

1. ಸನತ್ ಜಯಸೂರ್ಯ

ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಹೆಸರಿನಲ್ಲಿದೆ. ಜಯಸೂರ್ಯ ಈ ಟೂರ್ನಿಯ 25 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 1220 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ 53 ಕ್ಕಿಂತ ಹೆಚ್ಚು. ಈ ಅವಧಿಯಲ್ಲಿ ಅವರು 6 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ : IND vs Pak : ಪಾಕ್ ವಿರುದ್ಧ ಈ ಇಬ್ಬರು ಆಟಗಾರ ಬಗ್ಗೆ ಎಚ್ಚರಿವಹಿಸಬೇಕಾಗಿದೆ ಕ್ಯಾಪ್ಟನ್ ರೋಹಿತ್!

2. ಕುಮಾರ್ ಸಂಗಕ್ಕಾರ

ಶ್ರೀಲಂಕಾದ ಧಕದ್ ಕುಮಾರ್ ಸಂಗಕ್ಕಾರ ಅವರು ಏಷ್ಯಾಕಪ್‌ನ 23 ಪಂದ್ಯಗಳಲ್ಲಿ 1075 ರನ್ ಗಳಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕುಮಾರ ಸಂಗಕ್ಕರ್ ಶ್ರೀಲಂಕಾ ತಂಡದ ನಾಯಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದ್ದಾರೆ.

3. ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ. 23 ಪಂದ್ಯಗಳಲ್ಲಿ 971 ರನ್ ಗಳಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ರನ್ ಗಳಿಸಿದ್ದಲ್ಲದೆ 17 ವಿಕೆಟ್ ಪಡೆದಿದ್ದಾರೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ದಾಖಲಿಸಿದ್ದಾರೆ.

4. ಶೋಯೆಬ್ ಮಲಿಕ್

ಶೋಯೆಬ್ ಮಲಿಕ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ಬ್ಯಾಟ್ಸ್‌ಮನ್. ಏಷ್ಯಾಕಪ್‌ನ 21 ಪಂದ್ಯಗಳಲ್ಲಿ 907 ರನ್ ಗಳಿಸಿದ್ದಾರೆ. ಶೋಯೆಬ್ ಮಲಿಕ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿಪುಣರಾಗಿದ್ದಾರೆ.

ಇದನ್ನೂ ಓದಿ : Asia Cup 2022: ಪಾಕಿಸ್ತಾನ ವಿರುದ್ಧ ಗೆಲ್ಲಲು ರೋಹಿತ್ ಶರ್ಮಾ ಮಾಸ್ಟರ್ ಪ್ಲಾನ್ ಏನು?

5. ರೋಹಿತ್ ಶರ್ಮಾ

ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು 2018 ರ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಏಷ್ಯಾಕಪ್‌ನ 27 ಪಂದ್ಯಗಳಲ್ಲಿ ರೋಹಿತ್ ಶರ್ಮಾ 883 ರನ್ ಗಳಿಸಿದ್ದಾರೆ. ರೋಹಿತ್ ತಮ್ಮ ಅತ್ಯಂತ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News