ನವದೆಹಲಿ: ಏಷ್ಯಾ ಕಪ್ 2022 ಪ್ರಾರಂಭವಾಗಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ಪಂದ್ಯ ನಡೆಯಿತು. ಮೊದಲ ಪಂದ್ಯದಲ್ಲೇ ದೊಡ್ಡ ವಿವಾದ ಉಂಟಾಗಿದ್ದು, ಲಂಕಾ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಲಂಕಾದ ಬ್ಯಾಟಿಂಗ್ ವೇಳೆ 3ನೇ ಅಂಪೈರ್ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಥರ್ಡ್ ಅಂಪೈರ್ ತೀರ್ಪಿಗೆ ಆಕ್ರೋಶ
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಏಷ್ಯಾ ಕಪ್ 2022ರ ಬಿ ಗುಂಪಿನಲ್ಲಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಪಂದ್ಯದ 2ನೇ ಓವರ್‌ನಲ್ಲಿ ದೊಡ್ಡ ಗದ್ದಲವೇ ನಡೆದಿದೆ. ಶ್ರೀಲಂಕಾ ವಿರುದ್ಧ ಅಫ್ಘಾನ್ ಬಲಗೈ ವೇಗದ ಬೌಲರ್ ನವೀನ್-ಉಲ್-ಹಕ್ 2ನೇ ಓವರ್ ಎಸೆದರು. ಈ ಓವರ್‌ನ ಕೊನೆಯ ಎಸೆತದಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಪಾತುಮ್ ನಿಸಂಕಾ ಅವರನ್ನು ಔಟ್ ಮಾಡಿದರು. ನಂತರ ಮೈದಾನದ ವಿವಾದ ಉಂಟಾಯಿತು.
Guess what.. 3rd umpire is from India🙄 pic.twitter.com/k4YMl25RQL
— ᒶᐡ𝐝♏İし𝑎 💫 (@ludmidench) August 27, 2022
ಇದನ್ನೂ ಓದಿ: Neeraj Chopra: ಮತ್ತೊಂದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ ಡೈಮಂಡ್ ಲೀಗ್ ಚಾಂಪಿಯನ್!
ಕೋಪಕ್ಕೆ ತುತ್ತಾದ ಥರ್ಡ್ ಅಂಪೈರ್!
ನವೀನ್-ಉಲ್-ಹಕ್ ಎಸೆತದಲ್ಲಿ ಬ್ಯಾಟ್ಸ್‌ಮನ್ ಪಾತುಮ್ ನಿಸಂಕಾ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದ್ದರು. ಆದರೆ ಅಂಪೈರ್ ಇದಕ್ಕೆ ತೀರ್ಪು ನೀಡಿರಲಿಲ್ಲ. ಅಂಪೈರ್ ನಿರ್ಧಾರಕ್ಕೆ ವಿರುದ್ಧವಾಗಿ ಅಫ್ಘಾನಿಸ್ತಾನ ತಂಡ ಡಿಆರ್‌ಎಸ್ ತೆಗೆದುಕೊಂಡಿತು. ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿರಲಿಲ್ಲ. ಆದರೆ ಇದನ್ನು ಸರಿಯಾಗಿ ಪರಿಶೀಲಸದೆ 3ನೇ ಅಂಪೈರ್ ಜಯರಾಮನ್ ಮದಗೋಪಾಲ್ ಆಘಾತಕಾರಿ ನಿರ್ಧಾರ ಪ್ರಕಟಿಸಿ ಬ್ಯಾಟ್ಸ್‌ಮನ್‌ನನ್ನು ಔಟ್ ಎಂದು ಘೋಷಿಸಿದರು. ಅಂಪೈರ್‌ನ ಈ ನಿರ್ಧಾರಕ್ಕೆ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತುಕೊಂಡಿದ್ದ ಶ್ರೀಲಂಕಾದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಮತ್ತು ನಾಯಕ ದಸುನ್ ಶನಕ ಕೋಪಗೊಂಡು ಅಸಾಮಾಧಾನ ಹೊರಹಾಕಿದರು. ಅಂಪೈರ್ ಈ ನಿರ್ಧಾರಕ್ಕೆ ಮೈದಾನದಲ್ಲಿದ್ದವರೆಲ್ಲ ಅಚ್ಚರಿ ವ್ಯಕ್ತಪಡಿಸಿದರು. ಅಂಪೈರ್ ಸರಿಯಾಗಿ ಪರಿಶೀಲಿಸಿ ತೀರ್ಪು ನೀಡಿಲ್ಲವೆಂದು ಲಂಕಾ ಆಟಗಾರರು ಆಕ್ರೋಶ ಹೊರಹಾಕಿದರು.
ಅಫ್ಘನ್ ಮಾರಕ ಬೌಲಿಂಗ್ ದಾಳಿಗೆ ಲಂಕಾ ತತ್ತರ!
ಏಷ್ಯಾಕಪ್ 2022ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಶ್ರೀಲಂಕಾದ ಯಾವುದೇ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಮೈದಾನದಲ್ಲಿ ನಿಂತು ಆಡಲು ಸಾಧ್ಯವಾಗಲಿಲ್ಲ. ಇಡೀ ತಂಡವೇ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನಿಸ್ತಾನ ಪರ ಫಝಲ್ಹಾಕ್ ಫಾರೂಕಿ 3 ವಿಕೆಟ್ ಪಡೆದು ಮಿಂಚಿದರೆ, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ತಲಾ 2 ವಿಕೆಟ್ ಕಬಳಿಸಿದರು. ಲಂಕಾ ನೀಡಿದ ಸುಲಭ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ ಗೆದ್ದು ಸಂಭ್ರಮಿಸಿತು.
ಇದನ್ನೂ ಓದಿ: Asia Cup 2022: ಭಾರತ-ಪಾಕ್ ಕ್ರಿಕೆಟ್ ಪಂದ್ಯವನ್ನು ನೀವು ಉಚಿತವಾಗಿ ನೋಡಬಹುದು: ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.