“ಆತ ಮೂರ್ಖ. ಅನರ್ಹ ಮತ್ತು ಅಯೋಗ್ಯ”: 20 ತಿಂಗಳ ಬಳಿಕ ತಂಡಕ್ಕೆ ಮರಳಿದ ಸ್ಟಾರ್ ಸ್ಪಿನ್ನರ್ ಬಗ್ಗೆ ಮಾಜಿ ಕ್ರಿಕೆಟರ್ ಕಮೆಂಟ್!

Laxman Sivaramakrishnan on R Ashwin: ಅಶ್ವಿನ್ ಆಯ್ಕೆ ಸಮಂಜಸವಲ್ಲ, ಸುಂದರ್’ಗೆ ಆ ಅವಕಾಶ ನೀಡಬೇಕಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದರು.

Written by - Bhavishya Shetty | Last Updated : Oct 4, 2023, 05:40 PM IST
    • ಭಾರತ 12 ವರ್ಷಗಳ ಬಳಿಕ ಟ್ರೋಫಿ ಗೆಲ್ಲಲು ಭರ್ಜರಿ ತಯಾರಿ ನಡೆಸಿದೆ
    • ಅಕ್ಸರ್ ಪಟೇಲ್ ಬದಲಿಗೆ, ಆರ್ ಅಶ್ವಿನ್ ಅವರಿಗೆ ಸ್ಥಾನ ನೀಡಲಾಗಿದೆ
    • ಈ ನಿರ್ಧಾರದ ವಿರುದ್ಧ ಅನೇಕ ಕ್ರಿಕೆಟ್ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದರು
“ಆತ ಮೂರ್ಖ. ಅನರ್ಹ ಮತ್ತು ಅಯೋಗ್ಯ”: 20 ತಿಂಗಳ ಬಳಿಕ ತಂಡಕ್ಕೆ ಮರಳಿದ ಸ್ಟಾರ್ ಸ್ಪಿನ್ನರ್ ಬಗ್ಗೆ ಮಾಜಿ ಕ್ರಿಕೆಟರ್ ಕಮೆಂಟ್! title=
World Cup 2023

Laxman Sivaramakrishnan on R Ashwin: ಇನ್ನೇನು ಮೂರು ದಿನಗಳಲ್ಲಿ ವಿಶ್ವಕಪ್ 2023ರ ಮಹಾಟೂರ್ನಿ ಪ್ರಾರಂಭವಾಗಲಿದೆ, ಆತಿಥ್ಯ ವಹಿಸಿರುವ ಭಾರತ 12 ವರ್ಷಗಳ ಬಳಿಕ ಟ್ರೋಫಿ ಗೆಲ್ಲಲು ಭರ್ಜರಿ ತಯಾರಿ ನಡೆಸಿದೆ. ಇನ್ನು ವಿಶ್ವಕಪ್’ಗಾಗಿ ಟೀಂ ಇಂಡಿಯಾ ಮೊದಲ ಬಾರಿ ತಂಡ ಪ್ರಕಟ ಮಾಡಿತ್ತು. ಆದರೆ ಆ ಬಳಿಕ ಪರಿಷ್ಕೃತ ತಂಡವನ್ನು ಮರುಪ್ರಕಟ ಮಾಡಿ, ಅಕ್ಸರ್ ಪಟೇಲ್ ಬದಲಿಗೆ, ಆರ್ ಅಶ್ವಿನ್ ಅವರಿಗೆ ಸ್ಥಾನ ನೀಡಲಾಗಿದೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ: Virat Kohli: ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡ ಬಿಟ್ಟು ಹೊರನಡೆದ ವಿರಾಟ್ ಕೊಹ್ಲಿ!

ಇನ್ನು ಟೀಂ ಇಂಡಿಯಾ ಮಂಡಳಿಯ ಈ ನಿರ್ಧಾರದ ವಿರುದ್ಧ ಅನೇಕ ಕ್ರಿಕೆಟ್ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿದ್ದರು, ಈ ಹಿಂದೆ, ಅಶ್ವಿನ್ ಆಯ್ಕೆ ಸಮಂಜಸವಲ್ಲ, ಸುಂದರ್’ಗೆ ಆ ಅವಕಾಶ ನೀಡಬೇಕಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದರು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ

2017ರ ಬಳಿಕ 2022ರಲ್ಲಿ, ಆ ನಂತರ 2023ರ ಆಸ್ಟ್ರೇಲಿಯಾ ಎದುರು ಏಕದಿನ ಕ್ರಿಕೆಟ್​’ಗೆ ಮರಳಿರುವ ಅಶ್ವಿನ್ ಬಗ್ಗೆ, ಮೂರ್ಖ ಮತ್ತು ಅಯೋಗ್ಯ ಎಂದು ಹೇಳಿಕೆ ನೀಡುವ ಮೂಲಕ ಕಿಡಿಕಾರಿದ್ದಾರೆ. ಇದೀಗ ಲಕ್ಷ್ಮಣ್ ಶಿವರಾಮಕೃಷ್ಣನ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.

ಮೊದಲ ಬಾರಿ ಪ್ರಕಟಗೊಂಡ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿರಲಿಲ್ಲ. ಆದರೆ ಆ ಬಳಿಕ ಪ್ರಕಟಿಸಿದ ಪಟ್ಟಿಯಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ಮೂಲಕ 20 ತಿಂಗಳ ನಂತರ ಏಕದಿನ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆದಿದ್ದಾರೆ.

“ವಿದೇಶಿ ಪಿಚ್​​’ಗಳಲ್ಲಿ ಅವರ ದಾಖಲೆಗಳು ಹೇಗಿವೆ ನೋಡಿ..”

“ಭಾರತದ ಆಟಗಾರರು ನಮ್ಮ ಪಿಚ್’​​ಗಳಲ್ಲಿ ಆಡಲು ಪರದಾಡುತ್ತಿದ್ದಾರೆ. ಏಕೆಂದರೆ ಈ ಪಿಚ್’​ಗಳನ್ನು ಅಶ್ವಿನ್ ಟೆಸ್ಟ್’​​ನಲ್ಲಿ ವಿಕೆಟ್ ಪಡೆಯಲು ವಿನ್ಯಾಸಗೊಳಿಸಲಾಗಿದೆ” ಎಂದು ಶಿವರಾಮಕೃಷ್ಣನ್ ವ್ಯಂಗ್ಯವಾಡಿದ್ದಾರೆ. “ಅವರು ಭಾರತದ ಯಾವುದೇ ಮೈದಾನದ ಪಿಚ್’​​​ನಲ್ಲಿ ವಿಕೆಟ್​ ಪಡೆಯಬಹುರು. ಆದರೆ ವಿದೇಶಿ ಪಿಚ್​​’ಗಳಲ್ಲಿ ಅವರ ದಾಖಲೆಗಳು ಹೇಗಿವೆ ಎಂದು ನೋಡಿ. ನೇರವಾಗಿ ವಿಮಾನ ನಿಲ್ದಾಣದಿಂದ ಗ್ರೌಂಡ್​ ಸ್ಟಾಫ್ ಬಳಿ ಹೋಗಿ ಎಲ್ಲೆಲ್ಲಿ  ಟ್ಯಾಂಪರ್ ಮಾಡಬೇಕೆಂದು ಹೇಳುತ್ತಾನೆ. ಅದಕ್ಕೆ ತಕ್ಕಂತೆ ಪಿಚ್ ಸಿದ್ಧಪಡಿಸಿಕೊಳ್ಳಲಿದ್ದಾರೆ. ನಾನು ಇದನ್ನು ನಾನು ಹಲವು ಬಾರಿ ಕಣ್ಣಾರೆ ಕಂಡಿದ್ದೇನೆ” ಎಂದು ವಿವಾದದ ಹೇಳಿಕೆ ನೀಡಿದ್ದಾರೆ.

 

 

ಇದನ್ನೂ ಓದಿ: ಆಕಸ್ಮಿಕವಾಗಿ ಸಾಗರ ತೀರದಲ್ಲಿ ಪ್ರತ್ಯಕ್ಷನಾದ ಕಾಡಿನ ರಾಜ, ನೋಡಿ ಜನರ ರಿಯಾಕ್ಷನ್ ಹೇಗಿತ್ತು ಗೊತ್ತಾ

ಇದಷ್ಟೇ ಅಲ್ಲದೆ, ಮಾತು ಮುಂದುವರೆಸಿದ ಶಿವರಾಮಕೃಷ್ಣನ್, “ಭಾರತದ ಪಿಚ್​​’ನಲ್ಲಿ ಯಾವ ಮೂರ್ಖ ಬೇಕಾದರೂ ವಿಕೆಟ್ ಪಡೆಯುತ್ತಾನೆ. ಆತ ಮೂರ್ಖ. ಅನರ್ಹ ಮತ್ತು ಅಯೋಗ್ಯ. ಯಾರೂ ಇಲ್ಲದಕ್ಕೆ ಅಶ್ವಿನ್​’ಗೆ ಅವಕಾಶ ಸಿಕ್ಕಿದೆ. ಫೀಲ್ಡಿಂಗ್ ಸರಿಯಾಗಿಲ್ಲ. ಫಿಟ್​’ನೆಸ್ ಇಲ್ಲ. ಮೋಸ್ಟ್​ ಅನ್​ಫಿಟ್ ಕ್ರಿಕೆಟರ್”​ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News