ಆಕಸ್ಮಿಕವಾಗಿ ಸಾಗರ ತೀರದಲ್ಲಿ ಪ್ರತ್ಯಕ್ಷನಾದ ಕಾಡಿನ ರಾಜ, ನೋಡಿ ಜನರ ರಿಯಾಕ್ಷನ್ ಹೇಗಿತ್ತು ಗೊತ್ತಾ!

Lion On Summer Vacation: ಅಂತರ್ಜಾಲದಲ್ಲಿ ಅಪರೂಪದ ಮತ್ತು ವಿಶಿಷ್ಟವಾದ ಚಿತ್ರವೊಂದು ಪ್ರತ್ಯಕ್ಷವಾಗಿದೆ. ಈ ಚಿತ್ರದಲ್ಲಿ ಏಷ್ಯಾಟಿಕ್ ಸಿಂಹವೊಂದು ಗುಜರಾತ್‌ನ ಜುನಾಗಢ್‌ನ ಅರಬ್ಬಿ ಸಮುದ್ರದ ದಡದಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಈ ನಂಬಲಾಗದ ಚಿತ್ರವನ್ನು @CCFJunagadh ಅವರು 'X' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. (Viral News In Kannada)

Written by - Nitin Tabib | Last Updated : Oct 2, 2023, 02:34 PM IST
  • ಮೋಹನ್ ರಾಮ್ ಮತ್ತು ಇತರರು ಬರೆದ ವರದಿಯನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
  • ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,
  • ಪ್ರಾಣಿ ಪ್ರಿಯರು ಚಿತ್ರ ನೋಡಿ ಮಂತ್ರಮುಗ್ಧರಾಗಿದ್ದಾರೆ.
ಆಕಸ್ಮಿಕವಾಗಿ ಸಾಗರ ತೀರದಲ್ಲಿ ಪ್ರತ್ಯಕ್ಷನಾದ ಕಾಡಿನ ರಾಜ, ನೋಡಿ ಜನರ ರಿಯಾಕ್ಷನ್ ಹೇಗಿತ್ತು ಗೊತ್ತಾ! title=

ಬೆಂಗಳೂರು: ಜನರು ಪ್ರಾಣಿಗಳನ್ನು ಪ್ರೀತಿಸುತ್ತಾರೆ ಆದರೆ ಅವುಗಳನ್ನು ಆಗಾಗ್ಗೆ ನೋಡುವುದು ಅಪರೂಪ. ಕೆಲವು ಜನರು ಅಪಾಯಕಾರಿ ಮತ್ತು ಸಾಮಾನ್ಯವಾಗಿ ಅಪರೂಪವಾಗಿ ಕಾಣುವ ಪ್ರಾಣಿಗಳನ್ನು ನೋಡಲು ಪ್ರಾಣಿಸಂಗ್ರಹಾಲಯಗಳು ಅಥವಾ ಜಂಗಲ್ ಸಫಾರಿಗಳಿಗೆ ತೆರಳುತ್ತಾರೆ. ಆದರೆ, ಈ ಅಪರೂಪದ ಪ್ರಾಣಿಗಳು ಕಾಣದ ಜಾಗಗಳಲ್ಲಿ ಕಾಣಿಸಿಕೊಂಡರೆ, ಎಲ್ಲರಿಗೂ ಅಚ್ಚರಿಯಾಗುತ್ತದೆ. ಇತ್ತೀಚೆಗಷ್ಟೇ ಅಂತರ್ಜಾಲದಲ್ಲಿ ಅಪರೂಪದ ಚಿತ್ರವೊಂದು ಕಾಣಿಸಿಕೊಂಡಿದ್ದು, ಇದರಲ್ಲಿ ಗುಜರಾತ್‌ನ ಜುನಾಗಢ್‌ನ ಅರಬ್ಬಿ ಸಮುದ್ರದ ತೀರದಲ್ಲಿ  ಏಷಿಯಾಟಿಕ್ ಸಿಂಹವೊಂದು ನಿಂತಿರುವುದು ಕಂಡು ಬರುತ್ತಿದೆ. ಈ ನಂಬಲಸಾಧ್ಯ ಚಿತ್ರವನ್ನು @CCFJunagadh ಅವರು 'X' ಎಂಬ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. (Trending News In Kannada)

ಇದನ್ನೂ ಓದಿ-ಶಾಲೆಯಲ್ಲಿ ಹುಡುಗಿಯರ ಮಧ್ಯೆ ಹೊಡೆದಾಟ, ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಟೀಚರಮ್ಮನ ಕತೆ ಏನಾಗಿದೆ ನೀವೇ ನೋಡಿ!

ಸಮುದ್ರ ತೀರದಲ್ಲಿ ತೆರೆಗಳನ್ನು ಎಂಜಾಯ್ ಮಾಡುತ್ತಿರುವ ಸಿಂಹ
ಭಾರಿ ವೈರಲ್ ಆಗುತ್ತಿರುವ ಮತ್ತು ದಿನಾಂಕ ರಹಿತ ಚಿತ್ರದಲ್ಲಿ,  ಸಿಂಹವು ಅರಬ್ಬಿ ಸಮುದ್ರದ ಬಳಿ ನಿಂತು ಸಮುದ್ರದ ಅಲೆಗಳನ್ನು ಆನಂದಿಸುತ್ತಿದೆ. ಅದು ಸಮುದ್ರದಿಂದ ಈಗಷ್ಟೇ ಹೊರಬಂದಂತೆ ತೋರುತ್ತಿದೆ. ಜುನಾಗಢ್‌ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೂಡ 'X' ವೇದಿಕೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ, ಭದ್ರವ ಪೂನಂನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ  ದರ್ಯಾ ಕಾಂಥಾ ಪ್ರದೇಶದಲ್ಲಿ ಸಿಂಹ ಕಾಣಿಸಿಕೊಂಡಿದೆ ಎಂದು ಅದರ ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಕೂಡ ಈ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು ನಾರ್ನಿಯಾ ಜೀವನಕ್ಕೆ ಹೋಲಿಸಿದ್ದಾರೆ. ಗುಜರಾತ್ ಕರಾವಳಿಯುದ್ದಕ್ಕೂ ಅರಬ್ಬಿ ಸಮುದ್ರದ ಅಲೆಯನ್ನು ಆನಂದಿಸುತ್ತಿರುವ ರಾಜನಂತೆ ಸಿಂಹ ಕಾಣುತ್ತಿದೆ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ-Amir Khan ಪುತ್ರಿ Ira Khan ಭಾವೀ ಸಂಗಾತಿಯ ಜೊತೆಗಿನ ವರ್ಕ್ ಔರ್ Video Viral!

ಪೋಸ್ಟ್‌ಗೆ ಜನರ ಪ್ರತಿಕ್ರಿಯೆಗಳು ಹೇಗಿವೆ ನೋಡಿ
"Living on the Beach: The Habitat of the Asiatic Lions" ಎಂಬ ಶೀರ್ಷಿಕೆಯ 'X' ನಲ್ಲಿ ವೈಜ್ಞಾನಿಕ ವರದಿಯೊಂದು ಚರ್ಚೆಯಲ್ಲಿದೆ. ಏಷಿಯಾಟಿಕ್ ಸಿಂಹಗಳ ಆವಾಸಸ್ಥಾನದ ಬಗ್ಗೆ ಮಾಹಿತಿಯನ್ನು ಒದಗಿಸಿದ ಈ ವರದಿಯನ್ನು ಓದಲು ಆಸಕ್ತ ಜನರನ್ನು ಶೀರ್ಷಿಕೆಯು ಪ್ರೋತ್ಸಾಹಿಸಿದೆ. ಮೋಹನ್ ರಾಮ್ ಮತ್ತು ಇತರರು ಬರೆದ ವರದಿಯನ್ನು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ಚಿತ್ರ ನೋಡಿ ಮಂತ್ರಮುಗ್ಧರಾಗಿದ್ದಾರೆ. ಈ ಚಿತ್ರಕ್ಕೆ ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ "ಬೀಚ್ ವೆಕೇಶನ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅದನ್ನು ಹೋಗಲಿ, "ಅದ್ಭುತ! ನಾರ್ನಿಯಾದಲ್ಲಿ ಪ್ರಕೃತಿಯ ಮಾಂತ್ರಿಕ" ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಸಿಂಹವು ಸಮುದ್ರದ ನೀರು ಮತ್ತು ಗಾಳಿಯನ್ನು ಆನಂದಿಸಲು ಸಮರ್ ವೇಕೇಶನ್ ಗಾಗಿ ಬಂದಿರಬಹುದು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News