ನವದೆಹಲಿ: ಶಾರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೇವದತ್ ಪಡಿಕ್ಕಲ್ 40 ಹಾಗೂ ವಿರಾಟ್ ಕೊಹ್ಲಿ 25 ರನ್ ಗಳ ನೆರವಿನಿಂದ ಮೊದಲ ವಿಕೆಟ್ ಗೆ 68 ರನ್ ಗಳ ಜೊತೆಯಾಟವನ್ನು ಆಡಿತು, ಆದರೆ ನಂತರ ಐದು ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಬೆಂಗಳೂರು ತಂಡವು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ಈ ಆಟಗಾರನ IPL ವೃತ್ತಿಜೀವನವೆ ಮುಗಿದಿತ್ತು? ಕೊಹ್ಲಿಯ ಒಂದು ಫೋನ್ ಕರೆಯಿಂದ ಜೀವನವೆ ಬದಲಾಯಿತು
A formidable target on the board, thanks to a solid start from Captain Kohli and DDP and a brilliant partnership between Maxi and AB.🤩
Time for some magic with the ball now. 💪🏻#PlayBold #WeAreChallengers #ನಮ್ಮRCB #IPL2021 #RCBvPBKS pic.twitter.com/JdEq7I3fP7
— Royal Challengers Bangalore (@RCBTweets) October 3, 2021
ಈ ಹಂತದಲ್ಲಿ ಕಣಕ್ಕೆ ಇಳಿದ ಗ್ಲೆನ್ ಮ್ಯಾಕ್ಸ್ ವೆಲ್ (Glen Maxwell) (57) ಹಾಗೂ ಎಬಿಡಿವಿಲಿಯರ್ಸ್ (23) ಅವರ 50 ರನ್ ಗಳ ಜೊತೆಯಾಟದಿಂದಾಗಿ ತಂಡಕ್ಕೆ ಆಸರೆಯಾದರು. ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 33 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡರಿಗಳ ನೆರವಿನಿಂದಾಗಿ 57 ರನ್ ಗಳನ್ನು ಗಳಿಸಿತು. ಆ ಮೂಲಕ ಬೆಂಗಳೂರು ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು.
ಇದನ್ನೂ ಓದಿ: IPL 2021: RCB ತಂಡದ ನಾಯಕರಾಗುವ ಆಟಗಾರರು ಯಾರು ಗೊತ್ತೇ?
ಪಂಜಾಬ್ ಕಿಂಗ್ಸ್ ಪರವಾಗಿ ಮೊಹಮ್ಮದ್ ಶಮಿ ಹಾಗೂ ಮೊಯಿಸೆಸ್ ಹೆನ್ರಿಕ್ಸ್ ತಲಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಬೆಂಗಳೂರು ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.