ಟೀಂ ಇಂಡಿಯಾಗೆ ಬಂಪರ್ ಗಿಫ್ಟ್! ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ಬಹುಮಾನ ಘೋಷಿಸಿದ BCCI

BCCI Prize Money for Team India: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಈ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಐಸಿಸಿಯ ಬಹುಮಾನದ ಮೊತ್ತದೊಂದಿಗೆ ಹೋಲಿಸಿದರೆ, ಈ ಮೊತ್ತವು 6 ಪಟ್ಟು ಹೆಚ್ಚು.

Written by - Bhavishya Shetty | Last Updated : Jun 30, 2024, 09:13 PM IST
    • ಭಾರತೀಯ ಕ್ರಿಕೆಟ್ ತಂಡಕ್ಕೆ ಈಗಾಗಲೇ ಸಾಕಷ್ಟು ಹಣದ ಸುರಿಮಳೆ
    • ಐಸಿಸಿಯಿಂದ 2.45 ಮಿಲಿಯನ್ ಡಾಲರ್ (ಸುಮಾರು 20.42 ಕೋಟಿ ರೂ.) ಬಹುಮಾನ
    • ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 125 ಕೋಟಿ ರೂಪಾಯಿ ಬಹುಮಾನ ಘೋಷಣೆ
ಟೀಂ ಇಂಡಿಯಾಗೆ ಬಂಪರ್ ಗಿಫ್ಟ್! ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ 125 ಕೋಟಿ ಬಹುಮಾನ ಘೋಷಿಸಿದ BCCI title=
Team India

BCCI Prize Money for Team India: 2024ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಈಗಾಗಲೇ ಸಾಕಷ್ಟು ಹಣದ ಸುರಿಮಳೆಯಾಗುತ್ತಿದೆ. ಕಳೆದ ರಾತ್ರಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದ ಟೀಂ ಇಂಡಿಯಾ ಐಸಿಸಿಯಿಂದ 2.45 ಮಿಲಿಯನ್ ಡಾಲರ್ (ಸುಮಾರು 20.42 ಕೋಟಿ ರೂ.) ಬಹುಮಾನ ಪಡೆದಿದೆ. ಇದೀಗ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ.

ಇದನ್ನೂ ಓದಿ: ದುಡ್ಡನ್ನು ಅಯಸ್ಕಾಂತದಂತೆ ಆಕರ್ಷಿಸುತ್ತೆ ಈ ಪುಟ್ಟ ಸಸ್ಯ: ಸೂರ್ಯನ ಬೆಳಕಿಲ್ಲದೆ, ಕಡಿಮೆ ನೀರಿನಲ್ಲಿ ಬೆಳೆಸಬಹುದಾದ ಗಿಡವಿದು

17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಈ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಐಸಿಸಿಯ ಬಹುಮಾನದ ಮೊತ್ತದೊಂದಿಗೆ ಹೋಲಿಸಿದರೆ, ಈ ಮೊತ್ತವು 6 ಪಟ್ಟು ಹೆಚ್ಚು.

ಟೀಂ ಇಂಡಿಯಾ 29 ಜೂನ್ 2024 ರಂದು ಇತಿಹಾಸವನ್ನು ಸೃಷ್ಟಿಸಿದ್ದಲ್ಲದೆ, 17 ವರ್ಷಗಳ ನಂತರ T20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ರೋಮಾಂಚನಕಾರಿ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌’ಗಳಿಂದ ಸೋಲಿಸಿದೆ.

ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ತಂಡಕ್ಕೆ ಬಹುಮಾನದ ಮೊತ್ತವನ್ನು ಪ್ರಕಟಿಸಿ ಹೀಗಂದಿದ್ದಾರೆ. “ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಗೆದ್ದ ಟೀಂ ಇಂಡಿಯಾಕ್ಕೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಲು ಸಂತೋಷವಾಗುತ್ತಿದೆ. ಪಂದ್ಯಾವಳಿಯುದ್ದಕ್ಕೂ ತಂಡವು ಅಸಾಧಾರಣ ಪ್ರತಿಭೆ, ಸಂಕಲ್ಪ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು” ಎಂದಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾ T20 ವಿಶ್ವ ಚಾಂಪಿಯನ್ ಆಗಿದ್ದೇ ತಡ… ಕುಣಿದು ಕುಪ್ಪಳಿಸಿ ಶುಭಕೋರಿದ ಪಾಕ್ ನಟಿಯರು!

ಈ ಗೆಲುವಿನೊಂದಿಗೆ ಭಾರತ ತಂಡ 5ನೇ ಐಸಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಮೂರು ಐಸಿಸಿ ಟೂರ್ನಿಗಳನ್ನು ಗೆದ್ದಿತ್ತು. ಮೊದಲ ICC ಪ್ರಶಸ್ತಿಯನ್ನು 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು ಗೆದ್ದಿತು. ಇದರ ನಂತರ ಧೋನಿ 2007 (ಟಿ20) ಮತ್ತು 2011 (ಒಡಿಐ) ಗೆದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದು, ಇದೀಗ ರೋಹಿತ್ ಶರ್ಮಾ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಂತೆ ಮಾಡಿದ್ದಾರೆ. ರೋಹಿತ್ ಭಾರತಕ್ಕೆ ಐಸಿಸಿ ಟ್ರೋಫಿ ಗೆಲ್ಲುವಂತೆ ಮಾಡಿದ ಮೂರನೇ ಭಾರತೀಯ ನಾಯಕ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News