ನವದೆಹಲಿ: ಇಂದು ಐಪಿಎಲ್ (IPL 2020) ಕ್ರಿಕೆಟ್ನ ಫೈನಲ್ ಪಂದ್ಯ ಆಡಲಾಗುವುದು. ದುಬೈನಲ್ಲಿ ನಡೆಯಲಿರುವ ಐಪಿಎಲ್ ಚಾಂಪಿಯನ್ ಟ್ರೋಫಿಗಾಗಿ ಇಂದು ಸಂಜೆ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಘರ್ಷಣೆ ನಡೆಯಲಿದೆ. ಐಪಿಎಲ್‌ನಲ್ಲಿ ಒಟ್ಟು 8 ತಂಡಗಳು ಆಡುತ್ತವೆ.
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಸನ್‌ರೈಸರ್ಸ್ ಹೈದರಾಬಾದ್ ಅನ್ನು 17 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದೆ ಮೊದಲ ಬಾರಿಗೆ ದೆಹಲಿ ಕ್ಯಾಪಿತಲ್ಸ್ ಐಪಿಎಲ್ ಫೈನಲ್ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಈ ಪಂದ್ಯಾವಳಿಯ ಚಾಂಪಿಯನ್ ಆಗಿದೆ.
ಇದನ್ನು ಓದಿ- ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಶೇನ್ ವಾಟ್ಸನ್!
ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ 20 ಕೋಟಿ ರೂ. ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಆದರೆ, ಈ ಬಾರಿ ಕರೋನಾ ಸಾಂಕ್ರಾಮಿಕದ ಪರಿಣಾಮ ಈ ಚಾಂಪಿಯನ್‌ಶಿಪ್ ನಲ್ಲಿ ಗಮನಿಸಲಾಗುತ್ತಿದೆ. ಈ ಬಾರಿ ಬಹುಮಾನದ ಮೊತ್ತವನ್ನು 10 ಕೋಟಿ ರೂ.ಗೆ ಇಳಿಸಲಾಗಿದೆ. ಅಂದರೆ, ಈ ಬಾರಿ ಚಾಂಪಿಯನ್ ತಂಡಕ್ಕೆ 10 ಕೋಟಿ ಮೊತ್ತ ಸಿಗಲಿದೆ. ಕರೋನಾ ಸಾಂಕ್ರಾಮಿಕದಿಂದಾಗಿ, ಬಿಸಿಸಿಐ ಈ ಖರ್ಚು ಕಡಿತವನ್ನು ಘೋಷಿಸಿದೆ.
ಫೈನಲ್ ನಲ್ಲಿ ಸೋಲುವ ತಂಡಕ್ಕೆ ಈ ಮೊದಲು 12 ಕೋಟಿ ರೂ.ಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ರೂ.6.25 ಕೋಟಿ ರೂ.ಗಳು ಮಾತ್ರ ಸಿಗಲಿವೆ.
ಇದನ್ನು ಓದಿ- IPL 2020: ವೈರಲ್ ಆಗುತ್ತಿದೆ MS Dhoni ಅವರ 'ಸೂಪರ್‌ಮ್ಯಾನ್ ಕ್ಯಾಚ್'- watch video
ಪ್ಲೇ ಆಫ್ ನಲ್ಲಿ ತಲುಪುವ ತಂಡಗಳಿಗೆ ಉತ್ತಮ ಮೊತ್ತ ನೀಡಲಾಗುತ್ತಿತ್ತು. ಪ್ಲೇ ಆಫ್ ನಲ್ಲಿ ಗೆಲ್ಲುವ ಹಾಗು ರನರ್ ಅಪ್ ಆಗುವ ತಂಡಗಳಿಗೆ ಈ ಬಾರಿ 4.35-4.35 ಕೋಟಿ ರೂ. ಬಹುಮಾನದ ರೂಪದಲ್ಲಿ ನೀಡಲಾಗುವುದು. ಇದಕ್ಕೂ ಮೊದಲು ಈ ಮೊತ್ತ 8.37 ಕೋಟಿಯಷ್ಟಿತ್ತು. ಈ ಬಾರಿ ಪ್ಲೇ ಆಫ್ ನಲ್ಲಿ ಆರ್ ಸಿ ಬಿ ಹಾಗೂ ಸನ್ ರೈಸರ್ಸ್ ತಂಡಗಳಿಗೆ ಈ ಮೊತ್ತ ನೀಡಲಾಗುತ್ತಿದೆ.
ಈ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ (ಆರೆಂಜ್ ಕ್ಯಾಪ್) ಹಾಗೂ ಅತಿ ಹೆಚ್ಚು ವಿಕೆಟ್ ಪಡೆಯುವ (ಪರ್ಪಲ್ ಕ್ಯಾಪ್) ಆಟಗಾರನಿಗೂ ಕೂಡ ಉತ್ತಮ ಮೊತ್ತ ನೀಡಲಾಗುತ್ತಿತ್ತು. ಕಳೆದ ಬಾರಿ ಈ ಆಟಗಾರರಿಗೆ ಬಹುಮಾನದ ರೂಪದಲ್ಲಿ 10-10 ಲಕ್ಷ ರೂ. ನೀಡಲಾಗಿತ್ತು. ಈ ಬಾರಿ ಎಷ್ಟು ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.