Dhanashree Verma and Yuzvendra Chahal New Video: ಧನಶ್ರೀ ವರ್ಮಾ ಟಿಕ್ ಟಾಕ್ ತಾರೆಯಾಗಿದ್ದು, Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಷ್ಟೇ ಅಲ್ಲದೆ, ವೀಡಿಯೊಗಳನ್ನು ಶೇರ್ ಮಾಡುವುದರ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಧನಶ್ರೀ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು. ಆಕೆಯ ಮತ್ತು ಪತಿ ಯುಜ್ವೇಂದ್ರ ಚಹಾಲ್ ನಡುವೆ ಏನೋ ಸರಿಯಿಲ್ಲ. ಶೀಘ್ರದಲ್ಲೇ ಇಬ್ಬರೂ ಬೇರೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇಬ್ಬರೂ ಈಗ ಆ ವಿಷಯಕ್ಕೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀ ಕೃಪೆ ಎಂದಿಗೂ ಇರಬೇಕೇ? ಹಾಗಾದ್ರೆ ಚಾಣಕ್ಯನ ಈ ಪ್ರಮುಖ ನೀತಿಯನ್ನು ಪಾಲಿಸಿ
ಇಬ್ಬರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಯುಜುವೇಂದ್ರ ಸಂತೋಷದಿಂದ ನೃತ್ಯ ಮಾಡುತ್ತಿದ್ದಾರೆ.
ಈ ವೀಡಿಯೊದಲ್ಲಿ, ಧನಶ್ರೀ ಯುಜ್ವೇಂದ್ರನಿಗೆ ತಾನು ಒಂದು ತಿಂಗಳ ಕಾಲ ತನ್ನ ತಾಯಿಯ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಇದನ್ನು ಕೇಳಿದ ತಕ್ಷಣ ಯುಜ್ವೇಂದ್ರ ಅವರ ಮುಖ ಅರಳಿ, ಸಂತೋಷದಿಂದ ನೃತ್ಯ ಮಾಡಲು ಪ್ರಾರಂಭಿಸುತ್ತಾರೆ.
ಈ ವಿಡಿಯೋ ಸಾಕಷ್ಟು ಲೈಕ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಜೋಡಿಯ ಈ ವಿಡಿಯೋ ಕಂಡು ಜನರು ಸಾಕಷ್ಟು ಸಂತೋಷವಾಗಿದ್ದರೂ ಅಭಿಮಾನಿಗಳು ಈ ವೀಡಿಯೊಗೆ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ವೆಲ್ಕಮ್ ಬ್ಯಾಕ್ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: Bengaluru Metro : ಶೀಘ್ರದಲ್ಲೇ ಮೊಬೈಲ್ ಮೂಲಕವೇ ಸಿಗಲಿದೆ ನಮ್ಮ ಮೆಟ್ರೋ ಟಿಕೆಟ್
ಬಹಳ ದಿನಗಳಿಂದ ಇಬ್ಬರೂ ಬೇರೆಯಾಗುತ್ತಾರೆ ಎಂಬ ಸುದ್ದಿ ಇತ್ತು. ವಾಸ್ತವವಾಗಿ, ಧನಶ್ರೀ ಇನ್ಸ್ಟಾಗ್ರಾಮ್ನಲ್ಲಿ ತನ್ನ ಹೆಸರಿನಿಂದ ಚಹಲ್ ಉಪನಾಮವನ್ನು ತೆಗೆದುಹಾಕಿದ ತಕ್ಷಣ, ಎಲ್ಲೆಡೆ ಅವರ ನಡುವೆ ದೂರವಾಗುವ ಸುದ್ದಿ ಬರಲು ಪ್ರಾರಂಭಿಸಿತು. ಅದೇ ಸಮಯದಲ್ಲಿ, ನ್ಯೂ ಲೈಫ್ ಲೋಡಿಂಗ್ ಎಂದು ಬರೆಯುವ ಮೂಲಕ ಚಾಹಲ್ ಸಹ ಪೋಸ್ಟ್ ಮಾಡಿದ್ದರು, ಇವೆಲ್ಲವೂ ಅವರ ನಡುವೆ ಏನೋ ತಪ್ಪಾಗಿದೆ ಎಂದು ಭಾವಿಸಲು ಹುರಿದಂಬಿಸಿದಂತಾಗಿತ್ತು. ಸುದ್ದಿ ಬೆಂಕಿಯಂತೆ ಹರಡಲು ಪ್ರಾರಂಭಿಸಿದಾಗ, ಇಬ್ಬರೂ ಮುಂದೆ ಬಂದು ಅದರ ಬಗ್ಗೆ ಸ್ಪಷ್ಟನೆ ನೀಡಿದ್ದರು.ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೆ ನೀಡಿದ್ದರು,
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.