Dhruv Jurel Life Story: ಭಾರತಕ್ಕೆ ವಿಕೆಟ್ ಕೀಪರ್ ಆಗಿ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್ ಇದೀಗ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲೂ ಅದ್ಭುತವಾಗಿ ಆಡುತ್ತಿದ್ದಾರೆ. ಕಳೆದ ದಿನ ಭಾರತ ನಾಲ್ಕನೇ ಟೆಸ್ಟ್ ಸರಣಿ ಗೆಲ್ಲುವಲ್ಲೂ ಧ್ರುವ್ ಪಾತ್ರ ಅಪಾರವಾಗಿತ್ತು.
ಇದನ್ನೂ ಓದಿ: ಈ 4 ರಾಶಿಗಳಿಗೆ ಮಾರ್ಚ್ ತಿಂಗಳೇ ವರದಾನ: ಸುಖದ ಸುಪ್ಪತ್ತಿಗೆಯಲ್ಲೇ ಬಾಳುವರು… ಕೈಯಿಟ್ಟರೆ ಸಾಕು ಗೆಲುವು ಇವರದ್ದೇ!
ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 149 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 90 ರನ್ ಗಳಿಸಿ ಟೀಂ ಇಂಡಿಯಾ 300 ರನ್ ಗಡಿ ದಾಟುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ದೊಡ್ಡ ಲೆಜೆಂಡ್’ಗಳು ಸಹ ಔಟಾಗಿ ಪೆವಿಲಿಯನ್’ಗೆ ಮರಳುತ್ತಿದ್ದ ಸಮಯದಲ್ಲಿ ಜುರೆಲ್ ಭಾರತದ ಪರ ಗಟ್ಟಿಯಾಗಿ ನಿಂತರು.
ಅಂದಹಾಗೆ ಟೀಂ ಇಂಡಿಯಾಗೆ ಇವರ ಪದಾರ್ಪಣೆ ಹೂವಿನ ಹಾಸಿಗೆಯಂತು ಖಂಡಿತ ಅಲ್ಲ. ಉತ್ತರ ಪ್ರದೇಶದ ಆಗ್ರಾದಿಂದ ಬಂದಿರುವ ಜುರೆಲ್ ಅವರ ತಂದೆ ನೇಮ್ ಸಿಂಗ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ತಮ್ಮ ಮಗ ತನ್ನ ಹೆಜ್ಜೆಯನ್ನು ಅನುಸರಿಸಿ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂದು ಅವರ ಬಯಕೆಯಾಗಿತ್ತು.
ಆದರೆ ಜುರೆಲ್ ಅವರ ಕ್ರಿಕೆಟ್ ಉತ್ಸಾಹವು ಅವರನ್ನು ಬೇರೆಡೆಗೆ ಕರೆದೊಯ್ಯಲು ಬಯಸಿತು. ತಂದೆ ನೀಮ್ ಸಿಂಗ್ ಅವರಿಗೆ ಮಗ ಕ್ರಿಕೆಟ್ ಆಡುವುದು ಇಷ್ಟವಿರಲಿಲ್ಲ. ಆದರೆ ಜುರೆಲ್ ತನ್ನ ಇಚ್ಛೆಯಂತೆ ಕ್ರಿಕೆಟ್ ಕಡೆ ಗಮನ ನೀಡಿದರು. ಇನ್ನು ಕಿಟ್ ಖರೀದಿಸಲು ಕೂಡ ಧ್ರುವ್ ಬಳಿ ಹಣವಿರಲಿಲ್ಲ. ಆ ಸಂದರ್ಭದಲ್ಲಿ ತಾಯಿ ಆಭರಣಗಳನ್ನು ಮಾರಿ ಕ್ರಿಕೆಟ್ ಕಿಟ್ ಖರೀದಿಸಿದ್ದರಂತೆ.
ಕ್ರಿಕೆಟ್ ಮೇಲಿನ ಉತ್ಸಾಹವು ಧ್ರುವ್ ಅವರನ್ನು ಕೇವಲ 13 ನೇ ವಯಸ್ಸಿನಲ್ಲಿ ಆಗ್ರಾದಿಂದ ನೋಯ್ಡಾಕ್ಕೆ ಕರೆತಂದಿತು. ಮಾಧ್ಯಮ ವರದಿಗಳ ಪ್ರಕಾರ, ಧ್ರುವ್ ಅವರ ತಾಯಿ ಕೂಡ ಅವರೊಂದಿಗೆ ನೋಯ್ಡಾದಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಇಂದಿನ ರಾಶಿಭವಿಷ್ಯ: ಈ ರಾಶಿಯವರಿಗೆ ಇಂದು ಯಶಸ್ಸು ತುಂಬಿದ ದಿನ, ವ್ಯಾಪಾರದಲ್ಲಿ ಊಹೆ ಮೀರಿದ ಲಾಭ!
ಧ್ರುವ್ ಅವರು ರಾಜ್ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಟೆಸ್ಟ್’ನಲ್ಲಿ ಭಾರತದ ಪರ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಪ್ರವೇಶ ಮಾಡಿದ್ದಾರೆ. ರಾಂಚಿಯಲ್ಲಿ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.