ಡಿಕೆ ಜೊತೆ ಪಾಂಡ್ಯ ವರ್ತನೆ ಸರಿಯೇ..? ಟ್ರೋಲ್‌ಗೆ ಗುರಿಯಾದ ಹಾರ್ದಿಕ್‌!

ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡದಿದ್ದರೂ, ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ವಿಶೇಷವಾಗಿ ಏನನ್ನೂ ಸಾಧಿಸಲಿಲ್ಲ.  ಕೇವಲ 2 ರನ್‌ ಗಳಿಸಲಷ್ಟೇ ಸಶಕ್ತರಾದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಪಗೊಂಡು, ದಿನೇಶ್ ಕಾರ್ತಿಕ್‌ರನ್ನು ಗೌರವಿಸದಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. 

Written by - Bhavishya Shetty | Last Updated : Jun 10, 2022, 01:56 PM IST
  • ಟ್ರೋಲ್‌ಗೆ ಗುರಿಯಾದ ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ
  • ದಿನೇಶ್ ಕಾರ್ತಿಕ್ ಜೊತೆ ವರ್ತಿಸಿದ ರೀತಿಗೆ ಫ್ಯಾನ್ಸ್‌ ಕೋಪ
  • ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಲು ಪ್ರಾರಂಭಿದ ಕ್ರಿಕೆಟ್‌ ಪ್ರೇಮಿಗಳು
ಡಿಕೆ ಜೊತೆ ಪಾಂಡ್ಯ ವರ್ತನೆ ಸರಿಯೇ..? ಟ್ರೋಲ್‌ಗೆ ಗುರಿಯಾದ ಹಾರ್ದಿಕ್‌!  title=
Hardik Pandya Troll

ಟೀಂ ಇಂಡಿಯಾದ ಆಲ್‌ರೌಂಡ್‌ ಆಟಗಾರ ಹಾರ್ದಿಕ್ ಪಾಂಡ್ಯ ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತೋರಿದ ವರ್ತನೆಯಿಂದ ತೀವ್ರ ಟ್ರೋಲ್‌ಗೀಡಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಸಮಯದಲ್ಲಿ ಸಹ-ಆಟಗಾರ ದಿನೇಶ್ ಕಾರ್ತಿಕ್ ಜೊತೆ ವರ್ತಿಸಿದ ರೀತಿ ಅಭಿಮಾನಿಗಳಿಗೆ ತೀವ್ರ ನಿರಾಶೆಯನ್ನು ಮೂಡಿಸಿದೆ.  

ಇದನ್ನೂ ಓದಿ: Ind vs SA : ಟಿ20 ಸರಣಿಯಲ್ಲಿ ಅನುಭವಿಗಳ ಭವಿಷ್ಯ : ಆಫ್ರಿಕನ್ ಗಳಿಗೆ ಮಾರಕವಾಗಲಿದ್ದಾರೆ ಈ ಆಟಗಾರ!

ಟೀಂ ಇಂಡಿಯಾದ ಬ್ಯಾಟಿಂಗ್ ಸಮಯದಲ್ಲಿ, ಇನ್ನಿಂಗ್ಸ್‌ನ ಕೊನೆಯ ಓವರ್‌ನ ಐದನೇ ಎಸೆತವನ್ನು ಆಡಿದ ನಂತರ ಹಾರ್ದಿಕ್ ಪಾಂಡ್ಯ ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡಲು ನಿರಾಕರಿಸಿದರು. ಭಾರತದ ಇನಿಂಗ್ಸ್‌ನ ಕೊನೆಯ ಓವರ್ ಅನ್ನು ಎನ್ರಿಕ್ ನಾರ್ಸಿಯಾ ಬೌಲ್ ಮಾಡಿದರು. ಈ ಓವರ್‌ನ ಕೊನೆಯ ಎಸೆತವನ್ನು ಎನ್ರಿಕ್ ನಾರ್ಸಿಯಾ ಬೌಲ್ ಮಾಡಿದಾಗ, ಹಾರ್ದಿಕ್ ಪಾಂಡ್ಯ ಚೆಂಡನ್ನು ಡಿಫೆಂಡ್ ಮಾಡಿದರು. ಆದರೆ ದಿನೇಶ್‌ ಕಾರ್ತಿಕ್‌ಗೆ ಸ್ಟ್ರೈಕ್ ನೀಡಲಿಲ್ಲ. ಇದು ಅಭಿಮಾನಿಗಳಿಗೆ ತೀವ್ರ ಅಸಮಾಧಾನ ಮೂಡುವಂತೆ ಮಾಡಿದೆ. 

 

 

ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡದಿದ್ದರೂ, ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ವಿಶೇಷವಾಗಿ ಏನನ್ನೂ ಸಾಧಿಸಲಿಲ್ಲ.  ಕೇವಲ 2 ರನ್‌ ಗಳಿಸಲಷ್ಟೇ ಸಶಕ್ತರಾದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಪಗೊಂಡು, ದಿನೇಶ್ ಕಾರ್ತಿಕ್‌ರನ್ನು ಗೌರವಿಸದಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. 

ಇದನ್ನೂ ಓದಿ: India vs SA T20I series: ಕೆ.ಎಲ್.ರಾಹುಲ್, ಕುಲದೀಪ್ ಯಾದವ್ ಸರಣಿಯಿಂದ ಔಟ್

ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ದಕ್ಷಿಣ ಆಫ್ರಿಕಾಗೆ 212 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ್ದ ಪ್ರವಾಸಿ ತಂಡ 5 ಎಸೆತಗಳು ಬಾಕಿ ಇರುವಾಗಕೇ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.  ಇನ್ನು ಎರಡನೇ ಟಿ20 ಪಂದ್ಯ ಜೂನ್ 12ರಂದು ಭಾನುವಾರ ಕಟಕ್‌ನಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News