IPL ಆರಂಭದ ಬೆನ್ನಲ್ಲೇ ಕ್ರಿಕೆಟ್ ಲೋಕಕ್ಕೆ ಬಿಗ್ ಶಾಕ್! ಮಾಜಿ ಮುಖ್ಯಸ್ಥ ನಿಧನ

Shaharyar Khan Died: ಶಹರ್ಯಾರ್ ಖಾನ್ 1999ರ ಭಾರತ ಪ್ರವಾಸ ಮತ್ತು 2003ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ಪುರುಷರ ತಂಡದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು.

Written by - Bhavishya Shetty | Last Updated : Mar 23, 2024, 05:11 PM IST
    • ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್
    • ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನ
    • ಪಾಕಿಸ್ತಾನದ ಪುರುಷರ ತಂಡದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಖಾನ್
IPL ಆರಂಭದ ಬೆನ್ನಲ್ಲೇ ಕ್ರಿಕೆಟ್ ಲೋಕಕ್ಕೆ ಬಿಗ್ ಶಾಕ್! ಮಾಜಿ ಮುಖ್ಯಸ್ಥ ನಿಧನ title=
Shahryar Khan

Shaharyar Khan Died: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್ ದೀರ್ಘಕಾಲದ ಅನಾರೋಗ್ಯದ ಕಾರಣ 89ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ. ಶಹರ್ಯಾರ್ ಖಾನ್ ಡಿಸೆಂಬರ್ 2003 ರಿಂದ ಅಕ್ಟೋಬರ್ 2006 ರವರೆಗೆ ಮತ್ತು ಆಗಸ್ಟ್ 2014 ರಿಂದ ಆಗಸ್ಟ್ 2017 ರವರೆಗೆ ಎರಡು ಪ್ರತ್ಯೇಕ ಅವಧಿಗೆ ಪಿಸಿಬಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವಯಸ್ಸು 38, ಅವಳಿ ಮಕ್ಕಳ ತಂದೆ… ಈ ಕ್ರಿಕೆಟರ್ ತವರು ಚೆನ್ನೈ ಆದ್ರೂ IPLನಲ್ಲಿ ಆಡೋದು RCB ಪರ!! ಯಾರಿವರು ಗೊತ್ತಾಯ್ತ?

ಶಹರ್ಯಾರ್ ಖಾನ್ 1999ರ ಭಾರತ ಪ್ರವಾಸ ಮತ್ತು 2003ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ಪುರುಷರ ತಂಡದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು.

ಇದನ್ನೂ ಓದಿ:  ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತೆ ಈ ನೀರು: ಆದರೆ ಕುಡಿಯುವ ಸಮಯ ಇದಾಗಿರಬೇಕು!

ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಾತನಾಡಿ, “ಪಿಸಿಬಿ ಪರವಾಗಿ, ಮಾಜಿ ಅಧ್ಯಕ್ಷ ಶಹರ್ಯಾರ್ ಖಾನ್ ನಿಧನಕ್ಕೆ ನನ್ನ ಸಂತಾಪ ಮತ್ತು ದುಃಖವನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ತಮ ಆಡಳಿತಗಾರರಾಗಿದ್ದರು ಮತ್ತು ಪಾಕಿಸ್ತಾನ ಕ್ರಿಕೆಟ್‌ಗೆ ಅತ್ಯಂತ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದರು. ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿ ಶ್ಲಾಘನೀಯ ಪಾತ್ರ ವಹಿಸಿದ್ದರು. ಅವರ ಸೇವೆಗಳಿಗಾಗಿ ಪಾಕಿಸ್ತಾನವು ಋಣಿಯಾಗಿರಲಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News