ಐ‌ಪಿ‌ಎಲ್ 2022 ಚಾಂಪಿಯನ್ ಆಗುವ ತಂಡಕ್ಕೆ ಸಿಗುವ ಮೊತ್ತವೆಷ್ಟು ಗೊತ್ತೇ?

ಐಪಿಎಲ್ 15 ನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಇಂದು ಸೆಣಸಲಿವೆ. 

Written by - Zee Kannada News Desk | Last Updated : May 29, 2022, 04:58 PM IST
  • ಐಪಿಎಲ್ 15 ನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಇಂದು ಸೆಣಸಲಿವೆ.
 ಐ‌ಪಿ‌ಎಲ್ 2022 ಚಾಂಪಿಯನ್ ಆಗುವ ತಂಡಕ್ಕೆ ಸಿಗುವ ಮೊತ್ತವೆಷ್ಟು ಗೊತ್ತೇ? title=

ನವದೆಹಲಿ: ಐಪಿಎಲ್ 15 ನೇ ಆವೃತ್ತಿಯ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಇಂದು ಸೆಣಸಲಿವೆ. ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದ ತಂಡಗಳು ಕ್ವಾಲಿಫೈಯರ್ 1 ರ ಮರುಪಂದ್ಯದಲ್ಲಿ ಫೈನಲ್‌ನಲ್ಲಿ ಪರಸ್ಪರ ಭೇಟಿಯಾಗುತ್ತವೆ, ಇದರಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪಾದಾರ್ಪಣೆ ಟೂರ್ನಿಯಲ್ಲಿಯೇ ಫೈನಲ್ ಗೆ ಪ್ರವೇಶಿಸಿದೆ.

ಇನ್ನೂ 2008 ರಲ್ಲಿ ಶೇನ್ ವಾರ್ನ್ ಅವರ ನಾಯಕತ್ವದಲ್ಲಿ ಉದ್ಘಾಟನಾ ಋತುವಿನಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದ ರಾಜಸ್ಥಾನ ರಾಯಲ್ಸ್ ತಂಡವು ಈಗ ಸಂಜು ಸ್ಯಾಮ್ಸನ್ ನೇತೃತ್ವದಲ್ಲಿ 14 ವರ್ಷಗಳ ನಂತರ ತಮ್ಮ ಮೊದಲ ಫೈನಲ್‌ನಲ್ಲಿ ಆಡಲಿದೆ.ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಭಾನುವಾರ, ಮೇ 29 ರಂದು ಫೈನಲ್‌ಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ: ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..!

ಅಷ್ಟಕ್ಕೂ ಈ ಅಂತಿಮ ಫೈನಲ್ ಪಂದ್ಯಕ್ಕೂ ಮುನ್ನ ಐಪಿಎಲ್ 2022 ರಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡವು ರನ್ನರ್ ಅಪ್ ಮತ್ತು ಚಾಂಪಿಯನ್ ತಂಡವು ಎಷ್ಟು ಬಹುಮಾನದ ಮೊತ್ತವನ್ನು ಪಡೆಯುತ್ತವೆ ಎಂಬುದನ್ನು ನಾವು ನೋಡೋಣ.

ಐಪಿಎಲ್ 2022 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವು 20 ಕೋಟಿ ನಗದು ಬಹುಮಾನವನ್ನು ಸ್ವೀಕರಿಸುತ್ತದೆ. ಅದೇ ರೀತಿ ರನ್ನರ್ ಅಪ್ ತಂಡವು 13 ಕೋಟಿ ಬಹುಮಾನವನ್ನು ಪಡೆಯುತ್ತದೆ.ಇನ್ನೂ ಮೂರನೇ ಸ್ಥಾನದಲ್ಲಿರುವ ತಂಡವು 7 ಕೋಟಿ ಮೊತ್ತವನ್ನು ಪಡೆಯುತ್ತದೆ.ಇದಲ್ಲದೆ, ನಾಲ್ಕನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್  6.5 ಕೋಟಿ ಬಹುಮಾನವನ್ನು ಪಡೆಯುತ್ತದೆ.

ಇದನ್ನೂ ಓದಿ-e-Commerce ತಾಣಗಳ ಮೇಲೆ ನಕಲಿ ವಿಮರ್ಶೆ ಬರೆಯುವವರೇ ಎಚ್ಚರ! ಸರ್ಕಾರ ಕೈಗೊಳ್ಳುತ್ತಿದೆ ಈ ಕ್ರಮ

ಏತನ್ಮಧ್ಯೆ, ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2022 ರ ಫೈನಲ್ ಕ್ರಿಕೆಟ್ ಪಂದ್ಯ ವರ್ಣರಂಜಿತವಾಗಿ ಕೊನೆಗೊಳ್ಳಲಿದೆ.ಬಾಲಿವುಡ್ ಸೂಪರ್‌ಸ್ಟಾರ್ ರಣವೀರ್ ಸಿಂಗ್ ಮತ್ತು ಖ್ಯಾತ ಸಂಗೀತಗಾರ ಎ.ಆರ್ ರೆಹಮಾನ್ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News