Shivam Dube: ಬಹುಕಾಲದ ಗೆಳತಿ ಅಜುಂ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ಶಿವಂ ದುಬೆ

Written by - Zee Kannada News Desk | Last Updated : Jul 17, 2021, 10:16 AM IST
  • ಬಹುಕಾಲದಿಂದಲೂ ಅಜುಂ ಖಾನ್ ರನ್ನು ಪ್ರೀತಿಸುತ್ತಿದ್ದ ಕ್ರಿಕೆಟರ್ ಶಿವಂ ದುಬೆ
  • ಮುಂಬೈನಲ್ಲಿ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭ
  • ಟೀಂ ಇಂಡಿಯಾದ ಭರವಸೆ ಆಟಗಾರನೆಂದು ಗುರುತಿಸಿಕೊಂಡಿರುವ ಶಿವಂ ದುಬೆ
Shivam Dube: ಬಹುಕಾಲದ ಗೆಳತಿ ಅಜುಂ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ title=
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ

ನವದೆಹಲಿ: ಟೀಂ ಇಂಡಿಯಾದ ಆಲ್ ರೌಂಡರ್ ಶಿವಂ ದುಬೆ ತಮ್ಮ ಬಹುಕಾಲದ ಗೆಳತಿಯನ್ನು ವಿವಾಹವಾಗಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ದುಬೆ, ಗೆಳತಿ ಅಜುಂ ಖಾನ್ ರನ್ನು ವರಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ದುಬೆ ‘ಪ್ರೀತಿಗಿಂತ ಹೆಚ್ಚಾಗಿರುವ ಪ್ರೀತಿಯಿಂದ ನಾವು ಪ್ರೀತಿಸಿದ್ದೇವೆಂದು’ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಲ್ಲದೆ ‘ಇದೀಗ ನಮ್ಮ ಜೀವನ ಶಾಶ್ವತವಾಗಿ ಪ್ರಾರಂಭವಾಗಿರುವ ಸ್ಥಳವಿದು’ ಎಂದು ಅವರು ಹೇಳಿದ್ದಾರೆ. ಅನೇಕ ಕ್ರಿಕೆಟಿಗರು ಮತ್ತು ಅಭಿಮಾನಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ದುಬೆ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೇಯಸ್ ಅಯ್ಯರ್, ರಾಹುಲ್ ತೆವಾಟಿಯಾ ಸೇರಿದಂತೆ ಅನೇಕರು ನವಜೋಡಿಗೆ ಶುಭಕೋರಿದ್ದಾರೆ. ರಾಜಸ್ಥಾನ್ ರಾಯಲ್ಸ್(Rajasthan Royals) ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ದುಬೆ ಮದುವೆ ಫೋಟೋವನ್ನು ಶೇರ್ ಮಾಡಿದ್ದು, ‘ಅಭಿನಂದನೆಗಳು’ ಎಂದು ಶುಭಾಶಯ ತಿಳಿಸಿದೆ.

ಇದನ್ನೂ ಓದಿ: ರಿಶಬ್ ಪಂತ್ ನಂತರ ಸಹಾಯಕ ಸಿಬ್ಬಂದಿಯೊಬ್ಬರಿಗೆ ಕೊರೊನಾ ಧೃಢ

ದುಬೆ ಬಹುಕಾಲದಿಂದಲೂ ಅಜುಂ ಖಾನ್ ರನ್ನು ಪ್ರೀತಿಸುತ್ತಿದ್ದರು. ದುಬೆ ಮತ್ತು ಅಜುಂ ಖಾನ್ ಅವರು ಹಿಂದು ಮತ್ತು ಮುಸ್ಲಿಂ ಸಂಪ್ರದಾಯದಂತೆ ಹಸಮನೆ ಏರಿದ್ದಾರೆ.  ಮುಂಬೈನಲ್ಲಿ ನಡೆದ ಖಾಸಗಿ ಮದುವೆ ಸಮಾರಂಭದ ಫೋಟೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿವೆ.

2019ರ ನವೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ-20 ಪಂದ್ಯವನ್ನಾಡುವ ಮೂಲಕ ಟೀಂ ಇಂಡಿಯಾಗೆ ದುಬೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ ಅವರು ಒಟ್ಟು 13  ಟಿ-20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಭಾರಿಸಿರುವ ದುಬೆ, 30ಕ್ಕೆ 3 ವಿಕೆಟ್ ಪಡೆದುಕೊಳ್ಳುವ ಮೂಲಕ ಬೌಲಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದಲ್ಲದೆ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವನ್ನಾಡಿದ್ದಾರೆ.

ಇದನ್ನೂ ಓದಿ: India vs England 2021: ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು!

ಭಾರತದ ಭರವಸೆಯ ಆಟಗಾರನಾಗಿ ಗುರುತಿಸಿಕೊಂಡಿರುವ ಶಿವಂ ದುಬೆ(Shivam Dube)2 ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಬಳಿಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಅವರು ಹರಾಜಿನಲ್ಲಿ  ಬರೋಬ್ಬರಿ 4.4 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ಸೇರಿದಂತೆ ಅನೇಕ ತಂಡಗಳು ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News