IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ

IND vs BAN 3rd ODI: ಬಾಂಗ್ಲಾದೇಶವು ಸರಣಿಯ ಎರಡೂ ಆರಂಭಿಕ ಏಕದಿನ ಪಂದ್ಯಗಳನ್ನು ನಿಕಟ ಅಂತರದಿಂದ ಗೆದ್ದುಕೊಂಡಿದೆ. ಆತಿಥೇಯರು ಮೊದಲ ಏಕದಿನ ಪಂದ್ಯವನ್ನು ಕೇವಲ ಒಂದು ವಿಕೆಟ್‌ನಿಂದ ಗೆದ್ದರೆ, ಎರಡನೇ ಏಕದಿನ ಪಂದ್ಯವನ್ನು 5 ರನ್‌ಗಳಿಂದ ಗೆದ್ದಿದ್ದಾರೆ. ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಫಲವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ ಗಳಿಸಿ ಆಲೌಟ್ ಆಗಿತ್ತು.

Written by - Bhavishya Shetty | Last Updated : Dec 9, 2022, 07:57 AM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯ
    • ಡಿಸೆಂಬರ್ 10 ರಂದು ಚಿತ್ತಗಾಂಗ್‌ನಲ್ಲಿ ನಡೆಯಲಿರುವ ಪಂದ್ಯ
    • ಟೀಂ ಇಂಡಿಯಾ ಸರಣಿ ಸೋತಿರುವುದು ನಮಗೆಲ್ಲಾ ತಿಳಿದ ಸಂಗತಿ
IND vs BAN: ಇಂಡೋ-ಬಾಂಗ್ಲಾ 3ನೇ ಪಂದ್ಯದ ಮೇಲೆ ವರುಣನ ವಕ್ರದೃಷ್ಟಿ: ಚಿತ್ತಾಗಾಂಗ್ ಹವಾಮಾನ ವರದಿ ಹೀಗಿದೆ title=
India Bangladesh

IND vs BAN 3rd ODI: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಾಳೆ ಅಂದರೆ ಡಿಸೆಂಬರ್ 10 ರಂದು ಚಿತ್ತಗಾಂಗ್‌ನಲ್ಲಿ ನಡೆಯಲಿದೆ. ಜಹೂರ್ ಅಹ್ಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಈಗ ಕೇವಲ ಔಪಚಾರಿಕವಾಗಿದೆ. ಈಗಾಗಲೇ ಟೀಂ ಇಂಡಿಯಾ ಸರಣಿ ಸೋತಿರುವುದು ನಮಗೆಲ್ಲಾ ತಿಳಿದ ಸಂಗತಿ. ಢಾಕಾದಲ್ಲಿ ಆಡಿದ ಎರಡೂ ಆರಂಭಿಕ ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆತಿಥೇಯರು ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೀಗ ಭಾರತ ಕ್ಲೀನ್ ಸ್ವೀಪ್ ನಿಂದ ತಪ್ಪಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲು ಪಣತೊಟ್ಟಿದೆ.

ಇದನ್ನೂ ಓದಿ: Nitin Gadkari: ದೇಶದ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಬಾಂಗ್ಲಾದೇಶವು ಸರಣಿಯ ಎರಡೂ ಆರಂಭಿಕ ಏಕದಿನ ಪಂದ್ಯಗಳನ್ನು ನಿಕಟ ಅಂತರದಿಂದ ಗೆದ್ದುಕೊಂಡಿದೆ. ಆತಿಥೇಯರು ಮೊದಲ ಏಕದಿನ ಪಂದ್ಯವನ್ನು ಕೇವಲ ಒಂದು ವಿಕೆಟ್‌ನಿಂದ ಗೆದ್ದರೆ, ಎರಡನೇ ಏಕದಿನ ಪಂದ್ಯವನ್ನು 5 ರನ್‌ಗಳಿಂದ ಗೆದ್ದಿದ್ದಾರೆ. ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಫಲವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ ಗಳಿಸಿ ಆಲೌಟ್ ಆಗಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಮೆಹದಿ ಹಸನ್ ಮಿರಾಜ್ ವಿಕೆಟ್ ಪಡೆಯುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ಹೀಗಾಗಿ ಆತಿಥೇಯ ತಂಡದ ಸ್ಕೋರ್ 270 ದಾಟಿತು.

ಹವಾಮಾನ ವರದಿ:

ಮೂರನೇ ಏಕದಿನ ಪಂದ್ಯ ಚಿತ್ತಗಾಂಗ್‌ನಲ್ಲಿ ಡಿಸೆಂಬರ್ 10ರಂದು ನಡೆಯಲಿದೆ. ಚಿತ್ತಗಾಂಗ್‌ನಲ್ಲಿ ತಾಪಮಾನವು ಮಧ್ಯಾಹ್ನ 11 ರಿಂದ 12 ಗಂಟೆ ವೇಳೆಗೆ 25 ರಿಂದ 27 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ. ಅಕ್ಯುವೆದರ್ ವರದಿಯ ಪ್ರಕಾರ, ಮಧ್ಯಾಹ್ನ 2 ರಿಂದ 4 ರ ನಡುವೆ ಇದು 27-28 ಡಿಗ್ರಿ ಸೆಲ್ಸಿಯಸ್‌ಗೆ ಏರುವ ನಿರೀಕ್ಷೆಯಿದೆ. ರಾತ್ರಿಯಲ್ಲಿ ತಾಪಮಾನವು ಕುಸಿಯಲಿದ್ದು, 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ಹೀಗಿರುವಾಗ ಮಳೆಯಿಂದಾಗಿ ಆಟ ನಿಲ್ಲುವ ಆತಂಕ ಅಭಿಮಾನಿಗಳಿಗೆ ಇಲ್ಲ.

ಇದನ್ನೂ ಓದಿ: December 2022ರ ಕೊನೆಯ ವಾರ ಈ ರಾಶಿಗಳ ಅದೃಷ್ಟವನ್ನೇ ಬದಲಾಯಿಸಲಿದೆ, ಎಲ್ಲ ಕಡೆಗಳಿಂದ ಭಾರಿ ಧನಾಗಮನ

ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ:

ಬಾಂಗ್ಲಾದೇಶ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಬಳಿಕ ಬ್ಯಾಟಿಂಗ್‌ ಮಾಡಿ ಅಜೇಯ ಅರ್ಧಶತಕ ಗಳಿಸಿದ್ದಾರೆ. ಇದೀಗ ಗಾಯವು ಅವರನ್ನು ಟೆಸ್ಟ್ ಸರಣಿಯಿಂದ ಹೊರಗಿಟ್ಟಿದೆ. ಮೂರನೇ ಏಕದಿನ ಪಂದ್ಯದಲ್ಲೂ ಕೆಎಲ್ ರಾಹುಲ್ ತಂಡದ ಸಾರಥ್ಯ ವಹಿಸಲಿದ್ದಾರೆ. ರಾಹುಲ್ ಅವರನ್ನು ಸರಣಿಗೆ ಉಪನಾಯಕರನ್ನಾಗಿ ಮಾಡಲಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಗಾಯಗೊಂಡು ಮೈದಾನದಿಂದ ಹೊರಗುಳಿದಾಗ, ರಾಹುಲ್ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ವಿಕೆಟ್‌ಕೀಪರ್‌ನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News