IPL 2020: ಚೆನ್ನೈಗೆ 9 ವಿಕೆಟ್ ಗಳ ಗೆಲುವು, ಪಂಜಾಬ್ ಪ್ಲೇ ಆಫ್ ಕನಸು ನುಚ್ಚುನೂರು

ಅಬುದಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಐಪಿಎಲ್ ನ 53 ನೇ ಪಂದ್ಯದಲ್ಲಿ ಚೆನ್ನೈ ತಂಡವು ಪಂಜಾಬ್ ವಿರುದ್ಧ 9 ವಿಕೆಟ್ ಗಳ ಗೆಲುವು ಸಾಧಿಸಿದೆ.

Last Updated : Nov 1, 2020, 08:01 PM IST
IPL 2020: ಚೆನ್ನೈಗೆ 9 ವಿಕೆಟ್ ಗಳ ಗೆಲುವು, ಪಂಜಾಬ್ ಪ್ಲೇ ಆಫ್ ಕನಸು ನುಚ್ಚುನೂರು title=

ನವದೆಹಲಿ: ಅಬುದಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಐಪಿಎಲ್ ನ 53 ನೇ ಪಂದ್ಯದಲ್ಲಿ ಚೆನ್ನೈ ತಂಡವು ಪಂಜಾಬ್ ವಿರುದ್ಧ 9 ವಿಕೆಟ್ ಗಳ ಗೆಲುವು ಸಾಧಿಸಿದೆ.

ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ಗೆ ಆಯ್ಕೆಯಾಗಿದ್ದಕ್ಕೆ ಮಂಜ್ರೆಕರ್ ಗೆ ಸಿಟ್ಟು , ಬಾಂಬೆ ಬಿಟ್ಟು ಬೇರೆ ಏನೂ ಗೊತ್ತಿಲ್ಲ ಎಂದ ಈ ಆಟಗಾರ..!

ಟಾಸ್ ಗೆದ್ದು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಚೆನ್ನೈ ತಂಡವು ಪಂಜಾಬ್ ತಂಡವನ್ನು 20 ಓವರ್ ಗಳಲ್ಲಿ  6 ವಿಕೆಟ್ 153 ರನ್ ಗಳಿಗೆ ಕಟ್ಟಿ ಹಾಕಿತು. ಪಂಜಾಬ್ ತಂಡದ ಪರವಾಗಿ ದೀಪಕ್ ಹೂಡಾ 62 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ ಅಂತಹ ವೇಗದ ಆಟವಾಡಲಿಲ್ಲ. ಕಳೆದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಗೇಲ್ ಕೂಡ ಇಂದು ವಿಫಲರಾದರು.

ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುತ್ತಾರೆಯೇ? ಇಲ್ಲಿದೆ ಉತ್ತರ..!

154 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಚೆನ್ನೈ ತಂಡವು ಕೇವಲ ಒಂದು ವಿಕೆಟ್ ನಷ್ಟಕ್ಕೆ 18.5 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು. ಚೆನ್ನೈ ತಂಡದ ಪರವಾಗಿ ಋತುರಾಜ್ ಗಾಯಕ್ವಾಡ್ 62 (ಅಜೇಯ) ದುಪ್ಲೆಸಿ 48 ಹಾಗೂ ಅಂಬಟಿ ರಾಯಡು 30 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಈ ಪಂದ್ಯದಲ್ಲಿ ಪಂಜಾಬ್ ತಂಡವು ಸೋಲುವುದರ ಮೂಲಕ ಐಪಿಎಲ್ ಪ್ಲೇ ಆಫ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

Trending News