IPL 2024: ರಾಜಸ್ಥಾನ್ ರಾಯಲ್ಸ್‌ನ ಹೊಸ ಜೆರ್ಸಿ ಬಿಡುಗಡೆ; ವಿನ್ಯಾಸಗೊಳಿಸಿದ್ದು ಈ ಸ್ಟಾರ್ ಕ್ರಿಕೆಟಿರ್!‌?

Rajasthan Royals Jersey for IPL 2024 : IPL ನ 17 ನೇ ಸೀಸನ್ ಕೇವಲ ಮೂರು ವಾರಗಳು ಮಾತ್ರ ಬಾಕಿ ಇದ್ದು.. ಇದೇ ವೇಳೆ ರಾಜಸ್ಥಾನ್ ರಾಯಲ್ಸ್‌ನ ಹೊಸ ಜೆರ್ಸಿ ಬಿಡುಗಡೆ ಮಾಡಲಾಗಿದೆ..   

Written by - Savita M B | Last Updated : Mar 5, 2024, 11:17 AM IST
  • IPL ನ 17 ನೇ ಸೀಸನ್ ಕೇವಲ ಮೂರು ವಾರಗಳು ಮಾತ್ರ ಉಳಿದಿವೆ..
  • ಐಪಿಎಲ್ ವಾರ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು.. ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ.
  • ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ
IPL 2024: ರಾಜಸ್ಥಾನ್ ರಾಯಲ್ಸ್‌ನ ಹೊಸ ಜೆರ್ಸಿ ಬಿಡುಗಡೆ; ವಿನ್ಯಾಸಗೊಳಿಸಿದ್ದು ಈ ಸ್ಟಾರ್ ಕ್ರಿಕೆಟಿರ್!‌? title=

Rajasthan Royals Jersey: IPL ನ 17 ನೇ ಸೀಸನ್ ಕೇವಲ ಮೂರು ವಾರಗಳು ಮಾತ್ರ ಉಳಿದಿವೆ.. ಐಪಿಎಲ್ ವಾರ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು.. ಎಲ್ಲಾ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಜೆರ್ಸಿಯಲ್ಲಿ ಕಳೆದ ವರ್ಷದ ಬಣ್ಣಗಳಲ್ಲಿದ್ದರೂ ಕೆಲವು ವಿಶೇಷತೆಗಳನ್ನು ಹೊಂದಿದೆ. ಈ ಬಗ್ಗೆ ತಂಡದ ಅಧಿಕೃತ ಪೇಜ್‌ನಲ್ಲಿ ಮಾಹಿತಿ ನೀಡಲಾಗಿದೆ.. . 

ತಂಡದ ಜೆರ್ಸಿಯನ್ನು ಯಾವುದೇ ಡಿಸೈನರ್ ವಿನ್ಯಾಸಗೊಳಿಸಿಲ್ಲ, ಆದರೆ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ವಿನ್ಯಾಸಗೊಳಿಸಿದ್ದಾರೆ ಎಂದು ರಾಜಸ್ಥಾನ ತಂಡ ಹೇಳಿದೆ. ರಾಜಸ್ಥಾನ್ ರಾಯಲ್ಸ್ ಇಂತಹ ವಿಡಿಯೋವನ್ನು ಪೋಸ್ಟ್ ಮಾಡಿದೆ. ಆದರೆ ಆ ವಿಡಿಯೋದ ಕೊನೆಯಲ್ಲಿ ಒಂದು ಟ್ವಿಸ್ಟ್ ಇದ್ದು.. ಜರ್ಸಿಯನ್ನು ಚಹಾಲ್ ವಿನ್ಯಾಸ ಮಾಡಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ...   

ಇದನ್ನೂ ಓದಿ-ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

ಕಳೆದ ಸೀಸನ್‌ನಲ್ಲಿ ರಾಜಸ್ಥಾನದ ಕಳಪೆ ಪ್ರದರ್ಶನ: 
ಐಪಿಎಲ್ 2023ರಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ಈ ತಂಡ 14 ನಡೆದ ಪಂದ್ಯಗಳಲ್ಲಿ ಏಳರಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿ.. ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರು. 

ರಾಜಸ್ಥಾನ್ ರಾಯಲ್ಸ್ ಆಟಗಾರರು: ಆಡಮ್ ಝಂಪಾ, ಅವೇಶ್ ಖಾನ್, ಧ್ರುವ ಜುರೆಲ್, ಡೊನೊವನ್ ಫೆರೇರಾ, ಜೋಸ್ ಬಟ್ಲರ್, ಕುಲದೀಪ್ ಸೇನ್, ಕುನಾಲ್ ರಾಥೋಡ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಆರ್. ಅಶ್ವಿನ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್, ಟ್ರೆಂಟ್ ಬೌಲ್ಟ್, ಯಶಸ್ವಿ ಜೈಸ್ವಾಲ್, ಯುಜ್ವೇಂದ್ರ ಚಹಾಲ್.

ರಾಜಸ್ಥಾನ ಹರಾಜಿನಲ್ಲಿ ಐವರು ಆಟಗಾರರನ್ನು ಖರೀದಿಸಿದೆ: 
ರೋವ್‌ಮನ್ ಪೊವೆಲ್ (7 ಕೋಟಿ)
ಶಿಭಮ್ ದುಬೆ (5.8 ಕೋಟಿ)
ನಾಂದ್ರೆ ಬರ್ಗರ್ (50 ಲಕ್ಷ)
ಟಾಮ್ ಕೊಹ್ಲರ್-ಕಾಡ್ಮೋರ್ (40 ಲಕ್ಷ)
ಅಬಿದ್ ಮುಷ್ತಾಕ್ (20 ಲಕ್ಷ) 

ಇದನ್ನೂ ಓದಿ-ಯುಪಿ ವಾರಿಯರ್ಸ್ ಎದುರು RCB ಗೆ ಭರ್ಜರಿ ಜಯ.. ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು!

Trending News