ನವದೆಹಲಿ: ಇಲ್ಲಿನ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದನ್ನೂ ಓದಿ-Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 197 ರನ್ ಗಳನ್ನು ಗಳಿಸಿತು.ಹೈದರಾಬಾದ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಆಡಿದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 36 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 67 ರನ್ ಗಳಿಸಿದರು.ಹೈದರಾಬಾದ್ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಕೂಡ ಕೊನೆಯಲ್ಲಿ ವಿಕೆಟ್ ಕೀಪರ್ ಕ್ಲಾಸನ್ ಅವರು ಕೇವಲ 27 ಎಸೆತಗಳಲ್ಲಿ ಎರಡು ಬೌಂಡರಿ ನಾಲ್ಕು ಸಿಕ್ಸರ್ ಸಿಡಿಸುವುದರ ಮೂಲಕ ಅಜೇಯ 53 ರನ್ ಗಳಿಸಿದರೆ, ಇನ್ನೊಂದೆಡೆಗೆ ಅಬ್ದುಲ್ ಸಮದ್ 21 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು.
The Delhi Capitals came close to the target but it's @SunRisers who emerge victorious in Delhi 👏🏻👏🏻#SRH register a 9-run victory over #DC 👌🏻👌🏻
Scorecard ▶️ https://t.co/iOYYyw2zca #TATAIPL | #DCvSRH pic.twitter.com/S5METD41pF
— IndianPremierLeague (@IPL) April 29, 2023
ಇದನ್ನೂ ಓದಿ-ಮಧುಮೇಹಿಗಳಿಗೂ ಪಾರ್ಶ್ವವಾಯುವಾಗಬಹುದು ! ಈ ಲಕ್ಷಣಗಳಿದ್ದರೆ ಎಚ್ಚರವಿರಲಿ
ಹೈದರಾಬಾದ್ ತಂಡವು ನೀಡಿದ 198 ರನ್ ಗಳ ಗುರಿಯನ್ನು ಬೆನ್ನತ್ತಿದ ದೆಹಲಿ ತಂಡವು ಆರು ವಿಕೆಟ್ ಗಳನ್ನು ಕಳೆದುಕೊಂಡು ಅಂತಿಮವಾಗಿ 20 ಓವರ್ ಗಳಲ್ಲಿ 188 ರನ್ ಗಳನ್ನು ಮಾತ್ರ ಗಳಿಸುವಲ್ಲಿ ಶಕ್ತವಾಯಿತು, ಆ ಮೂಲಕ 9 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.ದೆಹಲಿ ಪರವಾಗಿ ಸಾಲ್ಟ್ ಕೇವಲ 35 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳ ನೆರವಿನಿಂದಾಗಿ 59 ರನ್ ಗಳಿಸುವಲ್ಲಿ ಯಶಸ್ವಿಯಾದರು, ಇವರಿಗೆ ಸಾಥ್ ನೀಡಿದ ಮಿಚೆಲ್ ಮಾರ್ಷ್ ಕೂಡ ಸ್ಪೋಟಕ ಬ್ಯಾಟಿಂಗ್ ಆಡಿದರು.ಅವರು ಕೇವಲ 39 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಆರು ಸಿಕ್ಸರ್ ಗಳ ನೆರವಿನಿಂದ 63 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆಯನ್ನು ಹುಟ್ಟಿಸಿದ್ದರು. ಆದರೆ ಕೊನೆಯಲ್ಲಿ ಅಕ್ಸರ್ ಪಟೇಲ್ ಕೇವಲ 14 ಎಸೆತಗಳಲ್ಲಿ 29 ರನ್ ಗಳಿಸಿದರು ಕೂಡ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ವಿಫಲರಾದರು.ಆ ಮೂಲಕ ಅಂತಿಮವಾಗಿ ಹೈದರಾಬಾದ್ ತಂಡವು 9 ರನ್ ಗಳ ರೋಚಕ ಗೆಲುವನ್ನು ಸಾಧಿಸಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.