ಪಂದ್ಯದ ಮಧ್ಯೆ ಹೊಸ ನಿರ್ಧಾರ ತಿಳಿಸಿದ ಅಂಪೈರ್! CSK- RCBಯ ಪ್ಲೇಯರ್ಸ್’ಗೆ ತಿಳಿದಿರಲೇ ಇಲ್ಲ ಆ ನಿಯಮ!

RCB vs CSK: ಹರ್ಷಲ್ ಪಟೇಲ್ ಚೆನ್ನೈನ ಬ್ಯಾಟಿಂಗ್ ಸಮಯದಲ್ಲಿ ಇನಿಂಗ್ಸ್‌’ನ ಕೊನೆಯ ಓವರ್ ಬೌಲ್ ಮಾಡಲು ಆಗಮಿಸಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಮೊದಲ ಎಸೆತದಲ್ಲಿ ಒಂದು ರನ್ ಕಲೆ ಹಾಕಿದರು. ಆ ಬಳಿಕ ಮೊಯಿಲ್ ಅವರಿಗೆ ಎಸೆದ ಎರಡನೇ ಬಾಲ್ ನೋ ಬಾಲ್ ಎಂದು ಘೋಷಿಸಲಾಯಿತು.

Written by - Bhavishya Shetty | Last Updated : Apr 17, 2023, 11:40 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ರೋಚಕ ಪಂದ್ಯ
    • ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಿಕ್ಸರ್‌ಗಳ ಮಳೆಗೈದಿದ್ದಾರೆ ಆಟಗಾರರು
    • ಪಂದ್ಯದ ಮಧ್ಯೆಯೇ ಅಂಪೈರ್ ನೀಡಿದ ಒಂದು ನಿರ್ಧಾರ ಕೆಲ ಕಾಲ ಆಟಗಾರರನ್ನು ಶಾಕ್’ಗೊಳಗಾಗುವಂತೆ ಮಾಡಿದೆ
ಪಂದ್ಯದ ಮಧ್ಯೆ ಹೊಸ ನಿರ್ಧಾರ ತಿಳಿಸಿದ ಅಂಪೈರ್! CSK- RCBಯ ಪ್ಲೇಯರ್ಸ್’ಗೆ ತಿಳಿದಿರಲೇ ಇಲ್ಲ ಆ ನಿಯಮ! title=
Umpire Decision

RCB vs CSK: IPL 2023ರ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಹಳ ರೋಚಕ ಪಂದ್ಯ ನಡೆದಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಸಿಕ್ಸರ್‌ಗಳ ಮಳೆಗೈದಿದ್ದಾರೆ ಆಟಗಾರರು. ಉಭಯ ತಂಡಗಳು ಸಹ ಸ್ಪೋಟಕ ಬ್ಯಾಟಿಂಗ್ ಮಾಡಿದೆ ಎನ್ನಬಹುದು. ಆದರೆ ಈ ಪಂದ್ಯದ ಮಧ್ಯೆಯೇ ಅಂಪೈರ್ ನೀಡಿದ ಒಂದು ನಿರ್ಧಾರ ಕೆಲ ಕಾಲ ಆಟಗಾರರನ್ನು ಶಾಕ್’ಗೊಳಗಾಗುವಂತೆ ಮಾಡಿದೆ.

ಇದನ್ನೂ ಓದಿ: 6 ಏರ್’ಬ್ಯಾಗ್, ಡಬಲ್ ಸಿಲಿಂಡರ್ ಸಹಿತ ಬರಲಿದೆ TATA CNG ಕಾರು: ವಿಶೇಷ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ಹರ್ಷಲ್ ಪಟೇಲ್ ಚೆನ್ನೈನ ಬ್ಯಾಟಿಂಗ್ ಸಮಯದಲ್ಲಿ ಇನಿಂಗ್ಸ್‌’ನ ಕೊನೆಯ ಓವರ್ ಬೌಲ್ ಮಾಡಲು ಆಗಮಿಸಿದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಮೊದಲ ಎಸೆತದಲ್ಲಿ ಒಂದು ರನ್ ಕಲೆ ಹಾಕಿದರು. ಆ ಬಳಿಕ ಮೊಯಿಲ್ ಅವರಿಗೆ ಎಸೆದ ಎರಡನೇ ಬಾಲ್ ನೋ ಬಾಲ್ ಎಂದು ಘೋಷಿಸಲಾಯಿತು. ಆ ಬಾಲ್ ವೈಡ್ ಬಾಲ್ ಆಯಿತು.  ಅದಾದ ಬಳಿಕ ಮತ್ತೆ ನೋ ಬಾಲ್ ಎಸೆದರು ಹರ್ಷಲ್ ಪಟೇಲ್. ಇದನ್ನು ಕಂಡ ಅಂಪೈರ್, ಅವರನ್ನು ಮುಂದೆ ಬೌಲಿಂಗ್ ಮಾಡದಂತೆ ತಡೆದರು. ಆ ಓವರ್ ಅನ್ನು ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಪೂರ್ಣಗೊಳಿಸಿದರು.

ಹರ್ಷಲ್ ಪಟೇಲ್ ಕಳಪೆ ಪ್ರದರ್ಶನ:

ಆರ್‌ ಸಿ ಬಿ ಪರ ಬೌಲಿಂಗ್ ಮಾಡುವಾಗ ಹರ್ಷಲ್ ಪಟೇಲ್ ಎದುರಾಳಿಗೆ ಸಾಕಷ್ಟು ರನ್ ಗಳಿಸಲು ಅವಕಾಶ ನೀಡಿದ್ದರು.  ಬೌಲ್ ಮಾಡಿದ 3.2 ಓವರ್’ನಲ್ಲಿ 36 ರನ್ ನೀಡಿ 1 ವಿಕೆಟ್ ಪಡೆದರು. ಇನ್ನುಳಿದಂತೆ ವಿಜಯ್ ಕುಮಾರ್ ವೈಶಾಖ್ 4 ಓವರ್’ಗಳಲ್ಲಿ 62 ರನ್ ನೀಡಿ 1 ವಿಕೆಟ್ ಪಡೆದರು. ವೇಗಿ ವೇಯ್ನ್ ಪಾರ್ನೆಲ್ ಕೂಡ 4 ಓವರ್ ಬೌಲಿಂಗ್ ಮಾಡಿ 48 ರನ್ ನೀಡಿ 1 ವಿಕೆಟ್ ಪಡೆದರು.

ಇದನ್ನೂ ಓದಿ: IPLನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಕೊನೆಯಾಯ್ತು ಈ ಆಟಗಾರರ ವೃತ್ತಿಜೀವನ! ಕಾರಣ ಶಾಕಿಂಗ್

ಐಪಿಎಲ್ ವೃತ್ತಿಜೀವನ ಹೀಗಿದೆ:

ಹರ್ಷಲ್ ಪಟೇಲ್ ಐಪಿಎಲ್‌’ನ 83 ಪಂದ್ಯಗಳಲ್ಲಿ 103 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು, 32 ವಿಕೆಟ್’ಗಳನ್ನು ಪಡೆದಿದ್ದರು. ನಿಧಾನಗತಿಯ ಎಸೆತಗಳಲ್ಲಿ ವಿಕೆಟ್‌’ಗಳನ್ನು ಕಬಳಿಸಲು ಹೆಸರುವಾಸಿಯಾಗಿದ್ದಾರೆ ಹರ್ಷಲ್. ಇನ್ನು ಈ ಸೀಸನ್’ನಲ್ಲಿ ಇಲ್ಲಿಯವರೆಗೆ ಹರ್ಷಲ್ 5 ಪಂದ್ಯಗಳನ್ನು ಆಡಿದ್ದು, 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News