ನವದೆಹಲಿ: ರೋಹಿತ್ ಶರ್ಮಾ ಅವರು 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸುದ್ದಿಯಲ್ಲಿದ್ದಾರೆ. ಶರ್ಮಾ ಪ್ರಸ್ತುತ ಏಳು ಇನ್ನಿಂಗ್ಸ್ಗಳಲ್ಲಿ 544 ರನ್ ಗಳಿಸಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿ ಪಡೆದಿದ್ದಾರೆ.
ಈಗ ಅವರ ಇನ್ನು ಮೂರು ವಿಶ್ವಕಪ್ ದಾಖಲೆಗಳನ್ನು ಅಳಿಸಿ ಹಾಕಲು ಕೇವಲ ಒಂದೇ ಇನಿಂಗ್ಸ್ ಸಾಕು ಎನ್ನಲಾಗುತ್ತದೆ. ಒಂದು ವೇಳೆ ಸಾಧ್ಯವಾದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ಕೆಳಗಿನ ಮೂರು ವಿಶ್ವದಾಖಲೆಗಳನ್ನು ಮುರಿಯಲಿದ್ದಾರೆ ಎನ್ನಲಾಗಿದೆ.
1. ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅಧಿಕ ಶತಕಗಳು:
2015 ರ ವಿಶ್ವಕಪ್ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕರ್ ಅವರೊಂದಿಗೆ ಜಂಟಿ ದಾಖಲೆಯನ್ನು ಹೊಂದಿದ್ದಾರೆ. ಒಂದು ವೇಳೆ ಮುಂದಿನ ಪಂದ್ಯದಲ್ಲಿ ಅವರು ಶತಕ ಗಳಿಸಿದ್ದೆ ಆದಲ್ಲಿ ಅವರು ಅಧಿಕ ಶತಕಗಳಿಸಿದ ಆಟಗಾರ ಎನ್ನುವ ಖ್ಯಾತಿ ಪಡೆಯಲಿದ್ದಾರೆ ಎನ್ನಲಾಗಿದೆ.
2. ಒಂದೇ ವಿಶ್ವಕಪ್ ಟೂರ್ನಿ ಯಲ್ಲಿ ಅಧಿಕ ರನ್:
2003 ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ 673 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಇನ್ನೂ 544 ರನ್ ಗಳಿಸಿದ್ದಾರೆ . ಒಂದು ವೇಳೆ ಇನ್ನೆರಡು ಇನ್ನಿಂಗ್ಸ್ಗಳಲ್ಲಿ ಈ ದಾಖಲೆಯನ್ನು ಮುರಿಯಲು ಸಾಧ್ಯವಿದೆ ಎನ್ನಲಾಗಿದೆ
3. ವಿಶ್ವಕಪ್ನ ಗುಂಪು ಹಂತಗಳಲ್ಲಿ ಹೆಚ್ಚಿನ ರನ್:
ವಿಶ್ವಕಪ್ ನ ಟೂರ್ನಿಯಲ್ಲಿ ಅದರಲ್ಲೂ ಲೀಗ್ ಪಂದ್ಯದಲ್ಲಿ ಅಧಿಕ ರನ್ ಗಳಿಸಿದ ದಾಖಲೆ ಸಚಿನ್ ಅವರ ಹೆಸರಿನಲ್ಲಿದೆ.2003 ರಲ್ಲಿ ಸಚಿನ್ ಅವರು 9 ಇನ್ನಿಂಗ್ಸ್ ಗಳಿಂದ 586 ರನ್ ಗಳಿಸಿದ್ದರು. ಈಗ ಶರ್ಮಾ ಅವರಿಗೆ ಈ ದಾಖಲೆ ಮುರಿಯಲು ಇನ್ನು ಒಂದು ಪಂದ್ಯ ಬಾಕಿ ಇದೆ. ಆದ್ದರಿಂದ ಈ ದಾಖಲೆಯನ್ನು ಸಹಿತ ಮುರಿಯಲು ಸಾಧ್ಯವಿದೆ ಎನ್ನಲಾಗುತ್ತದೆ.