ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10,000 ರನ್ ಗಳ ಕ್ಲಬ್ ಗೆ ಸೇರಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರರಾಗಿದ್ದಾರೆ.
MS Dhoni completes 10,000 ODI runs for India, becoming only the fifth from his country to do so. #AUSvIND
Details ⏬https://t.co/AeDmroyU2d pic.twitter.com/Z4DcSOq7kC
— ICC (@ICC) January 12, 2019
ಈ ಹಿಂದೆ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರು 10 ಸಾವಿರಕ್ಕೂ ಅಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ.330 ಏಕದಿನ ಪಂದ್ಯಗಳಲ್ಲಿ 49.75 ಸರಾಸರಿಯೊಂದಿಗೆ ಧೋನಿ 10,000 ರನ್ಗಳನ್ನು ಗಳಿಸಿದ್ದಾರೆ, ಇದರಲ್ಲಿ 9 ಶತಕಗಳು ಮತ್ತು 67 ಅರ್ಧಶತಕಗಳಿವೆ. ಒಟ್ಟಾರೆಯಾಗಿ ಏಕದಿನದಲ್ಲಿ , 10,000 ರನ್ ಕ್ಲಬ್ ಸೇರಿದ 12 ನೇ ಆಟಗಾರ ಎನ್ನುವ ಸಾಧನೆಗೆ ಧೋನಿ ಪಾತ್ರರಾಗಿದ್ದಾರೆ.
ಧೋನಿ 2018 ರಲ್ಲಿ ಸೀಮಿತ ಕ್ರಿಕೆಟ್ ಓವರ್ ಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಸಾಕಷ್ಟು ಟೀಕೆಯನ್ನು ಎದುರಿಸಿದ್ದರು. 2018ರಲ್ಲಿ ಧೋನಿ 20 ಏಕದಿನ ಪಂದ್ಯದಲ್ಲಿ ಅರ್ಧಶತಕವಿಲ್ಲದೆ 25 ರ ಸರಾಸರಿಯಲ್ಲಿ 275 ರನ್ ಗಳಿಸಿದ್ದರು.