ಸೌರವ್ ಗಂಗೂಲಿ ಕಷ್ಟಪಟ್ಟಿದ್ದರಿಂದಾಗಿ ಧೋನಿ ಹಲವು ಟ್ರೋಫಿ ಗೆಲ್ಲಲು ಸಾಧ್ಯವಾಯಿತು-ಗೌತಮ್ ಗಂಭೀರ್

ಗೌತಮ್ ಗಂಭೀರ್ ಅವರು ಡಿಸೆಂಬರ್ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅವರು ಈಗ ಸಕ್ರಿಯ ರಾಜಕಾರಣಿಯಾಗಿದ್ದರೂ, ಕೂಡ ಅವರು ಕ್ರಿಕೆಟ್ ವಿಚಾರವಾಗಿ ಆಗಾಗ ತಮ್ಮ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗೆ ಮಾಜಿ ನಾಯಕ ಎಂ.ಎಸ್. ಧೋನಿ ಅವರು 'ಅದೃಷ್ಟದ ನಾಯಕ' ಎಂದು ಹೇಳಿ ಸುದ್ದಿಯಲ್ಲಿದ್ದಾರೆ.

Updated: Jul 12, 2020 , 08:09 PM IST
ಸೌರವ್ ಗಂಗೂಲಿ ಕಷ್ಟಪಟ್ಟಿದ್ದರಿಂದಾಗಿ ಧೋನಿ  ಹಲವು ಟ್ರೋಫಿ ಗೆಲ್ಲಲು ಸಾಧ್ಯವಾಯಿತು-ಗೌತಮ್ ಗಂಭೀರ್
file photo

ನವದೆಹಲಿ: ಗೌತಮ್ ಗಂಭೀರ್ ಅವರು ಡಿಸೆಂಬರ್ 2018 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಅವರು ಈಗ ಸಕ್ರಿಯ ರಾಜಕಾರಣಿಯಾಗಿದ್ದರೂ, ಕೂಡ ಅವರು ಕ್ರಿಕೆಟ್ ವಿಚಾರವಾಗಿ ಆಗಾಗ ತಮ್ಮ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುತ್ತಾರೆ.ಇತ್ತೀಚೆಗೆ ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು 'ಅದೃಷ್ಟದ ನಾಯಕ' ಎಂದು ಹೇಳಿ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: ಗಂಭೀರ್ ನಲ್ಲಿ ಸಾಕಷ್ಟು ಪ್ರತಿಭೆ ಇತ್ತು, ಆದರೆ ಕೋಪವೇ ಅವರ ಆಟಕ್ಕೆ ಮುಳುವಾಯಿತು-ದಿಲೀಪ್ ವೆಂಗ್ ಸರ್ಕಾರ

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಶೋನಲ್ಲಿ ಮಾತಾಡಿದ ಗಂಭೀರ್, "ಧೋನಿ ಅವರು ಪ್ರತಿ ಸ್ವರೂಪದಲ್ಲಿ ಅದ್ಭುತ ತಂಡವನ್ನು ಪಡೆದಿದ್ದರಿಂದ ಅವರು ತುಂಬಾ ಅದೃಷ್ಟಶಾಲಿ ನಾಯಕರಾಗಿದ್ದಾರೆ. 2011 ರ ವಿಶ್ವಕಪ್ ತಂಡದಿಂದಾಗಿ ಧೋನಿಗೆ ತುಂಬಾ ಸುಲಭವಾಗಿತ್ತು ಏಕೆಂದರೆ ನಮ್ಮಲ್ಲಿ ಸಚಿನ್, ಸೆಹ್ವಾಗ್, ನಾನು, ಯುವರಾಜ್ , ಯೂಸುಫ್, ವಿರಾಟ್, ಆದ್ದರಿಂದ ಅವರು ಅತ್ಯುತ್ತಮ ತಂಡವನ್ನು ಪಡೆದರು, ಆದರೆ ಗಂಗೂಲಿ ಅದಕ್ಕಾಗಿ ತುಂಬಾ ಶ್ರಮಿಸಬೇಕಾಯಿತು ಮತ್ತು ಇದರ ಪರಿಣಾಮವಾಗಿ ಧೋನಿ ಹಲವಾರು ಟ್ರೋಫಿಗಳನ್ನು ಗೆದ್ದರು.

ಇದನ್ನೂ ಓದಿ: ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಗಿಂತಲೂ ಸಚಿನ್ ಶ್ರೇಷ್ಠ ಎಂದ ಗಂಭೀರ.!..ಕಾರಣವೇನು ಗೊತ್ತೇ ?

'ಧೋನಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇಷ್ಟು ಯಶಸ್ವಿ ನಾಯಕನಾಗಲು ಕಾರಣ ಜಹೀರ್ ಖಾನ್, ಅವರು ಧೋನಿಗೆ ದೊರೆತ ದೊಡ್ಡ ಆಶೀರ್ವಾದ, ಅದರ ಶ್ರೇಯ ಗಂಗೂಲಿಗೆ ಸಲ್ಲಬೇಕು. ನನ್ನ ಪ್ರಕಾರ, ಜಹೀರ್ ಭಾರತದ ಅತ್ಯುತ್ತಮ ವಿಶ್ವ ದರ್ಜೆ ಬೌಲರ್ರಾಗಿದ್ದಾರೆ.

ಧೋನಿ ನಾಯಕತ್ವದ ಕೌಶಲ್ಯದ ಬಗ್ಗೆ ಗಂಭೀರ್ ಕಾಮೆಂಟ್ ಮಾಡುವುದು ಇದೇ ಮೊದಲಲ್ಲವಾದರೂ, ಅವರ ಇತ್ತೀಚಿನ ಹೇಳಿಕೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.