ನವದೆಹಲಿ: 2022ರ ಐಸಿಸಿ ಟಿ-20 ವಿಶ್ವಕಪ್(ICC Mens T20 World Cup 2022)ನಲ್ಲಿ ಪಾಕಿಸ್ತಾನ ಮತ್ತೊಮ್ಮೆ ಭಾರತವನ್ನು ಸೋಲಿಸುತ್ತದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ. 2022ರ ICC ಪುರುಷರ T20 ವಿಶ್ವಕಪ್ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಎದುರಿಸಲಿದೆ.
ದುಬೈನಲ್ಲಿ ನಡೆದ 2021ರ ಟಿ-20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಬಾಬರ್ ಅಜಮ್(Babar Azam) ನೇತೃತ್ವದ ಪಾಕಿಸ್ತಾನ ತಂಡವು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು 10 ವಿಕೆಟ್ ಗಳಿಂದ ಸೋಲಿಸಿ ನಿಬ್ಬೆರಗಾಗಿಸಿತ್ತು. ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ ಒಮ್ಮೆಯೂ ಸೋಲು ಕಂಡಿರಲಿಲ್ಲ. ಆದರೆ ಮೊದಲ ಬಾರಿಗೆ ಪಾಕ್ ಎದುರು ಭಾರತ ಮುಖಭಂಗ ಅನುಭವಿಸಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ನಿರ್ಗಮಿಸಬೇಕಾಯಿತು.
Mark your 🗓️, set your ⏰ & get set to support #TeamIndia at the ICC Men's #T20WorldCup 2022! 🥳
Give us a 🙌 if you #BelieveInBlue to bring the 🏆 home!
Starts Oct 16 | Star Sports & Disney+Hotstar#T20WC #T20WorldCup2022 pic.twitter.com/654Amcjf2b
— Star Sports (@StarSportsIndia) January 21, 2022
ಇದನ್ನೂ ಓದಿ: Ind vs SA : ಭಾರತದ ಸೋಲಿಗೆ ವಿಲನ್ ಯಾರು? ಟೀಂನಿಂದ ಔಟ್ ಆಗ್ತಾನಾ ಈ ಆಟಗಾರ?
ಇದೀಗ ಪಾಕಿಸ್ತಾನವು ಸರ್ವಶ್ರೇಷ್ಠ ತಂಡವೆಂದು ಹೇಳಿರುವ ಶೋಯೆಬ್ ಅಕ್ತರ್(Shoaib Akhtar), ಭಾರತಕ್ಕೆ ಮತ್ತೊಂದು ಸೋಲು ಖಚಿತವೆಂದು ಹೇಳಿದ್ದಾರೆ. ‘ನಾವು ಮತ್ತೆ ಮೆಲ್ಬೋರ್ನ್ನಲ್ಲಿ ಭಾರತವನ್ನು ಸೋಲಿಸುತ್ತೇವೆ. ಟಿ-20 ಕ್ರಿಕೆಟ್ನಲ್ಲಿ ಭಾರತಕ್ಕಿಂತ ಪಾಕಿಸ್ತಾನ ಉತ್ತಮ ತಂಡವಾಗಿದೆ. ಕ್ರಿಕೆಟ್ನಲ್ಲಿ ಉಭಯ ದೇಶಗಳ ಮುಖಾಮುಖಿಯಾದಾಗ ಭಾರತೀಯ ಮಾಧ್ಯಮಗಳು ತಮ್ಮ ತಂಡದ ಮೇಲೆ ಅನಗತ್ಯ ಒತ್ತಡ ಹೇರುತ್ತವೆ. ಆದರೆ ನೆನಪಿಡಿ.. ಈ ಬಾರಿಯೂ ಪಾಕಿಸ್ತಾನ ತಂಡವು ಭಾರತ ತಂಡವನ್ನು ಸೋಲಿಸಲಿದೆ’ ಅಂತಾ ಅಕ್ತರ್ ಹೇಳಿದ್ದಾರೆ.
2021ರ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ(Pakistan)ವು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೆಮಿಫೈನಲ್ಗೆ ಪ್ರವೇಶಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಬಲಿಷ್ಠವಾಗಿದ್ದ ಬಾಬರ್ ಅಜಮ್ ನಾಯಕತ್ವದ ತಂಡ ಆಸೀಸ್ ಎದುರು ಮಂಡಿಯೂರಿತ್ತು. ಪರಿಣಾಮ ಪಾಕಿಸ್ತಾನ ಟಿ-20 ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರಾಗಿತ್ತು. ಇದೀಗ ಭಾರತ, ಪಾಕಿಸ್ತಾನ ಸೇರಿ ಎಲ್ಲ ತಂಡಗಳು 2022ರ ಟಿ-20 ವಿಶ್ವಕಪ್ ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
Fixtures of T20 World Cup 2022 have been announced. India placed alongside Pakistan, South Africa, Bangladesh & two qualifiers in Group 2 of Super 12 stage. India will square off against Pakistan in their first match of the tournament on October 23 at the MCG pic.twitter.com/M4QMuMaDOq
— ANI (@ANI) January 20, 2022
ಇದನ್ನೂ ಓದಿ: "ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೊರತುಪಡಿಸಿ ಒತ್ತಡ ನಿಭಾಯಿಸಬಲ್ಲವರು ಭಾರತ ತಂಡದಲ್ಲಿಲ್ಲ'
ಇದೇ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ(T20 World Cup 2022) ನಡೆಯಲಿವೆ. ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್, ಗೀಲಾಂಗ್, ಹೋಬಾರ್ಟ್ ಮತ್ತು ಪರ್ತ್ ಹೀಗೆ ಒಟ್ಟು 7 ಸ್ಥಗಳಲ್ಲಿ 45 ಪಂದ್ಯಗಳು ನಡೆಯಲಿವೆ. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಗೆಲ್ಲುವ ತಂತ್ರ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿಯೇ ತಂಡದ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಅತ್ತ ಮತ್ತೊಮ್ಮೆ ಭಾರತದ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿರುವ ಪಾಕಿಸ್ತಾನ ತಂಡವು ಕೂಡ ಬಲಿಷ್ಠ ತಂಡವನ್ನು ಸಜ್ಜುಗೊಳಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.