ರೋಹಿತ್ ಶರ್ಮಾ ಶ್ರೇಷ್ಠ ದಾಖಲೆ, 10 ಸಾವಿರ ಕ್ಲಬ್‌ನಲ್ಲಿ ತೆಂಡೂಲ್ಕರ್ ರೆಕಾರ್ಡ್‌ ಬ್ರೇಕ್‌

Rohit Sharma Record  in Asia Cup 2023: ಏಷ್ಯಾ ಕಪ್ 2023 ರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ನಾಯಕ ರೋಹಿತ್ ಶರ್ಮಾ ಅದ್ಭುತ ಆಟವಾಡಿದ್ದಾರೆ.  

Written by - Chetana Devarmani | Last Updated : Sep 12, 2023, 08:26 PM IST
  • ಏಷ್ಯಾ ಕಪ್ 2023 ರ ಶ್ರೀಲಂಕಾ vs ಭಾರತ ಪಂದ್ಯ
  • ನಾಯಕ ರೋಹಿತ್ ಶರ್ಮಾ ಅದ್ಭುತ ಆಟ
  • ಶ್ರೇಷ್ಠ ದಾಖಲೆ ನಿರ್ಮಿಸಿ ಹಿಟ್‌ಮ್ಯಾನ್‌
ರೋಹಿತ್ ಶರ್ಮಾ ಶ್ರೇಷ್ಠ ದಾಖಲೆ, 10 ಸಾವಿರ ಕ್ಲಬ್‌ನಲ್ಲಿ ತೆಂಡೂಲ್ಕರ್ ರೆಕಾರ್ಡ್‌ ಬ್ರೇಕ್‌   title=
Rohit Sharma

Asia Cup 2023 India Vs Sri Lanka : ಏಷ್ಯಾ ಕಪ್ 2023 ರ ಸೂಪರ್-4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ನಾಯಕ ರೋಹಿತ್ ಶರ್ಮಾ ಅದ್ಭುತ ಆಟ ಆಡಿದರು. ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023 ರ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 48 ಎಸೆತಗಳಲ್ಲಿ 53 ರನ್ ಗಳಿಸಿದರು. ರೋಹಿತ್ ಶರ್ಮಾ 7 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಸರಿಗಟ್ಟುವ ಮೂಲಕ ರೋಹಿತ್ ಶರ್ಮಾ ಶ್ರೇಷ್ಠ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಶ್ರೀಲಂಕಾ ವಿರುದ್ಧ ಭಾರತ ಹಣಾಹಣಿ: ಈ ಪಂದ್ಯ ಮಳೆಯಿಂದ ರದ್ದಾದರೇ ಭಗ್ನವಾಗುತ್ತಾ ಫೈನಲ್ ಕನಸು?

ರೋಹಿತ್ ಶರ್ಮಾ ಈಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 248 ಪಂದ್ಯಗಳಲ್ಲಿ 10031 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 30 ಶತಕ ಮತ್ತು 51 ಅರ್ಧ ಶತಕಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಈ ದೊಡ್ಡ ಸಾಧನೆ ಮಾಡಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ವಿಚಾರದಲ್ಲಿ ರೋಹಿತ್ ಶರ್ಮಾ ಇದೀಗ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ರೋಹಿತ್ ಶರ್ಮಾ 10,000 ODI ರನ್ ಪೂರ್ಣಗೊಳಿಸಲು 241 ಇನ್ನಿಂಗ್ಸ್ ತೆಗೆದುಕೊಂಡರು.

ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್

1. ಸಚಿನ್ ತೆಂಡೂಲ್ಕರ್ (ಭಾರತ) - 18,426 ರನ್

2. ವಿರಾಟ್ ಕೊಹ್ಲಿ (ಭಾರತ) - 13,027 ರನ್

3. ಸೌರವ್ ಗಂಗೂಲಿ (ಭಾರತ) - 11,363 ರನ್

4. ರಾಹುಲ್ ದ್ರಾವಿಡ್ (ಭಾರತ) - 10,889 ರನ್

5. ಮಹೇಂದ್ರ ಸಿಂಗ್ ಧೋನಿ (ಭಾರತ) - 10,773 ರನ್

6. ರೋಹಿತ್ ಶರ್ಮಾ (ಭಾರತ) - 10,031 ರನ್

ODI ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳು

1. ಸಚಿನ್ ತೆಂಡೂಲ್ಕರ್ (ಭಾರತ) - 49

2. ವಿರಾಟ್ ಕೊಹ್ಲಿ (ಭಾರತ) - 47

3. ರೋಹಿತ್ ಶರ್ಮಾ (ಭಾರತ) - 30

4. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 30

ಇದನ್ನೂ ಓದಿ: Asia Cup ಪಾಯಿಂಟ್ ಟೇಬಲ್’ನಲ್ಲಿ ಈ ತಂಡವೇ ಅಗ್ರ…: ಪಾಕ್ ವಿರುದ್ಧ ಗೆಲುವು ಕಂಡ ಭಾರತಕ್ಕೆ ಎಷ್ಟನೇ ಸ್ಥಾನ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News