IPLನಲ್ಲಿ ಚೊಚ್ಚಲ ಶತಕ ಸಿಡಿಸಿದ ಸುನಿಲ್ ನರೈನ್: KKR ಪರ ಈ ವಿಶೇಷ ಸಾಧನೆಗೈದ 3ನೇ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆ

Sunil Narine Century: ನರೈನ್ ಇದೀಗ ಐಪಿಎಲ್‌’ನಲ್ಲಿ ಶತಕ ಬಾರಿಸಿದ ಕೆಕೆಆರ್‌’ನ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರೂ ಸಹ, ಈ ಸ್ವರೂಪದಲ್ಲಿ ಇದುವೇ ಮೊದಲ ಶತಕ

Written by - Bhavishya Shetty | Last Updated : Apr 16, 2024, 10:09 PM IST
    • ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ
    • ಐಪಿಎಲ್‌’ನಲ್ಲಿ ಶತಕ ಬಾರಿಸಿದ ಕೆಕೆಆರ್‌’ನ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ
    • ಇದು ಟಿ20 ಕ್ರಿಕೆಟ್‌’ನಲ್ಲಿ ಅವರ ಮೊದಲ ಶತಕವಾಗಿದೆ
IPLನಲ್ಲಿ ಚೊಚ್ಚಲ ಶತಕ ಸಿಡಿಸಿದ ಸುನಿಲ್ ನರೈನ್: KKR ಪರ ಈ ವಿಶೇಷ ಸಾಧನೆಗೈದ 3ನೇ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆ title=
Sunil Narine

Sunil Narine Century: ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆರಂಭಿಕ ಆಟಗಾರ ಸುನಿಲ್ ನರೈನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಮೊದಲ ಶತಕ ದಾಖಲಿಸಿದ್ದಾರೆ.

ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2024ರ 31ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನರೈನ್ 49 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಇನ್ನಿಂಗ್ಸ್’ನಲ್ಲಿ 11 ಬೌಂಡರಿ ಮತ್ತು ಆರು ಸಿಕ್ಸರ್‌’ಗಳನ್ನು ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್‌’ನಲ್ಲಿ ಅವರ ಮೊದಲ ಶತಕವಾಗಿದೆ.

ಇದನ್ನೂ ಓದಿ: ವಯಸ್ಸು 59 ಆದ್ರೂ ಕೋವೈ ಸರಳಾ ಇನ್ನೂ ಮದುವೆಯಾಗದಿರಲು ಕಾರಣ ಇವರೇ..! ಅವರಿಗಾಗಿ ಬದುಕನ್ನೇ ತ್ಯಾಗ ಮಾಡಿದ್ರು…

ಅಂದಹಾಗೆ ನರೈನ್ ಇದೀಗ ಐಪಿಎಲ್‌’ನಲ್ಲಿ ಶತಕ ಬಾರಿಸಿದ ಕೆಕೆಆರ್‌’ನ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದರೂ ಸಹ, ಈ ಸ್ವರೂಪದಲ್ಲಿ ಇದುವೇ ಮೊದಲ ಶತಕ.

IPLನಲ್ಲಿ ಕೆಕೆಆರ್‌ ಪರ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌’ಗಳು

ಬ್ರೆಂಡನ್ ಮೆಕಲಮ್- ಏಪ್ರಿಲ್ 18, 2008

ವೆಂಕಟೇಶ್ ಅಯ್ಯರ್- ಏಪ್ರಿಲ್ 16, 2023

ಸುನಿಲ್ ನರೈನ್- ಏಪ್ರಿಲ್ 16, 2024

ಇದನ್ನೂ ಓದಿ: ಬಾಲ್ ಹಿಡಿಯುವ ಭರದಲ್ಲಿ ಜಾರಿಬಿತ್ತು ರೋಹಿತ್ ಶರ್ಮಾ ಪ್ಯಾಂಟ್..!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News