Free Aadhaar Update: ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೆಲವೇ ದಿನಗಳು ಬಾಕಿ! ಇಲ್ಲಿದೆ ಸುಲಭ ವಿಧಾನ

Free Aadhaar Update: 10 ವರ್ಷಕ್ಕಿಂತ ಹಳೆಯ  ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಅವಶ್ಯಕ. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಉಚಿತವಾಗಿ ಈ ಕೆಲಸವನ್ನು ಮಾಡಬಹುದು. ಆದರೆ, ಇದಕ್ಕಾಗಿ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. 

Written by - Yashaswini V | Last Updated : May 31, 2024, 02:57 PM IST
  • ಯುಐಡಿಎಐ ವೆಬ್‌ಸೈಟ್‌ನಲ್ಲಿ ಮಾತ್ರ ಆಧಾರ್ ಅಪ್‌ಡೇಟ್ ಮಾಡಬಹುದು.
  • ಒಂದೊಮ್ಮೆ ನೀವು ಆಧಾರ್ ಕೇಂದ್ರಕ್ಕೆ ಹೋಗದೆ ಈ ಕೆಲಸವನ್ನು ಉಚಿತವಾಗಿ ಮಾಡಲು ಬಯಸಿದರೆ ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ.
  • ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಜೂನ್ 14 ಕೊನೆ ದಿನವಾಗಿದೆ.
Free Aadhaar Update: ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೆಲವೇ ದಿನಗಳು ಬಾಕಿ! ಇಲ್ಲಿದೆ ಸುಲಭ ವಿಧಾನ  title=

Free Aadhaar Update: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ನವೀಕರಿಸುವುದು ಮುಖ್ಯವಾಗಿದೆ. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಬಹುದು (Free Aadhaar Update). ಆದರೆ, ಇದಕ್ಕಾಗಿ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. 

ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ: 
ನಿಮಗೆಲ್ಲರಿಗೂ ತಿಳಿದಿರುವಂತೆ ಯುಐಡಿಎಐ ವೆಬ್‌ಸೈಟ್‌ನಲ್ಲಿ ಮಾತ್ರ ಆಧಾರ್ ಅಪ್‌ಡೇಟ್ (Aadhaar Update) ಮಾಡಬಹುದು. ಒಂದೊಮ್ಮೆ ನೀವು ಆಧಾರ್ ಕೇಂದ್ರಕ್ಕೆ ಹೋಗದೆ ಈ ಕೆಲಸವನ್ನು ಉಚಿತವಾಗಿ ಮಾಡಲು ಬಯಸಿದರೆ ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಜೂನ್ 14 ಕೊನೆ ದಿನವಾಗಿದೆ. ಅಷ್ಟರೊಳಗೆ ಫ್ರೀ ಆಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು. 

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಸದ್ಯದಲ್ಲೇ ಬರಲಿದೆ ಆಡಿಯೋ ಕಾಲ್ ಫೀಚರ್: ಏನಿದರ ವಿಶೇಷತೆ!

ಆಧಾರ್ ಕಾರ್ಡ್‌ನಲ್ಲಿ ಏನನ್ನು ನವೀಕರಿಸಬಹುದು: 
ಯುಐಡಿಎಐ ಒದಗಿಸುವ ಆಧಾರ್ ಕಾರ್ಡ್‌ನಲ್ಲಿ (Aadhaar Card) ನಿಮ್ಮ ಮನೆಯ ವಿಳಾಸ, ಫೋನ್ ಸಂಖ್ಯೆ, ಹೆಸರು, ಇಮೇಲ್ ಐಡಿ ಇತ್ಯಾದಿ ಪ್ರಮುಖ ಮಾಹಿತಿಗಳನ್ನು ನವೀಕರಿಸಬಹುದು. 

ಇದಲ್ಲದೆ, ಫೋಟೋ, ಬಯೋಮೆಟ್ರಿಕ್ ಮತ್ತು ಐರಿಸ್‌ನಂತಹ ಮಾಹಿತಿಯನ್ನು ಸಹ ಇದರಲ್ಲಿ ನವೀಕರಿಸಬಹುದು. ಆದರೆ, ಈ ಕೆಲಸವನ್ನು ನೀವು ಖುದ್ದಾಗಿ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಬದಲಾಗಿ ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಿ ಈ ಕೆಲಸ ಮಾಡಬಹುದು. ಇದಕ್ಕಾಗಿ ನಿಗದಿತ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ- ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್

ಆನ್‌ಲೈನ್‌ನಲ್ಲಿ ಉಚಿತವಾಗಿ  ಆಧಾರ್ ನವೀಕರಿಸುವುದು ಹೇಗೆ? 
>> ಮೊದಲಿಗೆ  https://uidai.gov.in/ಅಧಿಕೃತ ವೆಬ್‌ಸೈಟ್  ಗೆ ಭೇಟಿ ನೀಡಿ. 
>> ಬಳಿಕ ಅಪ್‌ಡೇಟ್ ಆಧಾರ್ ಆಯ್ಕೆಯನ್ನು ಆರಿಸಿ. 
>> ಆಧಾರ್ ಸಂಖ್ಯೆಯನ್ನು ನಮೂದಿಸಿ, ಓಟಿಪಿ ನಮೂದಿಸಿ ಲಾಗಿನ್ ಆಗಿ. 
>> ಮುಂದಿನ ಪುಟದಲ್ಲಿ ನೀವು ಆಧಾರ್ ಕಾರ್ಡ್ ಅನ್ನು ನವೀಕರಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
>> ಇದರಲ್ಲಿ ನೀವು ನವೀಕರಿಸಬೇಕಾದ ಆಯ್ಕೆಯನ್ನು ಆರಿಸಿ. ಉದಾಹರಣೆಗೆ, ವಿಳಾಸವನ್ನು ಬದಲಾಯಿಸಬೇಕಿದ್ದರೆ ವಿಳಾಸ ಆಯ್ಕೆಯನ್ನು ಆರಿಸಿ.
>> ನಂತರ ನೀವು ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
>> ನಂತರ ನವೀಕರಿಸಿದ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
>> ಇದರ ಬಳಿಕ ವಿನಂತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಭವಿಷ್ಯದ ಉಪಯೋಗಕ್ಕಾಗಿ ಈ ಸಂಖ್ಯೆಯನ್ನು ಸೇವ್ ಮಾಡಿ ಇಡಿ. 
>> ಅಪ್ಡೇಟ್ ಮಾಡಿದ ಕೆಲವೇ ದಿನಗಳಲ್ಲಿ ನಿಮ್ಮ ನವೀಕರಿಸಿದ ಆಧಾರ್ ನಿಮ್ಮ ವಿಳಾಸಕ್ಕೆ ತಲುಪುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News