"ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಸ್ಥಾನ ಪಡೆಯಲ್ಲ" ಸ್ಟಾರ್‌ ಆಟಗಾರ ಹೀಗೆ ಹೇಳಿದ್ದೇಕೆ?

ವಿರಾಟ್ ಕೊಹ್ಲಿ ಕಳೆದ ಕೆಲವು  ಆಟಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಮಾಜಿ ಅನುಭವಿ ಆಟಗಾರ ವೀರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. T20 ವಿಶ್ವಕಪ್ 2022ರ ತಂಡದಲ್ಲಿ ವಿರಾಟ್‌ ಭಾಗಿಯಾಗುವುದು ಅನುಮಾನ. ಅವರ ಸ್ಥಾನದಲ್ಲಿ ಯುವ ಆಟಗಾರನನ್ನು ಸೇರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.   

Written by - Bhavishya Shetty | Last Updated : Jun 28, 2022, 12:21 PM IST
  • ವಿರಾಟ್ ಕೊಹ್ಲಿ ಕಳೆದ ಕೆಲವು ಆಟಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ
  • ವಿಶ್ವಕಪ್‌ನಲ್ಲಿ ಭಾಗಿಯಾವುದು ಅನುಮಾನ ಎಂದ ಸ್ಟಾರ್‌ ಆಟಗಾರ
  • ಕೊಹ್ಲಿ ಬಗ್ಗೆ ವೀರೆಂದ್ರ ಸೆಹ್ವಾಗ್‌ ಹೇಳಿಕೆ
"ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಸ್ಥಾನ ಪಡೆಯಲ್ಲ" ಸ್ಟಾರ್‌ ಆಟಗಾರ ಹೀಗೆ ಹೇಳಿದ್ದೇಕೆ?  title=
Virat Kohli

ಟಿ20 ವಿಶ್ವಕಪ್ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್‌ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಕೊಹ್ಲಿ ಅಭಿಮಾನಿಗಳಿಗೆ ಮಾತ್ರ ಸ್ಟಾರ್‌ ಆಟಗಾರನೊಬ್ಬ ನೀಡಿದ ಹೇಳಿಕೆ ನೋವನ್ನುಂಟು ಮಾಡಬಹುದು. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಟಿ-20 ಕ್ರಿಕೆಟ್‌ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಅಗ್ರ ಮೂರನೇ ಸ್ಥಾನ ಪಡೆದಿದ್ದಾರೆ. ಆದರೆ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗಿಯಾವುದು ಅನುಮಾನ ಎಂದು ಸ್ಟಾರ್‌ ಆಟಗಾರನೊಬ್ಬ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ್‌ನ ಫೋಟೋಕಾಪಿ ಯಾರಿಗಾದರೂ ನೀಡಿದ್ದೀರಾ? ಜಾಗರೂಕರಾಗಿರಿ!

ವಿರಾಟ್ ಕೊಹ್ಲಿ ಕಳೆದ ಕೆಲವು  ಆಟಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ನಡುವೆ ಮಾಜಿ ಅನುಭವಿ ಆಟಗಾರ ವೀರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. T20 ವಿಶ್ವಕಪ್ 2022ರ ತಂಡದಲ್ಲಿ ವಿರಾಟ್‌ ಭಾಗಿಯಾಗುವುದು ಅನುಮಾನ. ಅವರ ಸ್ಥಾನದಲ್ಲಿ ಯುವ ಆಟಗಾರನನ್ನು ಸೇರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. 

ಕಳೆದ ವರ್ಷ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೋಲನುಭವಿಸಿತ್ತು. ಅಂದಿನಿಂದ ವಿರಾಟ್‌ಗೆ ಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ''ಟೀಮ್ ಇಂಡಿಯಾಗೆ ಹಲವು ಆಯ್ಕೆಗಳಿವೆ. ಆದರೆ ಈ ವರ್ಷ ಭಾರತವು ಆಸ್ಟ್ರೇಲಿಯಾದಲ್ಲಿ ಟಿ 20 ವಿಶ್ವಕಪ್ ಆಡಲು ಹೋಗುವಾಗ, ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಮಾತ್ರ ಮೊದಲ ಮೂರು ಸ್ಥಾನಗಳಲ್ಲಿರಬೇಕು ಎಂದು ನಾನು ಬಯಸುತ್ತೇನೆ. ರೋಹಿತ್ ಮತ್ತು ಇಶಾನ್ ಎಡ-ಬಲ ಸಂಯೋಜನೆಯನ್ನು ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಇಶಾನ್ ಮತ್ತು ರಾಹುಲ್ ಕೂಡ ಉತ್ತಮ ಜೋಡಿಯಾಗಲಿದ್ದಾರೆ' ಎಂದು ಅವರು ಹೇಳಿದರು.

ಇದನ್ನೂ ಓದಿ: WhatsAppನಲ್ಲಿ ಬರುವ ಈ ಮೆಸೇಜ್ ಗಳ ಬಗ್ಗೆ ಇರಲಿ ಎಚ್ಚರ ..!

ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿ ಉಮ್ರಾನ್‌ ಮಲಿಕ್‌ ಭಾಗಿಯಾಗಬೇಕು ಎಂಸು ಸೆಹ್ವಾಗ್‌ ಇಚ್ಛಿಸಿದ್ದಾರೆ. ಉಮ್ರಾನ್ ಮಲಿಕ್ ಅವರನ್ನು ಹೊಗಳಿದ ಸೆಹ್ವಾಗ್, 'ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ವೇಗದ ಬೌಲರ್ ನನ್ನ ಮೇಲೆ ಪ್ರಭಾವ ಬೀರಿದ್ದರೆ ಅದು ಉಮ್ರಾನ್ ಮಲಿಕ್" ಎಂದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News