ಇಂದು ಸಂಜೆ 7.30ಕ್ಕೆ ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ 64ನೇ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಹೋರಾಡಲಿವೆ. ಉಭಯ ತಂಡಗಳು ಪ್ಲೇ ಆಫ್ ಪ್ರವೇಶಿಸಲು ಈ ಪಂದ್ಯವು ನಿರ್ಣಾಯಕವಾಗಲಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎರಡೂ ತಂಡಗಳು ಸಮಾನ ಫಲಿತಾಂಶ ಹೊಂದಿದೆ.
ಇದನ್ನು ಓದಿ: Viral Video Today: ಹಾವಿನ ಜೊತೆ ಸುಂದರಿಯ ಚೆಲ್ಲಾಟ, ನಂತರ ನಡೆದಿದ್ದು ಯುವತಿ ಲೈಫಲ್ಲಿ ಮರೆಯಲ್ಲ
ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಸಮಾಧಾನಕರ ಪ್ರದರ್ಶನ ನೀಡುತ್ತಿದೆ. ಇನ್ನು ಇಲ್ಲಿವರೆಗೆ ಆಡಿರುವ ಹನ್ನೆರಡು ಪಂದ್ಯಗಳ ಪೈಕಿ ಆರರಲ್ಲಿ ಸೋತಿದ್ದು, ಇನ್ನುಳಿದ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ.
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಬ್ ಪಂತ್ ವಹಿಸಿಕೊಂಡಿದ್ದು, ಟೀಂ ಉತ್ತಮವಾಗಿ ಆಡುತ್ತಿದೆ. ಈವರೆಗೆ ಹನ್ನೆರಡು ಪಂದ್ಯಗಳನ್ನಾಡಿದ್ದು, ಆರರಲ್ಲಿ ಸೋಲನ್ನು ಅನುಭವಿಸಿ ಇನ್ನುಳಿದ ಪಂದ್ಯದಲ್ಲಿ ಗೆಲುವು ಕಂಡಿದೆ. ಎರಡೂ ತಂಡಗಳು ಸಮಾನ ಫಲಿತಾಂಶ ಹೊಂದಿದ್ದರೂ ಸಹ ಡೆಲ್ಲಿ ಕ್ಯಾಪಿಟಲ್ಸ್ ರನ್ ರೇಟ್ ಕೊಂಚ ಹೆಚ್ಚಿರುವ ಕಾರಣ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿದೆ.
ಒಟ್ಟಾರೆಯಾಗಿ ಪ್ಲೇ ಆಫ್ ಪ್ರವೇಶಿಸಲು ಉಭಯ ತಂಡಗಳು ಇಂದು ಹೋರಾಟ ನಡೆಸಲಿವೆ. ಪಂಜಾಬ್ ಕಿಂಗ್ಸ್ ಕಳೆದ ಬಾರಿ ಆರ್‌ಸಿಬಿ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗೆಲುವು ಕಂಡಿತ್ತು. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವೂ ಸಹ ರಾಜಸ್ಥಾನ ರಾಯಲ್ಸ್ ವಿರುದ್ಧ ಅಮೋಘ ಗೆಲುವನ್ನು ಸಾಧಿಸಿತ್ತು. ಸದ್ಯ ಗೆಲುವಿನ ಲಯದಲ್ಲಿರುವ ಉಭಯ ತಂಡಗಳಲ್ಲಿ ಇಂದು ಯಾರಿಗೆ ವಿಜಯ ಮಾಲೆ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನು ಓದಿ: Kisan Credit Card ಮೂಲಕ ಬಡ್ಡಿರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ? ಇಲ್ಲಿದೆ ನಿಜಾಂಶ
ಸಂಭಾವ್ಯ ಆಟಗಾರರ ಪಟ್ಟಿ:
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಮಯಾಂಕ್ ಅಗರ್ವಾಲ್ (ಕ್ಯಾ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ರಿಷಿ ಧವನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಬ್ ಪಂತ್ (ಕ್ಯಾ & ವಿ.ಕೀ), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.