146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆದ ಬ್ಯಾಟರ್!! ಹೇಗೆ ಗೊತ್ತಾ

Timed Out Rule in Cricket: ಇದರ ಪ್ರಕಾರ, ಯಾವುದೇ ಒಬ್ಬ ಆಟಗಾರ ಸಮಯದ ಒಳಗೆ ಮೈದಾನಕ್ಕೆ ಬರದಿದ್ದರೆ, ಆತನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಯಾರೂ ಈ ನಿಯಮದಿಂದ ಹೊರಗುಳಿರಲಿಲ್ಲ,

Written by - Bhavishya Shetty | Last Updated : Nov 6, 2023, 06:39 PM IST
    • ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ
    • ಜಂಟಲ್‌’ಮ್ಯಾನ್ ಆಟ ಎಂದು ಕರೆಯಲ್ಪಡುವ ಈ ಆಟದಲ್ಲಿ ವಿಚಿತ್ರ ನಿಯಮ ಬಳಕೆ
    • ಬ್ಯಾಟರ್ ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆಗಿದ್ದಾನೆ
146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆದ ಬ್ಯಾಟರ್!! ಹೇಗೆ ಗೊತ್ತಾ title=
Angelo Mathews-Timed Out

Angelo Mathews Timed Out: ಕ್ರಿಕೆಟ್’ನಲ್ಲಿ ‘ಟೈಮ್ಡ್ ಔಟ್’ ಎಂಬ ನಿಯಮವಿದೆ. ಇದರ ಬಗ್ಗೆ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಈ ನಿಯಮವನ್ನು ಸಮಯಕ್ಕೆ ಸರಿಯಾಗಿ ಆಟವು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವ ಸಲುವಾಗಿ ಜಾರಿಗೆ ತರಲಾಗಿದೆ. ಒಂದು ವೇಳೆ ಆಟಗಾರ ಅನಾವಶ್ಯಕವಾಗಿ ವಿಳಂಬ ಮಾಡಿದರೆ ಅಥವಾ ಶಿಸ್ತು ಕಾಯ್ದುಕೊಳ್ಳದಿದ್ದರೆ ಅವರ ವಿರುದ್ಧ ಈ ನಿಯಮದ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಇದರ ಪ್ರಕಾರ, ಯಾವುದೇ ಒಬ್ಬ ಆಟಗಾರ ಸಮಯದ ಒಳಗೆ ಮೈದಾನಕ್ಕೆ ಬರದಿದ್ದರೆ, ಆತನನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಯವರೆಗೆ ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಯಾರೂ ಈ ನಿಯಮದಿಂದ ಹೊರಗುಳಿರಲಿಲ್ಲ, ಆದರೆ 2023ರ ವಿಶ್ವಕಪ್‌’ನಲ್ಲಿ ಈ ನಿಯಮ ಚಾಲೂ ಆಗಿದೆ, ಅಂದರೆ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ಬ್ಯಾಟರ್ ಬೌಲ್ಡ್, ಕ್ಯಾಚ್, ರನೌಟ್ ಆಗದೆ ಮೈದಾನಕ್ಕೂ ಬರದೆ ಔಟ್ ಆಗಿದ್ದಾನೆ.

ಇದನ್ನೂ ಓದಿ: ಭಾರತದ ಸತತ ಗೆಲುವಿನ ಮಧ್ಯೆ ನಾಯಕತ್ವದ ಬಗ್ಗೆ ಹೀಗಂದ ರವೀಂದ್ರ ಜಡೇಜಾ

ವಿಶ್ವಕಪ್‌’ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ನಡೆದ ಘಟನೆ ಕ್ರಿಕೆಟ್‌ ಲೋಕಕ್ಕೆ ಕಪ್ಪು ಮಚ್ಚೆಯಾಗಿ ಉಳಿದಿದೆ. ಜಂಟಲ್‌’ಮ್ಯಾನ್ ಆಟ ಎಂದು ಕರೆಯಲ್ಪಡುವ ಈ ಆಟದಲ್ಲಿ, ಶಕಿಬ್ ಅಲ್ ಹಸನ್ ಅವರು ನಿಯಮಗಳ ಲಾಭವನ್ನು ಪಡೆದುಕೊಂಡು ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಅವರನ್ನು ಔಟ್ ಮಾಡಿದ್ದಾರೆ.

ಮ್ಯಾಥ್ಯೂಸ್ ತಡವಾಗಿದ್ದೇಕೆ?

ಮೈದಾನಕ್ಕೆ ಬರಲೆಂದು ಹೆಲ್ಮೆಟ್ ಅನ್ನು ಬಿಗಿಗೊಳಿಸುತ್ತಿದ್ದಾಗ ಸ್ಟ್ರಿಪ್ ಮುರಿದುಹೋಗಿದೆ. ಇದೇ ಕಾರಣದಿಂದ ಬದಲಾಯಿಸಿಕೊಂಡು ಬರಲೆಂದು ಡ್ರೆಸ್ಸಿಂಗ್ ರೂಮಿನ ಕಡೆ ಮ್ಯಾಥ್ಯೂಸ್ ತೆರಳಿದ್ದಾರೆ. ಆದರೆ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಲಾಭ ಪಡೆದುಕೊಂಡ ಬಾಂಗ್ಲಾ ನಾಯಕ ಅಂಪೈರ್ ಜೊತೆ ಮಾತನಾಡಿದ್ದಾರೆ..

ಈ ಸಂದರ್ಭದಲ್ಲಿ ಮ್ಯಾಥ್ಯೂಸ್ ಶಕೀಬ್ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಅದಕ್ಕೆ ಒಪ್ಪಲು ಸಿದ್ಧರಿರಲಿಲ್ಲ. ಈ ಬಳಿಕ ಪರಿಶೀಲಿಸಿದ ಥರ್ಡ್ ಅಂಪೈರ್ ನಿಯಮಾನುಸಾರ ಮ್ಯಾಥ್ಯೂಸ್ ಔಟಾಗಿದ್ದಾರೆ ಎಂದು ನಿರ್ಧಾರ ಹೊರಡಿಸಿತು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ನಿಯಮದ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಔಟ್ ಆದ ಬಳಿಕ ಮತ್ತೊಬ್ಬ ಬ್ಯಾಟ್ಸ್‌ಮನ್‌’ಗೆ ಬೌಲ್ ಮಾಡುವ ಚೆಂಡಿನ ನಡುವಿನ ಅಂತರವು 3 ನಿಮಿಷಗಳನ್ನು ಮೀರಬಾರದು.

ಇದನ್ನೂ ಓದಿ: ಅವಾಚ್ಯ ಪದ ಬಳಸಿ ಜಡೇಜಾಗೆ ನಿಂದಿಸಿದ ರೋಹಿತ್ ಶರ್ಮಾ –ಸ್ಟಂಪ್ ಮೈಕ್’ನಲ್ಲಿ ರೆಕಾರ್ಡ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲು:

ಮ್ಯಾಥ್ಯೂಸ್ ಅವರ ಟೈಮ್ ಔಟ್ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇನ್ನು ಈ ಘಟನೆ ನಡೆದಿರುವುದು ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಇದೇ ಮೊದಲ ಬಾರಿಗೆ. ಇನ್ನು ಪೆವಿಲಿಯನ್‌’ಗೆ ಮರಳಿದ ಮ್ಯಾಥ್ಯೂಸ್ ಡಗ್‌ ಔಟ್‌’ನಲ್ಲಿ ಕುಳಿತಿದ್ದಾಗ ಕಣ್ಣೀರು ಸುರಿಸಿದ್ದರು. ಈ ದೃಶ್ಯ ವೈರಲ್ ಆಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

Trending News