ICC Ranking: ಸತತ ದ್ವಿಶತಕದ ಬೆನ್ನಲ್ಲೇ ICC ರ್ಯಾಂಕಿಂಗ್’ನಲ್ಲಿ ಜಿಗಿತ ಕಂಡ ಯಶಸ್ವಿ ಜೈಸ್ವಾಲ್: ಅಗ್ರ 20ರಲ್ಲಿ ಸ್ಥಾನ

Yashasvi Jaiswal ICC Ranking: ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌’ನಲ್ಲಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌’ನಲ್ಲಿ 209 ರನ್ ಗಳಿಸಿದ್ದರು. ನಂತರ, ರಾಜ್‌ಕೋಟ್‌’ನಲ್ಲಿ ನಡೆದ ಎರಡನೇ ಇನ್ನಿಂಗ್ಸ್‌’ನಲ್ಲಿ 214 ರನ್‌’ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ, ಭಾರತವು ಇಂಗ್ಲೆಂಡ್ ವಿರುದ್ಧ 434 ರನ್‌’ಗಳ ದೊಡ್ಡ ಗೆಲುವು ಸಾಧಿಸಿತು.

Written by - Bhavishya Shetty | Last Updated : Feb 21, 2024, 05:52 PM IST
    • ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸತತ ದ್ವಿಶತಕ
    • ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟಾಪ್ 20 ತಲುಪಿದ ಯಶಸ್ವಿ ಜೈಸ್ವಾಲ್
    • ಟೆಸ್ಟ್‌’ಗಳಲ್ಲಿ ದ್ವಿಶತಕ ಸಿಡಿಸಿದ 7 ಕ್ರಿಕೆಟಿಗರ ಪಟ್ಟಿಗೆ ಜೈಸ್ವಾಲ್ ಸೇರ್ಪಡೆ
ICC Ranking: ಸತತ ದ್ವಿಶತಕದ ಬೆನ್ನಲ್ಲೇ ICC ರ್ಯಾಂಕಿಂಗ್’ನಲ್ಲಿ ಜಿಗಿತ ಕಂಡ ಯಶಸ್ವಿ ಜೈಸ್ವಾಲ್: ಅಗ್ರ 20ರಲ್ಲಿ ಸ್ಥಾನ title=
Yashasvi Jaiswal

Yashasvi Jaiswal ICC Ranking: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸತತ ದ್ವಿಶತಕ ಬಾರಿಸುವ ಮೂಲಕ ಭಾರತದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 14 ಸ್ಥಾನಗಳ ಜಿಗಿತದೊಂದಿಗೆ ಟಾಪ್ 20 ತಲುಪಿದ್ದಾರೆ. ಸದ್ಯ ಬ್ಯಾಟಿಂಗ್ ರ್ಯಾಂಕಿಂಗ್’ನಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಸತತ ಎರಡು ಟೆಸ್ಟ್‌’ಗಳಲ್ಲಿ ದ್ವಿಶತಕ ಸಿಡಿಸಿದ 7 ಕ್ರಿಕೆಟಿಗರ ಪಟ್ಟಿಗೆ ಜೈಸ್ವಾಲ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ 22 ವರ್ಷದ ಜೈಸ್ವಾಲ್ ಅವರು ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿ ನಂತರ ಸತತ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಾಡೆಲ್ ಆತ್ಮಹತ್ಯೆ ಪ್ರಕರಣ: ಸ್ಟಾರ್ ಕ್ರಿಕೆಟಿಗನಿಗೆ ಸಮನ್ಸ್ ಜಾರಿ ಮಾಡಿದ ಪೊಲೀಸರು

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್‌’ನಲ್ಲಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌’ನಲ್ಲಿ 209 ರನ್ ಗಳಿಸಿದ್ದರು. ನಂತರ, ರಾಜ್‌ಕೋಟ್‌’ನಲ್ಲಿ ನಡೆದ ಎರಡನೇ ಇನ್ನಿಂಗ್ಸ್‌’ನಲ್ಲಿ 214 ರನ್‌’ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ, ಭಾರತವು ಇಂಗ್ಲೆಂಡ್ ವಿರುದ್ಧ 434 ರನ್‌’ಗಳ ದೊಡ್ಡ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಸರಣಿಯ ನಾಲ್ಕನೇ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿದೆ.

ರಾಜ್‌ಕೋಟ್‌ ಟೆಸ್ಟ್‌’ನಲ್ಲಿ ‘ಪ್ಲೇಯರ್‌ ಆಫ್‌ ದಿ ಮ್ಯಾಚ್‌’ ಆಗಿದ್ದ ರವೀಂದ್ರ ಜಡೇಜಾ ಮೊದಲ ಶತಕ 112 ರನ್‌ ಗಳಿಸಿ ಬ್ಯಾಟಿಂಗ್‌ ರ‍್ಯಾಂಕಿಂಗ್‌’ನಲ್ಲಿ 41ನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಏರಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೊಂದೆಡೆ ರಾಜ್‌ಕೋಟ್‌’ನಲ್ಲಿ 500 ಟೆಸ್ಟ್ ವಿಕೆಟ್‌’ಗಳ ಕ್ಲಬ್‌’ಗೆ ಸೇರ್ಪಡೆಗೊಂಡ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಂತರ ಒಂದು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್ ಆಲ್ ರೌಂಡರ್ ಶ್ರೇಯಾಂಕದಲ್ಲಿ ಜಡೇಜಾ ಮತ್ತು ಅಶ್ವಿನ್ ಮೊದಲ ಎರಡು ಸ್ಥಾನಗಳಲ್ಲಿ ಉಳಿದಿದ್ದಾರೆ.

ಇದನ್ನೂ ಓದಿ:  ‘ಲೋಕ’ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್… 14 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲು ಸಕಲ ಸಿದ್ಧತೆ

ಟಾಪ್-10ರಲ್ಲಿ ಕೊಹ್ಲಿ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ರ‍್ಯಾಂಕಿಂಗ್‌’ನಲ್ಲಿ ಒಂದು ಸ್ಥಾನ ಹೆಚ್ಚಿಸಿಕೊಂಡು 12ನೇ ಸ್ಥಾನಕ್ಕೆ ತಲುಪಿದ್ದಾರೆ. ರಾಜ್‌ಕೋಟ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌’ನಲ್ಲಿ ಅವರು 131 ರನ್ ಗಳಿಸಿದ್ದರು. ಇನ್ನು ಶುಭ್‌ಮನ್ ಗಿಲ್ (91) ಮೂರು ಸ್ಥಾನಗಳನ್ನು ಹೆಚ್ಚಿಸಿಕೊಂಡು 35ನೇ ಸ್ಥಾನಕ್ಕೆ ತಲುಪಿದ್ದಾರೆ. ರಾಜ್‌ಕೋಟ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ರ್ಯಾಂಕಿಂಗ್‌ನಲ್ಲಿ 75 ಮತ್ತು 100ನೇ ಸ್ಥಾನ ಪ್ರವೇಶಿಸಿದ್ದಾರೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಲ್ಲಿ ಆಡದಿದ್ದರೂ, ಏಳನೇ ಸ್ಥಾನದಲ್ಲಿದ್ದಾರೆ. ಟಾಪ್ 10 ಬ್ಯಾಟಿಂಗ್ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಕೊಹ್ಲಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News