PSI ಅಕ್ರಮ ನೇಮಕಾತಿ ಹಗರಣದಲ್ಲಿ ಅಶೋಕ್, ಆರಗ ಜ್ಞಾನೇಂದ್ರ, ವಿಜಯೇಂದ್ರ ಹೆಸರು ಕೇಳಿ ಬರ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಯಾಗಲಿ ಎಂದು ನಾನು ಹೇಳಿದ್ದೇನೆ. ನನಗೆ ಇರೋ ಮಾಹಿತಿ ಮೇಲೆ ಕೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ..
ಕಾಂಗ್ರೆಸ್ ತಿರುಕನ ಕನಸು ಕಾಣ್ತಿದೆ ಎಂಬ ಯಡಿಯೂರಪ್ಪ ಹೇಳಿಕೆ ಅಂತರಾಳದಿಂದ ಹೇಳೋ ಮಾತಲ್ಲ ಅದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ದಾರೆ. ಆ ಬಗ್ಗೆ ಅವರಿಗೆ ನೋವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ..
ನಮ್ಮ ಪಕ್ಷದ ಬಗ್ಗೆ ಒಂದೂ ಸೀಟು ಗೆಲ್ಲಲ್ಲ ಅನ್ನೋದು ರಾಜಕೀಯವಾಗಿ ಏನೇನೂ ತಿಳಿವಳಿಕೆ ಇಲ್ಲದ ವ್ಯಕ್ತಿ ಹೇಳುವ ಮಾತು. ನಾವುಗಳೆಲ್ಲ ತಂತ್ರಗಾರಿಕೆ ಮಾಡಿ ಸೋಲಿಸುತ್ತೇವೆ ಎಂಬ ಭಯ ಇದ್ದರೆ ಅವರು ಕೊನೆವರೆಗೂ ಕ್ಷೇತ್ರವನ್ನು ಸೀಕ್ರೆಟ್ ಆಗಿ ಇಟ್ಟುಕೊಂಡು ಚುನಾವಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಸಲೀಂ ಅಹ್ಮದ್, ದೃವನಾರಾಯಣ್ ಸೇರಿ ಪಕ್ಷದ ಶಾಸಕರು, ಹಿರಿಯ ನಾಯಕರು ಭಾಗಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.