ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆದೇಶಿಸಿರುವ ಔಷಧಿ Hydroxychloroquine ಅಡ್ಡಪರಿಣಾಮಗಳನ್ನು ಹೊಂದಿದೆ. ಅಂದರೆ, ಈ ಔಷಧಿಯ ಬಳಕೆಯೂ ಅಪಾಯಕಾರಿ. ಕರೋನಾ ರೋಗಿಗಳ ಸೋಂಕನ್ನು ತಡೆಗಟ್ಟಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಸಹಾಯಕವಾಗಬಹುದು, ಆದರೆ ಇದು ಅಡ್ಡಪರಿಣಾಮಗಳನ್ನು ಸಹ ಹೊಂದಿದೆ. ಈ ಅಡ್ಡಪರಿಣಾಮಗಳು ಸಹ ಭಯಾನಕವಾಗಬಹುದು, ಅದನ್ನು ತೆಗೆದುಕೊಳ್ಳುವ ವ್ಯಕ್ತಿಯು ಈಗಾಗಲೇ ಹೃದಯ ಸಂಬಂಧಿತ ಕಾಯಿಲೆಗಳ ರೋಗಿಯಾಗಿದ್ದಾರೆ.
ವಿಶ್ವದ ಪ್ರಸಿದ್ಧ ಆಸ್ಪತ್ರೆ ಮಾಯೊ ಕ್ಲಿನಿಕ್ ಹೃದ್ರೋಗ ತಜ್ಞರು ಈ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ. ಈ ಔಷಧಿಯ ಅಡ್ಡಪರಿಣಾಮಗಳ ಬಗ್ಗೆ ಎಲ್ಲಾ ವೈದ್ಯರಿಗೆ ತಿಳಿದಿದೆ ಎಂದು ಜೆನೆಟಿಕ್ ಕಾರ್ಡಿಯಾಲಜಿಸ್ಟ್ ಒಬ್ಬರು ಮಾಹಿತಿ ನೀಡಿದ್ದಾರೆ. ಯಾರು ಬೇಕಾದರೂ ಔಷಧಿ ಅಂಗಡಿಗೆ ಹೋಗಿ ಈ ಔಷಧಿಯನ್ನು ಖರೀದಿಸುವಂತಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಯಾವುದೇ ಓರ್ವ ವ್ಯಕ್ತಿ ಈ ಔಷಧಿಯನ್ನು ಅಕ್ರಮವಾಗಿ ಪಡೆದು ಸೇವಿಸಿದರೆ ಈ ಔಷಧಿಯ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಬಹಳ ಅಪಾಯಕಾರಿ ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ವೈದ್ಯರು ಹೇಳಿದ್ದಾರೆ. ವಿಶ್ವದ ಯಾವುದೇ ವೈದ್ಯರು ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಈ ಔಷಧಿಗೆ ಸುಕಾಸುಮ್ಮನೆ ರಾಜಕೀಯ ಪ್ರಚಾರ ನೀಡಲಾಗುತ್ತಿರುವುದು ಇನ್ನಷ್ಟು ಆಶ್ಚರ್ಯಕ್ಕೆ ಈಡು ಮಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಯಾವುದೇ ಓರ್ವ ವೈದ್ಯ ಈ ಔಷಧಿಯನ್ನು ರೋಗಿಯ ಮೇಲೆ ಪ್ರಯೋಗಿಸುವ ಮೊದಲು ಅದರ ಅಡ್ಡಪರಿಣಾಮಗಳ ಕುರಿತು ಮಾಹಿತಿ ನೀಡುವುದು ಅವಶ್ಯಕವಾಗಿದೆ. ಅವರು ಈ ರೀತಿ ಮಾಡದೆ ಹೋದಲ್ಲಿ ಅದು ತುಂಬಾ ದೊಡ್ಡ ತಪ್ಪು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಔಷಧಿಯ ಪ್ರಿಸ್ಕ್ರಿಪ್ಶನ್ ಸರಿಯಾದ ರೀತಿಯಲ್ಲಿ ನೀಡದೆ ಹೋದಲ್ಲಿ ಅಥವಾ ಈ ಔಷಧಿಯನ್ನು ನಿಗದಿತ ಪ್ರಮಾಣದಲ್ಲಿ ರೋಗಿಗೆ ನೀಡದೆ ಹೋದಲ್ಲಿ, ರೋಗಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ರೋಗಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಅಥವಾ ಗಂಭೀರ ಹೃದಯ ಕಾಯಿಲೆಗೆ ರೋಗಿ ಗುರಿಯಾಗುವ ಸಾಧ್ಯತೆ ಇದೆ. ಆದರೆ ಅಮೇರಿಕಾದಲ್ಲಿ ಈ ಔಷಧಿಗೆ ಏಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಔಷಧಿಯನ್ನು ಕೊರೊನಾ ಚಿಕಿತ್ಸೆಗೆ ಟೆಸ್ಟ್ ಮಾಡಲಾಗಿಲ್ಲ. ಈ ಔಷಧಿಯನ್ನು ಮಲೇರಿಯಾ ಚಿಕಿತ್ಸೆಗಾಗಿ ಟೆಸ್ಟ್ ಮಾಡಲಾಗಿದೆ. ಕೊರೊನಾ ತಡೆಗಟ್ಟುವಲ್ಲಿ ಇದು ಯಾವುದೇ ಪಾತ್ರ ನಿರ್ವಹಿಸುವುದಿಲ್ಲ. ಇತ್ತೀಚಿಗೆ ನಡೆಸಲಾಗಿರುವ ಒಂದು ಸಂಶೋಧನೆ ಪ್ರಕಾರ ಹೈಡ್ರೋಕ್ಸಿಕ್ಲೋರೋಕ್ವಿನ್ ಹಾಗೂ ಅಜಿತ್ರೋಮೈಸಿನ್ ಡೋಸ್ ನೀಡಲಾಗಿರುವ ಶೇ.11 ರಷ್ಟು ರೋಗಿಗಳು ಹೃದ್ರೋಗಕ್ಕೆ ತುತ್ತಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಸಹ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ. ಇದನ್ನು ಸೇವಿಸಿದ ನಂತರ ತಲೆನೋವು, ತಲೆತಿರುಗುವಿಕೆ, ಹಸಿವು ಕಡಿಮೆಯಾಗುವುದು, ಹೊಟ್ಟೆ ನೋವು, ವಾಂತಿ ಮತ್ತು ಚರ್ಮದ ದದ್ದುಗಳು ಉಂಟಾಗುವ ಸಾಧ್ಯತೆ ಇದೆ. ಒಂದು ವೇಳೆ ಮಿತಿಮೀರಿದ ಸೇವನೆಯಿಂದ ರೋಗಿಯು ಮೂರ್ಛೆ ಹೋಗುವ ಸಾಧ್ಯತೆ ಇದೆ.
ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಒಂದು ವೇಳೆ ಈ ಔಷಧಿಯನ್ನು ನೀಡಿದರೆ, ಅದು ಅವನಿಗೆ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದ ವೈದ್ಯರು ಕರೋನಾಗೆ ಈ ಔಷಧಿಯನ್ನು ಬಳಸುವುದು ವೈದ್ಯಕೀಯ ವಿಜ್ಞಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
ರಿಪಬ್ಲಿಕನ್ ಹಾಗೂ ಡೆಮಾಕ್ರೆಟಿಕ್ ಹೆಸರಿನಲ್ಲಿ ಒಂದು ಔಷಧಿಗೆ ಅತಿ ಹೆಚ್ಚು ಪ್ರಚಾರ ನೀಡುತ್ತಿರುವುದನ್ನು ನಾನು ಇದೆ ಮೊದಲಬಾರಿಗೆ ನೋಡಿದ್ದೇನೆ. ಈ ರೀತಿ ವಿಶ್ವದಲ್ಲಿ ಎಂದಿಗೂ ನಡೆದಿಲ್ಲ ಎಂದು ವೈದ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.