ಮಲೇರಿಯಾ ಔಷಧಿಗೆ ಸಂಬಂಧಿಸಿದಂತೆ ಅಧ್ಯಯನದಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕ್ಯಾನ್ಸರ್ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ರತಿಜೀವಕ ಅಜಿಥ್ರೊಮೈಸಿನ್ ಔಷಧದ ಮಿಶ್ರಣವನ್ನು ನೀಡುವುದರಿಂದ ಅಪಾಯ ಹೆಚ್ಚು ಎಂದು ಯುಎಸ್ ಸಂಶೋಧಕರು ಹೇಳಿದ್ದಾರೆ.

Last Updated : May 29, 2020, 10:50 AM IST
ಮಲೇರಿಯಾ ಔಷಧಿಗೆ ಸಂಬಂಧಿಸಿದಂತೆ ಅಧ್ಯಯನದಿಂದ ಆಘಾತಕಾರಿ ಮಾಹಿತಿ ಬಹಿರಂಗ title=

ಚಿಕಾಗೊ: ಕೊರೊನಾವೈರಸ್  ಕೋವಿಡ್ -19 (Covid-19)  ಹರಡುವುದನ್ನು ತಡೆಯಲು ಇಲ್ಲಿಯವರೆಗೆ ಯಾವುದೇ ಖಚಿತ ಔಷಧಿಗಳನ್ನು ಕಂಡು ಹಿಡಿಯಲಾಗಿಲ್ಲ. ಕರೋನಾ-ಸೋಂಕಿತ ರೋಗಿಗಳಿಗೆ ಪ್ರಸ್ತುತ ಮಲೇರಿಯಾದಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿ ಔಷಧಿಯನ್ನು ನೀಡಲಾಗುತ್ತಿದೆ. ಏತನ್ಮಧ್ಯೆ ಕರೋನಾ ಸೋಂಕಿತ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಮತ್ತು ಪ್ರತಿಜೀವಕ ಅಜಿಥ್ರೊಮೈಸಿನ್ ಔಷಧದ ಮಿಶ್ರಣವನ್ನು ನೀಡುವುದರಿಂದ ಅಪಾಯವಾಗಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಯುಎಸ್ (US) ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

ಔಷಧ ಮಿಶ್ರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಹಳವಾಗಿ ಪ್ರಚಾರ ಮಾಡಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. ಆದಾಗ್ಯೂ ಆರಂಭಿಕ ಫಲಿತಾಂಶಗಳು ವೈದ್ಯರು ಈ ಎರಡು ಔಷಧಿಗಳನ್ನು ಕ್ಯಾನ್ಸರ್ ರೋಗಿಗಳಿಗೆ ನೀಡಬಾರದು ಎಂದು ತೋರಿಸುತ್ತದೆ, ಅದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುವವರೆಗೆ ಕ್ಯಾನ್ಸರ್ ರೋಗಿಗಗಳಿಗೆ ಈ ಔಷಧಿಯನ್ನು ನೀಡದಿರುವುಡು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ಆಸ್ಕೊ) ಅಧ್ಯಕ್ಷ ಡಾ. ಹೊವಾರ್ಡ್ ಬಾರ್ಡಿಸ್ ಪತ್ರಿಕಾಗೋಷ್ಠಿಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಔಷಧಿಗಳ ಸಂಯೋಜನೆಯು ರೋಗಿಯ ಜೀವದ ಅಪಾಯವನ್ನು ಹೆಚ್ಚಿಸುತ್ತದೆ.  ಕರೋನವೈರಸ್ (Coronavirus)  COVID-19 ಸೋಂಕುಗಳಿಗೆ ಚಿಕಿತ್ಸೆ ನೀಡಲು ಔಷಧಿ ಸಂಯೋಜನೆಯನ್ನು ಆರಂಭದಲ್ಲಿ ಬಳಸಲಾಗುತ್ತಿತ್ತು. ಆದಾಗ್ಯೂ ಇತ್ತೀಚಿನ ಅಂಕಿ ಅಂಶಗಳು ಅನುಮಾನವನ್ನು ಹುಟ್ಟುಹಾಕುತ್ತವೆ. ಈ ಎರಡು ಔಷಧಿಗಳ ಸಂಯೋಜನೆಯು ಕ್ಯಾನ್ಸರ್ ರೋಗಿಗಳಿಗೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.

ಎರಡೂ ಔಷಧಿಗಳ ಮಿಶ್ರಣವನ್ನು ಸೇವಿಸುವುದರಿಂದ 30 ದಿನಗಳಲ್ಲಿ ರೋಗಿಯು ಸಾಯುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಾಂಡರ್ಬಿಲ್ಟ್ ವಿಶ್ವವಿದ್ಯಾಲಯ ವೈದ್ಯಕೀಯ ವ್ಯವಸ್ಥೆಯ ಡಾ. ಜೆರೆಮಿ ವಾರ್ನರ್ ಮಾಧ್ಯಮಕ್ಕೆ ತಿಳಿಸಿದರು.

ಮಾರ್ಚ್ 21 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಬಗ್ಗೆ ಟ್ವೀಟ್ ಮಾಡಿದ್ದು ಈ ಎರಡು ಔಷಧಿಗಳ ಸಂಯೋಜನೆಯನ್ನು 'ವೈದ್ಯಕೀಯ ಇತಿಹಾಸದಲ್ಲಿ ಅತಿದೊಡ್ಡ ಆಟ ಬದಲಾಯಿಸುವುದರಲ್ಲಿ ಒಂದು ಎಂದು ಅವರು ಬಣ್ಣಿಸಿದರು.

Trending News