ಮಹಾತ್ಮ ಗಾಂಧಿ ಹೋರಾಟ ನೆನೆಸಿ ಶರತ್ ಬಚ್ಚೇಗೌಡ ಹೋರಾಟ ಮಾಡ್ತಿದ್ದಾರೆ. ಇದು ಸ್ಯಾಂಪಲ್ ಅಷ್ಟೇ, ನಮ್ಮ ಶಾಸಕರಿಗೆಲ್ಲಾ ಈ ರೀತಿ ಅನ್ಯಾಯ ಆಗಿದೆ.. ಹೊಸದಾಗಿ ಗೆದ್ದ ಶಾಸಕರಿಗೆ ಈ ರೀತಿ ಅನ್ಯಾಯ ಎಷ್ಟು ಸರಿ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ.. ಮುಖ್ಯಮಂತ್ರಿಗಳ ಸಹಿ, ಅವರ ಮಾತಿಗೆ ಕಿಮ್ಮತ್ತಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
ಮೈಸೂರಿನಲ್ಲಿ ಎರಡನೇ ದಿನದ ಕಾಂಗ್ರೆಸ್ ಪ್ರಜಾಧ್ವನಿಯಾತ್ರೆ
ಡಿ.ಕೆ.ಶಿವಕುಮಾರ್ ಆಂಡ್ ಟೀಮ್ ನೇತೃತ್ವದಲ್ಲಿ ಕೈಯಾತ್ರೆ
ಕೆ.ಆರ್ ನಗರ ಹಾಗೂ ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಪ್ರವಾಸ
ಬಿಜೆಪಿ ಹಾಗೂ ಜೆಡಿಎಸ್ ಮಣಿಸಲು ಕೈ ನಾಯಕರ ರಣತಂತ್ರ
ನಿನ್ನೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ʻಕೈʼ ಶಕ್ತಿ ಪ್ರದರ್ಶನ
ಬಾಗಲಕೋಟೆಯ ಕಲಾದಗಿ ಗ್ರಾಮದಲ್ಲಿ ಇಂದು ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ 2ನೇ ಹಂತದ ಯಾತ್ರೆ ನಡೆಯಲಿದೆ.. ಗುರುಲಿಂಗೇಶ್ವರ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ..
ಟಿಕೆಟ್ ಆಕಾಂಕ್ಷಿಗಳ ಪರ ಘೋಷಣೆ ಕೂಗಿದ ಬೆಂಬಲಿಗರು
ಪಕ್ಷದ ಅಧ್ಯಕ್ಷರ ಮುಂದೆ ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ
ಕೈ ಮುಖಂಡರಿಂದಲೇ ತುಂಬಿ ತುಳುಕಿದ ಮುಖ್ಯ ವೇದಿಕೆ
ಗರಂ ಆದ ಡಿಕೆಶಿಯಿಂದ ಎಲ್ಲರೂ ಕೆಳಗಿಳಿಯಲು ಸೂಚನೆ
ಆದರೂ ಕೆಳಗಿಳಿಯದೇ ಸ್ಟೇಜ್ ಮೇಲೆ ನಿಂತ ಮುಖಂಡರು
ಬಳಿಕ ಕೈ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡ ಡಿಕೆಶಿ
ಮಾಜಿ ಸಚಿವ ರಮೇಶ್ ಜಾರಕಿಹೋಳಿ ದೆಹಲಿಗೆ ಭೇಟಿ ನೀಡಿದ್ದು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ..
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಚಿತ್ರದುರ್ಗಕ್ಕೆ ಹೊರಟಿದೆ. ಶಿವಮೊಗ್ಗ, ಚಿತ್ರದುರ್ಗದಲ್ಲಿ ಯಾತ್ರೆಯನ್ನ ಕೈಗೊಂಡಿದ್ದೇವೆ. ಅಸೆಂಬ್ಲಿ ಮುಗಿದ ನಂತರ ಮೈಸೂರಿನಲ್ಲಿ ಯಾತ್ರೆ ನಡೆಸ್ತೇವೆ. ನಮ್ಮ ಯಾತ್ರೆ ನೋಡಿ ಬಿಜೆಪಿ, JDSಗೆ ಹಿಂಸೆಯಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.
ಚುನಾವಣೆ ಹೊಸ್ತಿಲಲ್ಲಿ ಜಾರಕಿಹೊಳಿ ಸಿಡಿ ಷಡ್ಯಂತ್ರದ ಗಲಾಟೆ ಈಗ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಸಿಡಿ ಫ್ಯಾಕ್ಟರಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ, ವಿಡಿಯೋ, ಆಡಿಯೋ ಇರುವ ದಾಖಲೆ ಸಮೇತ ದೆಹಲಿಗೆ ಹಾರಿದ್ದಾರೆ. ಶತಾಯಗತಾಯ ಡಿಕೆಶಿಯನ್ನ ಜೈಲಿಗೆ ಕಳಿಸುತ್ತೇನೆ ಅಂತಿರುವ ಸಾಹುಕಾರ್, ಶಾ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಪ್ರತ್ಯೇಕ ಬಸ್ ಯಾತ್ರೆ. ಉತ್ತರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸ್ ಯಾತ್ರೆ. ದಕ್ಷಿಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಸ್ ಯಾತ್ರೆ. ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಸ್ಥಾನದಿಂದ ಡಿಕೆಶಿ ಯಾತ್ರೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದು ಯಾತ್ರೆ.
ಸಿದ್ದರಾಮಯ್ಯ ಹೆಸರಿನಲ್ಲಿ ಡಿಕೆಶಿ ವಿರುದ್ಧ ನಕಲಿ ಪತ್ರ. ಹೈಕಮಾಂಡ್ಗೆ ಬರೆದಿರುವ ಪತ್ರ ನಕಲಿ ಎಂದ ಸಿದ್ದು. ಪತ್ರದ ಸಮೇತ ಟ್ವೀಟ್ ಮಾಡಿದ ಸಿದ್ದರಾಮಯ್ಯ. ಇದು ದುರುದ್ದೇಶಪೂರಿತ ನಕಲಿ ಪತ್ರ ಎಂದು ಗರಂ.
ಮಂಡ್ಯ ನಗರದೆಲ್ಲೆಡೆ ಕಾಂಗ್ರೆಸ್ ಪ್ಲೆಕ್ಸ್, ಬ್ಯಾನರ್ಗಳ ಅಬ್ಬರ. ಕಾಂಗ್ರೆಸ್ ಸಮಾವೇಶಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ. ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿರುವ ಸಮಾವೇಶ. ಸಮಾವೇಶ ಹಿನ್ನೆಲೆ ಮಂಡ್ಯದಲ್ಲಿ ರಾರಾಜಿಸಿದ ಫ್ಲೆಕ್ಸ್ಗಳು. ಕಾಂಗ್ರೆಸ್ ಮುಖಂಡರ ಬೃಹತ್ ಫ್ಲೆಕ್ಸ್ ನಿರ್ಮಾಣ. ವೇದಿಕೆ ಪರಿಶೀಲಿಸಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ
ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ಬೃಹತ್ ಪ್ರತಿಭಟನೆ. ಬೆಂಗಳೂರಿನ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಪ್ರೊಟೆಸ್ಟ್. ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ ಹೆಸರಿನಲ್ಲಿ ಪ್ರೊಟೆಸ್ಟ್. ಟ್ರಿನಿಟಿ ಸರ್ಕಲ್ನಲ್ಲಿ ನಡೆಯಲಿರುವ ಹೋರಾಟ. ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿ ಹಲವರು ಭಾಗಿ.
ಬಿಜೆಪಿಗೆ ಕಮಿಷನ್ ಸರ್ಕಾರ ಎಂಬ ಬ್ರಾಂಡ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷದಿಂದ ಪರಿಶುದ್ಧವಾದ ಸರ್ಕಾರ ನೀಡಿದ್ದೀವಿ. ಇವತ್ತು ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆಯುತ್ತಿದ್ದಾರೆ. ವಿಧಾನಸೌಧದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ರು.
ಬಿಜೆಪಿ ಕಾಲದಲ್ಲಿ ಡಿಸಿ ಹಾಗೂ ಡಿಜಿ ಜೈಲಿಗೆ ಹೋದರು. ಇತಿಹಾಸದಲ್ಲಿ ಐಎಎಸ್ ಅಧಿಕಾರಿ ಜೈಲಿಗೆ ಹೋಗಿರಲಿಲ್ಲ ಎಂದು ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.. ಈಗ ಎಲ್ಲದರಲ್ಲೂ ಬರೀ ಲಂಚ.. ಲಂಚ.. ಲಂಚ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಜಾತಿ ಮಧ್ಯೆ, ಧರ್ಮ ಧರ್ಮದ ಮಧ್ಯೆ ಬೊಮ್ಮಾಯಿ ಸರ್ಕಾರ ಜಗಳ ತಂದಿಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೋಡೆ ಕೂಡಾ ಕಾಸು ಕಾಸು ಕಾಸು ಅನ್ನುತ್ತೆ ಎಂದಿದ್ದಾರೆ...
ಬಾಗಲಕೋಟೆಯಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ.. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಎಐಸಿಸಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ..
ಬೆಂಗಳೂರಿನ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸಿಬಿಐ ವಿಚಾರಣೆ ಹಾಗೂ ದಾಖಲೆ ಪರಿಶೀಲನೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಳಗಾವಿ ಕಾಂಗ್ರೆಸ್ ಭವನದ ಬಳಿ ನಿನ್ನೆ ಪ್ರತಿಕ್ರಿಯೆ ನೀಡಿದ್ರು. ಸಿಬಿಐ ಅಧಿಕಾರಿಗಳು ಬೆಂಗಳೂರಿನ ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಟ್ರಸ್ಟಿಗಳನ್ನು ವಿಚಾರಣೆ ಮಾಡಿದ್ದಾರೆ. ಆದರೆ ಅವರು ಯಾವ ಮಾಹಿತಿ ಪಡೆದಿದ್ದಾರೆ ಗೊತ್ತಿಲ್ಲ. ಸರ್ಕಾರ ಅವರಿಗೆ ತನಿಖೆ ಮಾಡುವ ಅಧಿಕಾರ ಕೊಟ್ಟಿದ್ದು, ಅವರು ಏನು ಮಾಡುತ್ತಾರೋ ಮಾಡಲಿ. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ನನ್ನ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದರು. ಅವರಿಗೆ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆಯೋ ಅದನ್ನು ಮಾಡಲಿ ಎಂದರು.
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡ್ತೇವೆ!
ಜನವರಿ 9ರಿಂದ ಜಿಲ್ಲಾ ಕೇಂದ್ರಗಳಿಗೆ ಹೋಗುತ್ತೇವೆ. ಎಲ್ಲರೂ ಒಟ್ಟಾಗಿ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಬಳಿಕ ನಾನು ಉತ್ತರ ಕರ್ನಾಟಕ ಪ್ರವಾಸ ಮಾಡ್ತೇನೆ. ಡಿಕೆಶಿ ತಂಡ ದಕ್ಷಿಣ ಕರ್ನಾಟಕ ಪ್ರವಾಸ ಮಾಡುತ್ತೆ ಅಂತಾ ಹೇಳಿದ್ದಾರೆ. tour..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.