ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಅದನ್ನು ಹೊಡೆದು ಕೊಲ್ಲಲಾಗಿತ್ತು. ಅದಾದ ಒಂದು ವಾರದಲ್ಲಿ ಈ ಮನೆಯ 11 ವರ್ಷದ ಪೂಜಾ ಎಂಬ ಬಾಲಕಿಗೆ ಇದೇ ಹಿತ್ತಲಿನಲ್ಲಿ ನಾಗರಹಾವು ಕಾಣೋಕೆ ಶುರುವಾಗಿತ್ತು. ಆಕೆಗೆ ಮಾತ್ರವಲ್ಲ, ಅಕ್ಕಪಕ್ಕದ ಮನೆಗಳ ಮಕ್ಕಳಿಗೆ ಆ ಹಾವು ಕಂಡಿತ್ತು.
ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ. ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ.
ಮೂರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಅಂತ ಅವರು ಹೇಳಿಕೊಳ್ಳುತ್ತಿದ್ದರು. ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು.
ಸಾರ್ವಜನಿಕ ದೂರು ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಆದೇಶಕ್ಕೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಕ್ಷಣ ಸ್ಪಂದಿಸಿದ್ದು, ಸಾರ್ವಜನಿಕರ ಸಂಚಾರ ಮತ್ತು ದೂರುಗಳಿಗೆ ಆಸ್ಪದವಾಗದಂತೆ ಅವಳಿನಗರದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಲು ತಕ್ಷಣ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತರಿಗೆ ಇಂದು ಸೂಚನೆ ನೀಡಿದ್ದಾರೆ.
Journalism National Symposium: ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ 'ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರೈನ್ ಬೋ ಮಾಧ್ಯಮ ಹಬ್ಬ ನಡೆಯಿತು.
ಧಾರವಾಡದ ಕುಮಾರೇಶ್ವರ ಕಾಲನಿ ನಿವಾಸಿ ಮಲ್ಲಿಕಾರ್ಜುನ ದಂಡಿನ್ ನಿವೃತ್ತ ಪೋಲಿಸ್ ಅಧೀಕ್ಷಕರು ಸ್ಥಳೀಯ ಟಿಕಾರೆರಸ್ತೆಯಲ್ಲಿರುವ ಧಾರವಾಡ ಪ್ಲಾಜಾದಲ್ಲಿನ ಸಿ.ಟಿ. ಮೊಬೈಲ್ಸ್ನಿಂದ ದಿ:17/02/2023 ರಂದು ಸ್ಯಾಮ್ಸಂಗ್ಗ್ಯಾಲಕ್ಸಿ ಮೊಬೈಲ್ನ್ನು ರೂ.10,000/-ಗಳಿಗೆ ಖರೀದಿಸಿದ್ದರು.
ಶಾಲಾ ಕಟ್ಟಡಗಳ ದುರಸ್ತಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರಕಾರದ ವಿಶೇಷ ಅನುದಾನ ಮತ್ತು ಅತಿವೃಷ್ಠಿ ನಿಧಿಯಲ್ಲೂ ಆರ್ಥಿಕ ನೆರವು ನೀಡಲಾಗಿದೆ. ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
Urban Credit Society: ಸೊಸೈಟಿಯವರ ಈ ನಡಾವಳಿಕೆಯಿಂದ ತಮಗೆ ಮೋಸವಾಗಿದೆ ಮತ್ತು ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರಿಬ್ಬರು ದಿ:02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಹುಬ್ಬಳ್ಳಿಯ ಶಿಂದೆ ಕಾಂಪ್ಲೆಕ್ಸ ನಿವಾಸಿ ಉಷಾ ಜೈನ ಎಂಬುವವರು ಅಲ್ಲಿಯ ವಿದ್ಯಾನಗರದ ಪ್ರಕಲ್ಪ ಮೋಟರ್ಸ ಇವರಿಂದ ದಿ. 18/06/2021 ರಂದು ರೂ. 1,25,000/- ಕೊಟ್ಟು ಟಿ ವಿ ಎಸ್ ಐಕ್ಯೂಬ್ ಇಲೆಕ್ಟ್ರಿಕ್ ವಾಹನ ಖರೀದಿಸಿದ್ದರು. ವಾಹನ ಖರೀದಿಸಿದ 6 ತಿಂಗಳಲ್ಲಿಯೇ ಅದರ ಬ್ರೇಕ್ನಲ್ಲಿ ಕರೆಂಟ್ ಬಂದು ಆ ವಾಹನದಲ್ಲಿ ದೋಷ ಕಂಡು ಬಂದಿತ್ತು.
ಕವಿಪವಿ ಕೂಟದಲ್ಲಿ ಹಳೆ ಬೇರು ಹೊಸ ಚಿಗುರು ಕೂಡಿರಬೇಕು ಎಂಬ ಉದ್ದೇಶದಿಂದ ಈ ಹೊಸತನಕ್ಕೆ ನಾಂದಿ ಹಾಡಲಾಗಿದೆ. ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಹೀಗೆ ಹೊಸ ತಂಡಕ್ಕೆ ಮುಂದುವರಿಯಲಿ ಎಂದು ಈ ಮೂಲಕ ವಿನಂತಿಸಲಾಗಿದೆ.
ಧಾರವಾಡ ಜಿಲ್ಲೆ ಆದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜುಲೈ 27 ರಂದು ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪಿಯುಸಿ ಮತ್ತು ಪದವಿ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶಿಸಿದ್ದಾರೆ.
ಸದ್ಯ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಸ್ಥಳೀಯ ಮಟ್ಟದಲ್ಲಿ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವಾ...? ಹುಬ್ಬಳ್ಳಿ - ಧಾರವಾಡದಲ್ಲಿದೆಯಾ ರಾಷ್ಟ್ರವನ್ನೇ ಮೀರಿಸುವಂತಹ ರೌಡಿಸಂ ಇದೆಯಾ... ಅದಕ್ಕಾಗಿಯೇ ಅವಳಿ ನಗರದ ರೌಡಿಗಳ ಅಟ್ಟಹಾಸ ಮಟ್ಟ ಹಾಕಲು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರಾ ಹುಬ್ಬಳ್ಳಿ-ಧಾರವಾಡದ ಜನತೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.