ಯುವಕನ ಬೆತ್ತಲೆ ಪ್ರಕರಣ: ರಾಷ್ಟ್ರ ನಾಯಕರಿಗೆ ಪತ್ರ ಬರೆದ ಹುಬ್ಬಳ್ಳಿ ಜನ

ಸದ್ಯ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಸ್ಥಳೀಯ ಮಟ್ಟದಲ್ಲಿ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವಾ...? ಹುಬ್ಬಳ್ಳಿ - ಧಾರವಾಡದಲ್ಲಿದೆಯಾ ರಾಷ್ಟ್ರವನ್ನೇ ಮೀರಿಸುವಂತಹ ರೌಡಿಸಂ ಇದೆಯಾ... ಅದಕ್ಕಾಗಿಯೇ ಅವಳಿ ನಗರದ ರೌಡಿಗಳ ಅಟ್ಟಹಾಸ ಮಟ್ಟ ಹಾಕಲು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರಾ ಹುಬ್ಬಳ್ಳಿ-ಧಾರವಾಡದ ಜನತೆ... 

Written by - Yashaswini V | Last Updated : Jul 18, 2023, 01:56 PM IST
  • ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ....
  • ಪೈಶಾಚಿಕ ಕೃತ್ಯಕ್ಕೆ ಅಂತ್ಯ ಹಾಕಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹುಬ್ಬಳ್ಳಿ ಜನಾ....
  • ಹು-ಧಾ ಪೊಲೀಸ್ ಕಮೀಷನರೇಟ್ ಏನ್ ಮಾಡ್ತಿದೆ....
ಯುವಕನ ಬೆತ್ತಲೆ ಪ್ರಕರಣ: ರಾಷ್ಟ್ರ ನಾಯಕರಿಗೆ ಪತ್ರ ಬರೆದ ಹುಬ್ಬಳ್ಳಿ ಜನ title=

Hubli Crime News: ವಾಣಿಜ್ಯ ನಗರಿ ಹುಬ್ಬಳ್ಳಿಯ ಯುವಕನ ಬೆತ್ತಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸಂದೀಪ್ ಸೋಳಂಕೆ ಯುವಕನ ಬೆತ್ತಲೆ ಪ್ರಕರಣ ಇದೀಗ ರಾಷ್ಟ್ರ ಮಟ್ಟಕ್ಕೂ ತಲುಪಿದೆ. ಹಲ್ಲೆ ಮಾಡಿರುವ ರೌಡಿಶೀಟರ್ ಯುವಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹುಬ್ಬಳ್ಳಿ ಜನತೆ ಪತ್ರ ಬರೆದಿದ್ದು, ಯುವಕರ ಪೈಶಾಚಿಕ ಕೃತ್ಯಗಳನ್ನು ಪತ್ರದ ಮೂಲಕ ಬಿಚ್ಚಿಟ್ಟಿದ್ದಾರೆ. 

ಹೌದು, ಸಂದೀಪ್ ಸೋಳಂಕೆ ಯುವಕನ ಮೇಲಿನ ಹಲ್ಲೆ ಹಾಗೂ ಪೈಶಾಚಿಕ ಕೃತ್ಯ ಇಡೀ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಇಂತಹ ಕೃತ್ಯಗಳು ಆಗಾಗ್ಗೆ ನಡೆಯುತ್ತಿದ್ದು, ಮಹಾನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯುವಕರು ಈಗಾಗಲೇ ರೌಡಿಶೀಟರ್ ಪಟ್ಟಿಯಲ್ಲಿದ್ದು, ಅವರ ಮೇಲೆ ಕಠಿಣ ಕ್ರಮವಾಗಬೇಕೆಂದು ಹುಬ್ಬಳ್ಳಿ ಜನರು ಪ್ರಧಾನ ಮಂತ್ರಿ ನರೇಂದ್ರ ಮೋದಿ,  ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಷ್ಟ್ರ ನಾಯಕರಿಗೆ ಪತ್ರ ಬರೆದಿದ್ದಾರೆ. 

ಇದನ್ನೂ ಓದಿ- ಯುವಕನನ್ನು ಅರೆಬೆತ್ತಲೇ ಮಾಡಿ ವಿಡಿಯೋ ಹರಿಬಿಟ್ಟ ಕಿರಾತಕರು

ಸದ್ಯ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಸ್ಥಳೀಯ ಮಟ್ಟದಲ್ಲಿ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವಾ...? ಹುಬ್ಬಳ್ಳಿ - ಧಾರವಾಡದಲ್ಲಿದೆಯಾ ರಾಷ್ಟ್ರವನ್ನೇ ಮೀರಿಸುವಂತಹ ರೌಡಿಸಂ ಇದೆಯಾ... ಅದಕ್ಕಾಗಿಯೇ ಅವಳಿ ನಗರದ ರೌಡಿಗಳ ಅಟ್ಟಹಾಸ ಮಟ್ಟ ಹಾಕಲು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರೆ ಹುಬ್ಬಳ್ಳಿ ಜನಾ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಭೀಮನ ಅಮಾವಾಸ್ಯೆ ದಿನವೇ ದೇವಸ್ಥಾನದಲ್ಲಿ ಪತ್ನಿ ಎದುರೇ ಪತಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಎಸ್ .ಆರ್ ಪಾಟೀಲ್ ಎಂಬುವವರಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯಲಾಗಿದೆ. ಈಗ ರೌಡಿಗಳ ಅಟ್ಟಹಾಸದ ಕುರಿತು ಬರೋಬ್ಬರಿ 13 ಜನ ನಾಯಕರಿಗೆ ಪತ್ರ ಬರೆದಿದ್ದಾರೆ. ರೌಡಿಗಳ ಅಟ್ಟಹಾಸಕ್ಕೆ ಬೇಸತ್ತು ಹೋದ ಹು-ಧಾ ಅವಳಿನಗರದ ಜನತೆ ಈಗ ಯುವಕನ ಬೆತ್ತಲೆ ಪ್ರಕರಣವನ್ನ ರಾಷ್ಟ್ರಮಟ್ಟದಲ್ಲಿ ತನಿಖೆ ಮಾಡುವಂತೆ ಹುಬ್ಬಳ್ಳಿಯ ಸಾರ್ವಜನಿಕರು ಪತ್ರ ಬರೆದಿದ್ದಾರೆ.  ಸದ್ಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಅಂಗಳಕ್ಕೆ ತಲುಪಿದ ಬೆತ್ತಲೆ ಪ್ರಕರಣ ಮುಂದೇನಾಗುತ್ತೆ ಎಂಬುದನ್ನು ಕಾಯ್ದು ನೋಡಬೇಕಿದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News