ರಾಷ್ಟ್ರಮಟ್ಟದ ವಿಷಯವಾದ ಕರ್ನಾಟಕ ಮುಖ್ಯಮಂತ್ರಿ ಆಯ್ಕೆ. ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಂದ ರಾಹುಲ್ ಗಾಂಧಿಗೆ ಮನವಿ. ರಾಹುಲ್ ಗಾಂಧಿಗೆ ಕರೆ ಮಾಡಿದ ತಮಿಳುನಾಡು ಸಿಎಂ ಸ್ಟಾಲಿನ್. ಪಶ್ಚಿಮ ಬಂಗಾಳ ಸಿಎಂ ಮಮತಾ ಅವರಿಂದಲೂ ರಾಗಾಗೆ ಕರೆ. ಸಿದ್ದರಾಮಯ್ಯ ಪರ ಇಬ್ಬರು ಮುಖ್ಯಮಂತ್ರಿಗಳಿಂದ ಒತ್ತಡ.
Karnataka CM Race: ವಿಧಾನ ಸಭೆ ಫಲಿತಾಂಶ ಬಂದು ಈಗಾಗಲೇ ಎರಡು ದಿನ ಕಳೆದಿದೆ. ಸಿಎಂ ಯಾರೆಂದು ಘೋಷಿಸಿಲ್ಲ ಇದರ ನಡುವೆ ಇದೀಗ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ಒಪ್ಪಿಸಲಾಗಿದೆ.
Karnataka CM: ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನ ಗಳಿಸುವ ಮುಖಾಂತರ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್ ಪಕ್ಷ ಅಧಿಕಾರದ ಚುಟ್ಕಾಣಿ ಹಿಡಿಯೋದು ಕನ್ಫರ್ಮ್ ಆಗಿದೆ. ಇನ್ನೇನು ಅಧಿಕಾರ ಹಿಡಿಯೋ ಭರದಲ್ಲಿರುವ ನಾಯಕರು ಒಂದು ಕಡೆಯಾದ್ರೆ, ನಮ್ಮ ನಾಯಕ ಸಿಎಂ ಆಗ್ಬೇಕು ಅನ್ನೋ ಕಾರ್ಯಕರ್ತರ ಕೂಗು ಜೋರಾಗಿ ಕೇಳಿ ಬರುತ್ತಿದೆ.
ಉಮಾ ಟಾಕೀಸ್ ಬಳಿ ಶುರುವಾಗಿ ಹಲವು ರಸ್ತೆಗಳಲ್ಲಿ RVD ಮತಬೇಟೆ. ಕೈ ಅಭ್ಯರ್ಥಿ ದೇವರಾಜ್ ಜೊತೆ ಜೀ ಕನ್ನಡ ನ್ಯೂಸ್ Exclusive ಚಿಟ್ಚಾಟ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್ ವಿ ದೇವರಾಜ್ ಪರ ಡಿ.ಕೆ ಶಿವಕುಮಾರ್ ಪ್ರಚಾರ ಮಾಡಿದ್ದಾರೆ. ರೋಡ್ ಶೋ ಮೂಲಕ ಉಮಾ ಟಾಕೀಸ್ ಸರ್ಕಲ್ ನಿಂದ ರ್ಯಾಲಿ ಆರಂಭಿಸಿ.. ಕೆಂಪೇಗೌಡ ನಗರ ಮುಖ್ಯ ರಸ್ತೆ, ರಾಮಕೃಷ್ಣ ಆಶ್ರಮ,ಗಾಂಧಿ ಬಜಾರ್, ಕೃಷ್ಣರಾವ್ ಪಾರ್ಕ್ ಕನಕನಪಾಳ್ಯ, ಮಹಮ್ಮದ್ ಬ್ಲಾಕ್ ಸೇರಿದಂತೆ ಹಲವು ರಸ್ತೆಯಲ್ಲಿ ಪ್ರಚಾರ ನಡೆಸಿದರು.ಇನ್ನುಇದರ ಬಗ್ಗೆ ಆರ್ ವಿ ದೇವರಾಜ್ ಮಾತಾಡಿ ಡಿಕೆ ಶಿವಕುಮಾರ್ ನನಗೆ ಶಕ್ತಿ ಇದ್ದ ಹಾಗೆ ನನಗೆ ಆನೆಬಲ ಬಂದತಾಗಿದೆ ಎಂದು ಜೀ ಕನ್ನಡ ನ್ಯೂಸ್ ಜೊತೆ ತಿಳಿಸಿದ್ದಾರೆ..
H D Kumaraswamy: "ಸಿ" ಓಟರ್ ಕಾಂಗ್ರೆಸ್ ಪಕ್ಷ ಸಮೀಕ್ಷೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; ಅವರ ಸಮೀಕ್ಷೆ ನಿಜ ಆಗಲ್ಲ. 150 ಸ್ಥಾನ ಕಾಂಗ್ರೆಸ್ ಗೆ ಬರುತ್ತೆ, ರಕ್ತದಲ್ಲಿ ಬರೆದುಕೊಡ್ತೀನಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೂ ಮುಗಿಯದ ಟಿಕೆಟ್ ಕಗ್ಗಂಟು. ಬಾಕಿ ಇರುವ 58 ಕ್ಷೇತ್ರಗಳ ಅಭ್ಯರ್ಥಿಗಳ ಹುಡುಕಾಟ. ಇಂದು ಸಂಜೆ ದೆಹಲಿಯಲ್ಲಿ ಖರ್ಗೆ ನೇತೃತ್ವದಲ್ಲಿ ಸಭೆ. ಡಿಕೆಶಿ.. ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್. ಮಧ್ಯಾಹ್ನ ದೆಹಲಿಗೆ ತೆರಳಲಿರುವ ಉಭಯ ನಾಯಕರು. ಸಂಜೆ ನಾಲ್ಕು ಗಂಟೆಗೆ ಖರ್ಗೆ ನಿವಾಸದಲ್ಲಿ ಟಿಕೆಟ್ ಟಾಕ್.
2018ರವಿಧಾನ ಸಭೆಯ ಚುನಾವಣೆ ವೇಳೆ ಕುಮಾರಸ್ವಾಮಿ ಚುಂಚನಗಿರಿಯ ಕಾಲಭೈರವೇಶ್ವರನಿಗೆ ಮೂರು ಅಮಾವಾಸ್ಯೆ ಪೂಜೆ ಸಲ್ಲಿಸಿದ್ರು. ಕೇವಲ 37 ಸ್ಥಾನ ಗಳಿಸಿದ್ದರೂ ಹೆಚ್ಡಿಕೆ 2ನೇ ಬಾರಿಗೆ ಸಿಎಂ ಆಗಿದ್ರು. ಕಾಲಭೈರವೇಶ್ವರನ ಪೂಜೆಯಿಂದಲೇ ಸಿಎಂ ಆಗಿದ್ದು ಅಂತಲೂ ಹೇಳಿದ್ರು... ಈಗ ಕಾಂಗ್ರೆಸ್ನಿಂದ ಸಿಎಂ ಪೈಪೋಟಿ ನಡೆಸುತ್ತಿರುವ ಡಿಕೆಶಿ ಕೂಡ ಕಾಲಭೈರವೇಶ್ವರನ ಮೊರೆ ಹೋಗಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ... ಹಾಗಿದ್ರೆ ಡಿಕೆಶಿ ಮಾಡ್ತಿರೋದೆನು ಅಂತೀರಾ ಇಲ್ಲಿದೆ ನೋಡಿ ಒಂದು ವರದಿ....
ವಿ.ಸೋಮಣ್ಣ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರ. ಡಿಕೆಶಿ ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿದೆ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಹೋಗುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಯಡಿಯೂರಪ್ಪ ಹೇಳಿದ್ರು.
ಸಿದ್ದು, ಡಿಕೆಶಿ ಇಬ್ಬರ ಕೈಯಲ್ಲೂ ಚೂರಿ ಇದೆ. ಇಬ್ಬರು ಕೂಡಾ ಚುಚ್ಚೋಕೆ ಕಾಯ್ತಾ ಇದ್ದಾರೆ. ರಾಹುಲ್ ಬಲವಂತದಿಂದ ಅಪ್ಪಿಕೊಂಡರು ಅಷ್ಟೇ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಕೈ ನಾಯಕರಿಗೆ ಉಪಹಾರ ಕೂಟ ಆಯೋಜಿಸಲಾಗಿತ್ತು.. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು..
ಇಂದು ಅಮಿತಾ ಶಾ ಜೊತೆ ಸಾಹುಕಾರ್ ಸಿಡಿ ಹೋಮ್ವರ್ಕ್. ಸಿಡಿ ವಿಚಾರವಾಗಿ ಶಾ ಜೊತೆ ರಮೇಶ್ ಮಹತ್ವದ ಮೀಟಿಂಗ್
ಎಲ್ಲರ ಚಿತ್ತ ಅಮಿತ್ ಶಾ-ರಮೇಶ್ ಜಾರಕಿಜೊಳಿ ಮೀಟಿಂಗ್ನತ್ತ . ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಾಹುಕಾರ್ ಸಿಡಿ.
ಇಂದಿನಿಂದ ಕಾಂಗ್ರೆಸ್ ನಾಯಕರಿಂದ ಪ್ರತ್ಯೇಕ ಬಸ್ ಯಾತ್ರೆ. ಉತ್ತರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸ್ ಯಾತ್ರೆ. ದಕ್ಷಿಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಸ್ ಯಾತ್ರೆ. ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಸ್ಥಾನದಿಂದ ಡಿಕೆಶಿ ಯಾತ್ರೆ. ಬಸವಕಲ್ಯಾಣ ಕ್ಷೇತ್ರದ ಅನುಭವ ಮಂಟಪದಿಂದ ಸಿದ್ದು ಯಾತ್ರೆ.
ಡಿಕೆಶಿಯನ್ನ ಮುಗಿಸ್ತಿವಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಯಾರು ಯಾರನ್ನೂ ಮುಗಿಸೋಕೆ ಆಗಲ್ಲ ಎಂದು ರಮೇಶ್ ಜಾರಕಿಹೊಳಿಗೆ ತುಮಕೂರಿನಲ್ಲಿ ಶಾಸಕ ಜಮೀರ್ ಟಾಂಗ್ ನೀಡಿದ್ರು.
ಇಂದು ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕಣಿವೆ ರಾಜ್ಯಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇಂದು ಹಳೇ ಮೈಸೂರಿನ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ.ಪರಿವಾರವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದ ಪಕ್ಷಕ್ಕೆ ಇವರೆಲ್ಲ ಬಂದಿದ್ದಾರೆ.ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.ಐದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ನಿರಾಕರಿಸಿದ್ರು ಜನ , ಅನೈತಿಕ ಸಂಬಂಧದಿಂದ ಸರ್ಕಾರ ರಚಿಸಿದ್ರು ಕಾಂಗ್ರೆಸ್-ಜೆಡಿಎಸ್.ಈ ಅನೈತಿಕ ಸರ್ಕಾರ ಜನರಿಗೆ ಇಷ್ಟ ಆಗಲಿಲ್ಲ,ಮೊದಲ ಬಾರಿಗೆ ಆಡಳಿತ ಪಕ್ಷಗಳ 17 ಜನ ವಿರೋಧ ಪಕ್ಷ ಸೇರಿ ವಿರೋಧ ಪಕ್ಷವನ್ನು ಅಧಿಕಾರಕ್ಕೆ ತಂದ್ರು.ಕಾಂಗ್ರೆಸ್ನವರ ಬಸ್ ಹೊರಟಿದೆ, ಹೋಗ್ತಾಹೋಗ್ತಾ ಅದರ ಬ್ರೇಕ್ ಫೇಲ್ ಆಗುತ್ತೆ.
ನಮಗೆ ಅಧಿಕಾರ ಕೊಡಿ ಮಹದಾಯಿ ಯೋಜನೆ ಬಡಿದುಹಾಕ್ತೀನಿ ಎಂದು ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. 3 ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ, ಯೋಜನೆ ಜಾರಿ ಮಾಡಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.