IPL 2024 CSK vs LSG: ಮೈದಾನದಲ್ಲಿ ಕೆಎಲ್ ರಾಹುಲ್ ಯಾವಾಗಲೂ ಶಾಂತವಾಗಿರುವುದನ್ನು ನೀವು ನೋಡಿರಬಹುದು. ಅವರು ಯಾವಾಗಲೂ ಸದ್ದಿಲ್ಲದೆ ಆಟವಾಡುತ್ತಾರೆ. ಆಟವನ್ನು ಗಮನಿಸುತ್ತಾರೆ ಮತ್ತು ಆಟಗಾರರೊಂದಿಗೆ ಮಾತನಾಡುತ್ತಾರೆ. ರಾಹುಲ್ ಕೋಪದಿಂದ ಕೂಗುವುದನ್ನು ನೋಡುವುದು ತುಂಬಾ ವಿರಳ. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರು ಅಂಪೈರ್ ಮೇಲೆ ಕೋಪಗೊಂಡಿದ್ದಾರೆ ಮತ್ತು ಅವರ ಕೋಪದ ಲುಕ್ ನೀವು ಒಮ್ಮೆ ನೋಡಲೇಬೇಕು. ಪಂದ್ಯದಲ್ಲಿ ನಿಜವಾಗಿ ಏನಾಗಿದೆ ತಿಳಿದುಕೊಳ್ಳೋಣ ಬನ್ನಿ?
ಚೆನ್ನೈ ಇನಿಂಗ್ಸ್ನ 18ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಈ ಓವರ್ನಲ್ಲಿ ಯಶ್ ಠಾಕೂರ್ ಬೌಲರ್ ಆಗಿದ್ದರೆ, ಶಿವಂ ದುಬೆ ಸ್ಟ್ರೈಕ್ನಲ್ಲಿದ್ದರು. ಯಶ್ ಅವರ ಆ ಓವರ್ನ ಮೊದಲ ಎಸೆತವನ್ನು ಆನ್-ಫೀಲ್ಡ್ ಅಂಪೈರ್ ವೈಡ್ ಎಂದು ಘೋಷಿಸಿದರು. ಕೆಎಲ್ ರಾಹುಲ್ ಗೆ ಇದು ಸ್ವಲ್ಪವೂ ಇಷ್ಟವಾಗದೆ ಅಂಪೈರ್ ಗಳ ಬಳಿ ತೆರಳಿ ಚರ್ಚೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಂಪೈರ್ ಜೊತೆ ರಾಹುಲ್ ಚರ್ಚೆ ನಡೆಸುತ್ತಿದ್ದಾಗ ಹಿಂದಿನಿಂದ ದುಬೆ ಕೂಡ ಬಂದಿದ್ದಾರೆ. ಆದರೆ ಅಂಪೈರ್ ಕೆಎಲ್ ರಾಹುಲ್ ಮಾತನ್ನು ಕೇಳದೆ ಡಿಆರ್ ಎಸ್ ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ.
ಇದನ್ನೂ ಓದಿ-IPL 2024: 'ಅಗ್ಗದ' ಬೌಲರ್ ಈತ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ಸಿನ ಸೂಪರ್ ಹೀರೋ!
ಅಂಪೈರ್ಗಳೊಂದಿಗೆ ಮಾತನಾಡಿದ ಬಳಿಕ, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ಗೆ ಮರಳಿದಾಗ, ಅವರು ದುಬೆ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆಗಲೂ ರಾಹುಲ್ ತುಂಬಾ ಕೋಪಗೊಂಡಿದ್ದರು. ಮಾತನಾಡುತ್ತಲೇ ಅವರು ತಮ್ಮ ಸ್ಥಾನಕ್ಕೆ ಮರಳಿದ್ದಾರೆ. ನಂತರ ಅವರು ಫೀಲ್ಡ್ ಅನ್ನು ಮರುಹೊಂದಿಸಿದ್ದಾರೆ. ಆಗ ಚೆನ್ನೈ ತಂಡ 3 ವಿಕೆಟ್ಗೆ 163 ರನ್ ಗಳಿಸಿ ಆಡುತ್ತಿತ್ತು. ರಿತುರಾಜ್ ಮತ್ತು ಶಿವಂ ದುಬೆ ಮೈದಾನದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ದರಿಂದ ಒಂದು ಹೆಚ್ಚುವರಿ ರನ್ ನಂತರ, ರಾಹುಲ್ ಕೋಪವು ಏರಿತು ಮತ್ತು ಅವರ ಕೋಪ ಭುಗಿಲೆದ್ದಿತು.
ಇದನ್ನೂ ಓದಿ-IPL 2024: RCB ಪ್ಲೇ ಆಫ್ ನಿಂದ ಹೊರ ಹೋಗಲು ಈ ಆಟಗಾರಣೆ ಕಾರಣ ಎಂದ ದಿಗ್ಗಜ ಸ್ಪಿನ್ ಮಾಂತ್ರಿಕ!
ವೈರಲ್ ವಿಡಿಯೋ ಇಲ್ಲಿದೆ ನೋಡಿ
— Cricket Videos (@cricketvid123) April 23, 2024
ನಾಯಕ ರುತುರಾಜ್ ಗಾಯಕ್ವಾಡ್ (108*) ಅವರ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತ್ತು. ಸಿಎಸ್ಕೆ ನೀಡಿದ 211 ರನ್ಗಳ ದೊಡ್ಡ ಗುರಿಯನ್ನು ಎಲ್ಎಸ್ಜಿ 19.3 ಓವರ್ಗಳಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡು ಚೆಸ್ ಮಾಡಿದೆ. ಮಾರ್ಕಸ್ ಸ್ಟೊಯಿನಿಸ್ LSG ಗಾಗಿ 124* ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ ಮತ್ತು ತನ್ನ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.