West Bengal Assembly Election Result 2021: ಸ್ಪರ್ಧಿಗಳ ಸಾವಿನಿಂದಾಗಿ ಎರಡು ಕ್ಷೇತ್ರಗಳಲ್ಲಿ ಮತದಾನವನ್ನು ಮುಂದೂಡಲಾಯಿತು. 294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗೆಲ್ಲಲು, ಒಂದು ಪಕ್ಷ ಅಥವಾ ಒಕ್ಕೂಟವು 148 ಸ್ಥಾನಗಳನ್ನು ಗೆಲ್ಲಬೇಕು.
ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕಾಗಿ ಸಕಲ ರೀತಿಯಲ್ಲಿಯೂ ಸಜ್ಜಾಗಿರುವ ಚುನಾವಣಾ ಆಯೋಗವು ಮತಎಣಿಕೆ ಕೇಂದ್ರಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿದೆ. ಅದಲ್ಲದೆ ಕೋವಿಡ್ -19 ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೂಡ ಕ್ರಮ ಕೈಗೊಂಡಿದೆ.
ಮೇ 2 ರಂದು ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಬರಲಿವೆ. ಚುನಾವಣಾ ಆಯೋಗವು ಭಾನುವಾರ ಬೆಳಿಗ್ಗೆ 8 ರಿಂದ ಮತಎಣಿಕೆ ಆರಂಭಿಸಲಿದೆ.
ಋಣಾತ್ಮಕ ಕೋವಿಡ್ ವರದಿ ಅಥವಾ ಲಸಿಕೆ ಎರಡು ಡೋಸ್ ತೆಗೆದುಕೊಳ್ಳದ ಅಭ್ಯರ್ಥಿಗಳಿಗೆ ಭಾನುವಾರ ಮತ ಎಣಿಕೆ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ.
ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮೇ 2 ರಂದು ಘೋಷಣೆಯಾಗುವ ಹಿನ್ನಲೆಯಲ್ಲಿ ವಿಜಯದ ನಂತರ ಯಾವುದೇ ರೀತಿ ಮೆರವಣಿಗೆಯನ್ನು ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.