ಪ್ರಧಾನಮಂತ್ರಿಗಳ ಆತ್ಮನಿರ್ಭರ, ವಿಕಸಿತ ಭಾರತ ಯೋಜನೆಗಳ ಮೂಲಕ ಸ್ವಾವಲಂಬಿ, ಸಮೃದ್ಧಿ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ನಾನು ರೈತನ ಮಗ. ರಾಜ್ಯದ ರೈತರೊಂದಿಗೆ ನಾವಿದ್ದೇವೆ ಎಂದು ಕೇಂದ್ರ ಬೃಹತ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಶಕ್ತಿ ಯೋಜನೆಯಿಂದಾಗಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇಕಡಾ 50% ರಷ್ಟು ಹೆಚ್ಚಾಗಿದೆ.ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ವ್ಯಾಪಕ ಅವಕಾಶವಿದೆ. ದಕ್ಷಿಣ ಭಾರತ ಉತ್ಸವ ದ ಮೂಲಕ ಹರಿದು ಬಂದಿರುವ ಸುಮಾರು 4200 ಕೋಟಿ ರೂಪಾಯಿಗಳ ಹೂಡಿಕೆಯ ಜೊತೆಗೆ ಇನ್ನಷ್ಟು ಹೆಚ್ಚು ಹಣವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಬಳಸುವಂತೆ ಪ್ರವಾಸೋದ್ಯಮ ಹಾಗೂ ಕಾನೂನು ಸಚಿವರಾದ ಡಾ. ಎಚ್.ಕೆ ಪಾಟೀಲ ಅವರು ಕರೆ ನೀಡಿದರು.
ಮೈಸೂರಿನಲ್ಲಿ ಕೇನ್ಸ್ ಟೆಕ್ನಾಲಜಿ ಸಂಸ್ಥೆಯು 3,200 ಉದ್ಯೋಗ ಸೃಷ್ಟಿ ಮಾಡುವ 3,750 ಕೋಟಿ ರೂ. ಹೂಡಿಕೆಯ ಅತ್ಯಾಧುನಿಕ ಸೆಮಿಕಂಡಕ್ಟರ್ ತಯಾರಿಕಾ ಘಟಕ ಸ್ಥಾಪಿಸುತ್ತಿದ್ದು, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಕರ್ನಾಟಕ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಒಡಂಬಡಿಕೆಗೆ (MoU) ಸಹಿ ಹಾಕಲಾಯಿತು.
Consul General Talks With Minister: ವಿಜ್ಞಾನ ಮತ್ತು ಸಂಶೋಧನೆ ಹಾಗೂ ನಾವೀನ್ಯತೆ ವಿಷಯದಲ್ಲಿ ರಾಜ್ಯದ ಜತೆ ಕೆಲಸ ಮಾಡಲು, ಸ್ವಿಟ್ಜರ್ಲೆಂಡ್ ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧವಾಗಿ ಆ ದೇಶದ ಕಾನ್ಸುಲ್ ಜನರಲ್ ಜೋನಾಸ್ ಬ್ರನ್ಶ್ವಿಗ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರೊಂದಿಗೆ ಸೋಮವಾರ ಇಲ್ಲಿ ವಿಸ್ತೃತ ಚರ್ಚೆ ನಡೆಸಿದರು.
NRI News: ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ.
ಸುಲಲಿತ ವ್ಯವಹಾರಕ್ಕೆ ಆದ್ಯತೆ ನೀಡುವ ರಾಜ್ಯಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಕರ್ನಾಟಕ ಕೇಂದ್ರೀಕೃತ ಕೈಗಾರಿಕಾ ತಪಾಸಣಾ ವ್ಯವಸ್ಥೆ ಜಾರಿಗಾಗಿ ಸ್ಕಾಚ್ ಅವಾರ್ಡ್ನಲ್ಲಿ 'ಚಿನ್ನ' ಪಡೆದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 60ನೇ ಸಭೆಯಲ್ಲಿ ಬರೋಬ್ಬರಿ 1,74,381.44 ಕೋಟಿ ರೂ. ಮೌಲ್ಯದ ಒಟ್ಟು 11 ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು.
ಭಾರತವು ನಿರಂತರವಾಗಿ ಚೀನಾವನ್ನು ತಲ್ಲಣಗೊಳಿಸುತ್ತಿದೆ. ಈಗ ಡಿಜಿಟಲ್ ಮಾಧ್ಯಮದಲ್ಲಿ ಚೀನಾದ ಅಪ್ಲಿಕೇಶನ್ಗಳ ಹೆಚ್ಚುತ್ತಿರುವ ಪ್ರಾಬಲ್ಯದ ಬಗ್ಗೆ ಸರ್ಕಾರ ಇನ್ನೂ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಿದೆ. 26% ಎಫ್ಡಿಐ ನಿಯಮಗಳನ್ನು ಜಾರಿಗೆ ತರಲು ಆದೇಶ ಹೊರಡಿಸುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. ಚೀನೀ ಮತ್ತು ಇತರ ವಿದೇಶಿ ಕಂಪನಿಗಳಿಗೆ ವಿದೇಶಿ ಹೂಡಿಕೆಯ ನಿಯಮಗಳನ್ನು ಜಾರಿಗೆ ತರಲು 1 ವರ್ಷ ಸಮಯವಿದೆ.
ವಿಶ್ವದ ಅತಿದೊಡ್ಡ ತೈಲ ರಫ್ತುದಾರರಾದ ಸೌದಿ ಅರೇಬಿಯಾವು ದೇಶದ ಬೆಳವಣಿಗೆಯ ಸಾಮರ್ಥ್ಯವನ್ನು ಪರಿಗಣಿಸಿ ಪೆಟ್ರೋಕೆಮಿಕಲ್ಸ್, ಮೂಲಸೌಕರ್ಯ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ಭಾರತದಲ್ಲಿ 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಎದುರು ನೋಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.