ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ, ಸ್ವತಃ ಪ್ರತಿಷ್ಠಿತ ಐಐಟಿ ಪದವೀಧರರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಗಿರೀಶ್ ಲಿಂಗಣ್ಣ ಅವರಿಗೆ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿ, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.
ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.
Development Journalism Award: ಜೀ ಕನ್ನಡ ನ್ಯೂಸ್ ಅಂಕಣಕಾರ ಮತ್ತು ಪ್ಯಾನೆಲಿಸ್ಟ್ ಗಿರೀಶ್ ಲಿಂಗಣ್ಣನವರು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಿರೀಶ್ ಲಿಂಗಣ್ಣನವರಿಗೆ 2019ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ.
ಸ್ಪೇಡೆಕ್ಸ್ ಮೂಲಕ ಭಾರತ ಕೇವಲ ಒಂದು ಪ್ರಯೋಗವನ್ನು ಮಾತ್ರವೇ ನಡೆಸುತ್ತಿಲ್ಲ. ಬದಲಿಗೆ ಭಾರತ ತನ್ನದೇ ಆದ ಪರಂಪರೆಯೊಂದನ್ನು ಸೃಷ್ಟಿಸುತ್ತಿದೆ. ಯೋಜನೆಯ ಯಶಸ್ಸಿನ ಮೂಲಕ, ಭಾರತ ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯ ಹೊಂದಿರುವ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.
GIRISH LINGANNA: ಕರ್ನಾಟಕ ಲೋಕಯುಕ್ತ ಸಂಸ್ಥೆ ವಿಚಾರಣೆ ನಡೆಸುತ್ತಿರುವ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಒಳಗೊಂಡ ಪ್ರಕರಣ ಭಾನುವಾರ ಒಂದು ಕೆಟ್ಟ ತಿರುವು ಪಡೆದುಕೊಂಡಿತು. ಸೆಪ್ಟೆಂಬರ್ 28ರಂದು, ವಿಶೇಷ ತನಿಖಾ ದಳ (ಎಸ್ಐಟಿ), ಕರ್ನಾಟಕ ಲೋಕಾಯುಕ್ತ ಸಿಬ್ಬಂದಿಗಳಿಗೆ, ಎಡಿಜಿಪಿ ಎಸ್ಐಟಿ ಎಂ ಚಂದ್ರಶೇಖರ್ ಅವರು ಬರೆದಿರುವ ಪತ್ರ ಇದಕ್ಕೆ ಕಾರಣವಾಯಿತು. ಈ ಪತ್ರದಲ್ಲಿ, ಚಂದ್ರಶೇಖರ್ ಅವರು ತನ್ನ ಸಿಬ್ಬಂದಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸುವುದರಿಂದ ಹಿಂಜರಿಯಬಾರದು ಎಂದು ಸಲಹೆ ನೀಡಿದ್ದು, ಕೇಂದ್ರ ಸಚಿವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ ಮತ್ತು ಬೆದರಿಕೆ ಒಡ್ಡಿದ್ದಾರೆ ಎಂದಿದ್ದಾರೆ.
30ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದ್ದು, ಭಾರತದ ಹವಾಮಾನ ವೀಕ್ಷಣಾ ಸಾಮರ್ಥ್ಯವನ್ನು ಮುಂದುವರಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಲಿದೆ.
ಚೀನಾದ ವೈಜ್ಞಾನಿಕ ಅನ್ವೇಷಣಾ ನೌಕೆ ಈ ವಾರ ಮಾಲ್ಡೀವ್ಸ್ನಲ್ಲಿ ಡಾಕಿಂಗ್ ನಡೆಸಲು ಉದ್ದೇಶಿಸಿರುವುದು ಬೀಜಿಂಗ್, ನವದೆಹಲಿ, ಮತ್ತು ಮಾಲೆಯ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟುಮಾಡಿದೆ.
ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 3 ಅಧಿಕೃತವಾಗಿ ಮಾಲ್ಡೀವ್ಸ್ಗೆ ಭೇಟಿ ನೀಡುತ್ತಿದ್ದು, ಇದು ಸಿಬ್ಬಂದಿಗಳ ಬದಲಾವಣೆ ಮತ್ತು ದಾಸ್ತಾನುಗಳ ಮರುಪೂರಣದ ಉದ್ದೇಶ ಹೊಂದಿದ್ದು, ಸಂಪೂರ್ಣವಾಗಿ ನಿರುಪದ್ರವಿ ಭೇಟಿ ಮತ್ತು ಕಾರ್ಯಾಚರಣೆಯಾಗಿದೆ ಎಂದು ಬೀಜಿಂಗ್ ಹೇಳಿಕೆ ನೀಡಿದೆ.
ಹಣಕಾಸು ಸಚಿವಾಲಯದ 2024ರ ಆರ್ಥಿಕ ವಿಮರ್ಶೆಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಅಸಮತೋಲನ ಮತ್ತು ಸಮಸ್ಯೆಗಳನ್ನು ಹೊಂದಿದ್ದ ಆರ್ಥಿಕ ವಲಯದ ಹೊರತಾಗಿಯೂ, ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಭಾರತ ಪ್ರಸ್ತುತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಬಹುತೇಕ 3.7 ಟ್ರಿಲಿಯನ್ ಡಾಲರ್ (2024ನೇ ಆರ್ಥಿಕ ವರ್ಷದ ಅಂದಾಜಿನ ಪ್ರಕಾರ) ಜಿಡಿಪಿ ಹೊಂದಿದೆ. ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದರೆ ಬಹುತೇಕ ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ.
ಇದೇ ಮೊದಲ ಬಾರಿಗೆ ಭಾರತ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದನ್ನು ತೈವಾನ್ ನಾಗರಿಕರೊಬ್ಬರಿಗೆ ಪ್ರದಾನ ಮಾಡಿದೆ. ಈ ಅನಿರೀಕ್ಷಿತ ನಡೆಯ ಮೂಲಕ ಗುರುವಾರ ಭಾರತ ಬೀಜಿಂಗ್ಗೆ ಸೂಕ್ತ ಸಂದೇಶ ರವಾನಿಸಿದೆ.
ಜಗತ್ತಿನ ಅತಿದೊಡ್ಡ ಇಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ನಿರ್ಮಿಸುವ, ತೈಪೇ ಮೂಲದ ಫಾಕ್ಸ್ಕಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಲಿಯು ಯಂಗ್ ವೇ ಅವರನ್ನು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ಭೂಷಣಕ್ಕೆ ಆಯ್ಕೆ ಮಾಡಲಾಗಿದೆ.
ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ತನ್ನ ಮೊದಲ ಗಗನಯಾತ್ರೆಗಾಗಿ ಬಾಹ್ಯಾಕಾಶಕ್ಕೆ ತೆರಳಿದ ಮರುದಿನ ಬೆಳಗ್ಗೆ ನಿದ್ದೆಯಿಂದ ಎಚ್ಚರವಾದಾಗ, ಗಗನಯಾತ್ರಿ ಮೈಕ್ ಮುಲೇನ್ ತೀವ್ರ ರೀತಿಯಲ್ಲಿ ನಿಮಿರುವಿಕೆಯನ್ನು ಗಮನಿಸಿದ್ದರು.
ಈ ಹಿಂದೆ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಗಂಡಸರಲ್ಲಿ ನಿಮಿರುವಿಕೆ, ಲೈಂಗಿಕ ಬಯಕೆಗಳು ಮೂಡಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದರು. ರಕ್ತ ಮತ್ತು ಇದರ ದೈಹಿಕ ದ್ರವಗಳು ಬಾಹ್ಯಾಕಾಶದ ಗುರುತ್ವಾಕರ್ಷಣಾ ರಹಿತ ಪರಿಸ್ಥಿತಿಯಲ್ಲಿ ಭಿನ್ನವಾಗಿ ವರ್ತಿಸುತ್ತವೆ. ಅದರೊಡನೆ, ಲೈಂಗಿಕ ಆಸಕ್ತಿ ಮೂಡಿಸುವ ಹಾರ್ಮೋನ್ಗಳು ಬಹಳಷ್ಟು ಕಡಿಮೆಯಾಗುತ್ತವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂಟಾರ್ಕ್ಟಿಕ ಖಂಡದ ವಿಶಾಲ, ವಿಶಿಷ್ಟ ಪ್ರದೇಶದಲ್ಲಿ, ಅದರಲ್ಲೂ ಭಾರತಿ ಕೇಂದ್ರದಲ್ಲಿ ಒಂದು ರಿಮೋಟ್ ಕಂಟ್ರೋಲ್ ಕೇಂದ್ರವನ್ನು ಕಾರ್ಯಾಚರಿಸುತ್ತಿದೆ.
ಅಂಟಾರ್ಕ್ಟಿಕಾದ ಅತ್ಯಂತ ಅದ್ಭುತವಾದ, ದುರ್ಗಮ ಒಳನಾಡಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದು ಕೇಂದ್ರವನ್ನು ಕಾರ್ಯಾಚರಿಸುತ್ತಿದೆ. ಈ ಕೇಂದ್ರ ಬೆಂಗಳೂರು, ಹೈದರಾಬಾದ್ಗಳಲ್ಲಿರುವ ಇಸ್ರೋದ ಸಾಮಾನ್ಯ ಕೇಂದ್ರಗಳಿಂದ ಅತ್ಯಂತ ವಿಭಿನ್ನವಾಗಿದೆ. ಯಾಕೆಂದರೆ, ಅಂಟಾರ್ಕ್ಟಿಕಾದಲ್ಲಿ ಚಳಿಗಾಲದಲ್ಲಿ ತಾಪಮಾನ -89 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುವ ಸಾಧ್ಯತೆಗಳಿದ್ದು, ಬೇಸಿಗೆಯಲ್ಲಿ ತಾಪಮಾನ ಅಂದಾಜು -25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.
ಆಂಧ್ರಪ್ರದೇಶದ ಸೂರ್ಯಲಂಕಾ ವಾಯುನೆಲೆಯಲ್ಲಿ ಆಯೋಜಿಸಲಾದ ಅಸ್ತ್ರಶಕ್ತಿ 2023 ಅಭ್ಯಾಸದಲ್ಲಿ ಭಾರತದ ಸ್ವದೇಶೀ ನಿರ್ಮಾಣದ ಆಕಾಶ್ ಕ್ಷಿಪಣಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.
ಭಾರತೀಯ ವಾಯುಪಡೆ (ಐಎಎಫ್) ಡಿಸೆಂಬರ್ 12ರಂದು ಆಯೋಜಿಸಿದ ಅಸ್ತ್ರಶಕ್ತಿ ಅಭ್ಯಾಸದಲ್ಲಿ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆ ಏಕಕಾಲದಲ್ಲಿ ನಾಲ್ಕು ಮಾನವರಹಿತ ವೈಮಾನಿಕ ಗುರಿಗಳ ಮೇಲೆ ದಾಳಿ ನಡೆಸಿತು.
ಕೇವಲ ಒಂದು ಕ್ಷಿಪಣಿಯನ್ನು ಉಡಾವಣೆಗೊಳಿಸುವ ಮೂಲಕ, ಒಟ್ಟು ನಾಲ್ಕು ಗುರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಮಹತ್ವದ ಸಾಧನೆಯನ್ನು ಭಾರತ ಪ್ರದರ್ಶಿಸಿದೆ. ಕಮಾಂಡ್ ಮಾರ್ಗದರ್ಶನದಲ್ಲಿ ಬಹುತೇಕ 30 ಕಿಲೋಮೀಟರ್ಗಳ ವ್ಯಾಪ್ತಿಯಲ್ಲಿ ಈ ವೈಮಾನಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.
ಬೆಂಗಳೂರು ಟೆಕ್ ಸಮ್ಮಿಟ್ಗೆ ಇಂದು ತೆರಳಿದ ಸಂದರ್ಭದಲ್ಲಿ ನನಗೆ ಎದುರಾಗಿದ್ದು ನಿರಾಶೆ ಮತ್ತು ಬೇಸರ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು (ಇಸ್ರೋ) ಈ ಪ್ರತಿಷ್ಠಿತ, ವ್ಯಾಪಕವಾಗಿ ಗಮನ ಸೆಳೆದಿದ್ದ ಸಮ್ಮೇಳನದಲ್ಲಿ ತಮ್ಮ ಸ್ಟಾಲ್ಗಳನ್ನು ಹೊಂದಿದ್ದವು. ಆದರೆ, ಇಲ್ಲಿಗೆ ಆಗಮಿಸಿದ್ದ ಆಸಕ್ತ ನಾಗರಿಕರು ಅಲ್ಲಿ ಇಡಲಾಗಿದ್ದ ಮಾದರಿಗಳನ್ನು ಕೇವಲ ನೋಡಿ, ಮುಂದೆ ಸಾಗುವ ದೃಷ್ಯ ನನಗೆ ನಿರಾಶೆ ಮೂಡಿಸಿತು. ಅವರಿಗೆ ಈ ಮಾದರಿಗಳ ಕುರಿತು ಮಾಹಿತಿ ನೀಡುವವರು, ಪ್ರಶ್ನೆಗಳಿಗೆ ಉತ್ತರಿಸುವವರು, ಅವುಗಳ ಕುರಿತು ಜ್ಞಾನ ನೀಡುವ ಭಿತ್ತಿಪತ್ರಗಳನ್ನು ಒದಗಿಸುವವರು ಯಾರೂ ಅಲ್ಲಿರಲೇ ಇಲ್ಲ.
Sunita williams achievements : ಸುನೀತಾ ವಿಲಿಯಮ್ಸ್ ಮೊತ್ತಮೊದಲ ಬಾರಿಗೆ ಡಿಸೆಂಬರ್ 9, 2006ರಂದು ಡಿಸ್ಕವರಿ ಸ್ಪೇಸ್ ಶಟಲ್ ಮೂಲಕ, ಎಸ್ಟಿಎಸ್-116 ಯೋಜನೆಯ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಅವರು 14 ಹಾಗೂ 15 ಯೋಜನೆಗಳ ಅಂಗವಾಗಿ ಅಲ್ಲಿ ಉಳಿದುಕೊಂಡು, ನಾಲ್ಕು ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು.
ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಟೀಕಾಕಾರ ಖಾತೆಗಳನ್ನು ಮುಚ್ಚಿ ಹಾಕದಿದ್ದರೆ ಟ್ವಿಟರ್ ಅನ್ನು ಭಾರತದಲ್ಲಿ ನಿಷೇಧಿಸುತ್ತೇವೆ ಎಂದು ಹೇಳಿರುವ ಆರೋಪವನ್ನು ಭಾರತ ಮಂಗಳವಾರ ಅಲ್ಲಗಳೆದಿದೆ.ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಭಾರತ, ಟ್ವಿಟರ್ ಬಳಿ ಜಗತ್ತಿನ ಬೇರೆ ಯಾವುದೇ ರಾಷ್ಟ್ರಕ್ಕಿಂತ ಹೆಚ್ಚು ವಿಚಾರಗಳನ್ನು ತೆಗೆದು ಹಾಕುವಂತೆ ಸೂಚಿಸುತ್ತದೆ. ಸಾಮಾನ್ಯವಾಗಿ ಭಾರತೀಯ ಅಧಿಕಾರಿಗಳು ಸೂಚಿಸಿದಂತೆ ಟ್ವಿಟರ್ ನಡೆದುಕೊಳ್ಳುತ್ತದೆ.
ಇಂತಹ ದ್ವೇಷ ಭಾಷಣಗಳ ಪರಿಣಾಮಗಳೇನು? ಮೊದಲನೆಯದಾಗಿ, ಮತದಾರರನ್ನು ಇದು ಪರಕೀಯಗೊಳಿಸಿ, ಅವರು ಪಕ್ಷವನ್ನು ಬೆಂಬಲಿಸದಂತೆ ಮಾಡಬಹುದು. ಎರಡನೆಯದಾಗಿ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಹಿಂಸಾಚಾರ ನಡೆಯುವಂತೆ ಮಾಡಬಹುದು. ಮೂರನೆಯದಾಗಿ, ಇಂತಹ ಮಾತುಗಳ ಪರಿಣಾಮವಾಗಿ ಪಕ್ಷದ ಗೌರವಕ್ಕೆ ಚ್ಯುತಿ ಉಂಟಾಗಿ, ಹೊಸ ಮತದಾರರನ್ನು ಸೆಳೆಯುವುದು ಕಷ್ಟಕರವಾಗಬಹುದು.
ಒಂದು ವೇಳೆ, ಪೈಲಟ್ ಏನಾದರೂ ವಿಮಾನದಿಂದ ಜಿಗಿಯುವ ಪರಿಸ್ಥಿತಿ ಎದುರಾದರೆ, ಆತನಿಗೆ ವೈದ್ಯಕೀಯ ಗಮನ ನೀಡುವ ಅವಶ್ಯಕತೆ ಮಹತ್ವದ್ದಾಗಿದೆ. ವೈದ್ಯಕೀಯ ಸಿಬ್ಬಂದಿಗಳು ಪೈಲಟ್ಗೆ ಏನಾದರೂ ಗಾಯವಾಗಿದೆಯೇ, ತೊಂದರೆ ಎದುರಾಗಿದೆಯೇ, ಎಂದು ಗಮನಿಸಿ, ಆರೋಗ್ಯ ಅದಕ್ಕೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಅದರೊಡನೆ, ಏನಾದರೂ ಮಾನಸಿಕ ತೊಂದರೆ ಉಂಟಾಗಿದ್ದರೂ ಅದಕ್ಕೆ ತಕ್ಕ ಪರಿಹಾರ, ಬೆಂಬಲ ಒದಗಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.