ಕೋವಿಡ್ನ ಆರಂಭ ಘಟ್ಟದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್ಡೌನ್ನ ಪರಿಣಾಮ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಮಾರ್ಚ್ 15ರಂದು ಥಿಯೇಟರ್ಗೆ ಬರ್ತಿದೆ. ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡವೀಗ ನಿಮ್ಮ ಸಂಗ ಎಂಬ ಹಾಡನ್ನು ಅನಾವರಣ ಮಾಡಿದೆ. ಖಾಸಗಿ ಹೋಟೆಲ್ ನಲ್ಲಿ ಫೋಟೋ ಹಾಡು ಬಿಡುಗಡೆ ಮಾಡಲಾಯಿತು. ಈ ಚಿತ್ರ ಪ್ರೆಸೆಂಟ್ ಮಾಡುತ್ತಿರುವ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
BBMP Officer Dr. Prayag Raj: ಬಿಗ್ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ತಮ್ಮ ಜೀವನದ ಕಹಿ ಘಟನೆಗಳನ್ನು ಬಿಚ್ಚಿಡುವಾಗ ತಮಗೆ ಕೋವಿಡ್ ಸೋಂಕು ತಲುಲಿದ ಸಮಯದಲ್ಲಿ ಅನುಭವಿಸಿದ ಘಟನೆಗಳ ಬಗ್ಗೆ, ಇದೀಗ ಪ್ರತಾಪ್ ಆರೋಪಗಳು ಸುಳ್ಳು ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಖಂಡಿಸಿದ್ದಾರೆ.
Kannada flag burnt Case: ಬಂಧಿತ ಆರೋಪಿ ಅಮೃತೇಶ್ ಉತ್ತರ ಪ್ರದೇಶ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. 2019 ರ ಲಾಕ್ ಡೌನ್ ನಲ್ಲಿ ಈತ ಊರಿಗೆ ತೆರಳಬೇಕಾಗಿತ್ತು. ಆದರೆ ಈ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ.
ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದೆ. ಸೋಂಕು ಶೇ. 15ಕ್ಕಿಂತಲೂ ಹೆಚ್ಚಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ (Lockdown)
ಮಾಡುವ ಶಿಫಾರಸನ್ನು ಈ ಸಭೆಯು ಕೈಗೊಂಡಿದೆ.
ಆಸ್ಪತ್ರೆಗಳಲ್ಲಿ, ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆಯ ನಡುವೆ ಸೋಂಕಿನ ಪ್ರಮಾಣವು 30 ಪ್ರತಿಶತವನ್ನು ತಲುಪಿದೆ. ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ರಾಜ್ಯದಲ್ಲಿ ಲಾಕ್ ಡೌನ್ ಹೇರುವ ಬಗ್ಗೆ ಯೋಚನೆಯಲ್ಲಿದೆ ಸರ್ಕಾರ.
ಪ್ರಯಾಣಿಕರ ಕ್ರೆಡಿಟ್ ಶೆಲ್ ರಿಫಂಡ್ ಕುರಿತು ಸಚಿವಾಲಯದ ಕಾರ್ಯದರ್ಶಿ ಬುಧವಾರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ, ಕ್ರೆಡಿಟ್ ಶೆಲ್ ಪ್ರಕರಣದಲ್ಲಿ ವಿಮಾನಯಾನ ಕಂಪನಿಗಳು ನಡೆದುಕೊಂಡ ರೀತಿ ಬಗ್ಗೆ ಸರ್ಕಾರ ಖಂಡನೆ ವ್ಯಕ್ತಪಡಿಸಿದೆ.
ಸಾಂಕ್ರಾಮಿಕ ಮತ್ತು ಲಾಕ್ಡೌನ್ಗಳಿಂದಾಗಿ 2020 ರಲ್ಲಿ 1.5 ಮಿಲಿಯನ್ ಶಾಲೆಗಳು ಮುಚ್ಚಲ್ಪಟ್ಟವೆ, ಇದರಿಂದಾಗಿ ಭಾರತದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಾಖಲಾದ 247 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯುನಿಸೆಫ್ ತಿಳಿಸಿದೆ.
ಭಾರತ ಸತತ 15 ನೇ ದಿನವೂ ಸುಮಾರು 50,000 ಕೊರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವುದರಿಂದ, ಹಲವಾರು ರಾಜ್ಯ ಸರ್ಕಾರಗಳು ಕೊರೊನಾವೈರಸ್ ಸೋಂಕಿನ ಏರಿಕೆಯನ್ನು ತಡೆಯಲು ಕರ್ಫ್ಯೂಗಳನ್ನು ಜಾರಿ ಮಾಡಿವೆ.
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಸಡಿಲಗೊಳಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿರ್ಧಾರದ ಪರವಾಗಿಲ್ಲ ಎಂದು ಹೇಳಿದರು, COVID19 ಸಾಂಕ್ರಾಮಿಕದಿಂದ ಎದುರಾಗುವ ಸವಾಲಿನ ಮಧ್ಯೆ ನಾವು ಆರೋಗ್ಯ ಮತ್ತು ಆರ್ಥಿಕತೆಯ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ.
ಜುಲೈ 13 ರಿಂದ 23 ರವರೆಗೆ ಮಹಾರಾಷ್ಟ್ರದ ಪುಣೆ ಮತ್ತು ನೆರೆಯ ಪಿಂಪ್ರಿ-ಚಿಂಚ್ವಾಡ್ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಆಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ.ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಅಂಗಡಿಗಳು ಮಾತ್ರ ತೆರೆದಿರುತ್ತವೆ ಎಂದು ಅದು ಹೇಳಿದೆ.
ಸಿಕ್ಕಿಬಿದ್ದ ವಲಸೆ ಕಾರ್ಮಿಕರನ್ನು ತಮ್ಮ ಸ್ಥಳೀಯ ಸ್ಥಳಗಳಿಗೆ ಕರೆದೊಯ್ಯಲು ಒತ್ತಾಯಿಸಿದಂತೆ ವಿವಿಧ ರಾಜ್ಯಗಳಿಗೆ ‘ಶ್ರಮಿಕ್ ವಿಶೇಷ ರೈಲುಗಳು ನೀಡುವುದನ್ನು ಮುಂದುವರಿಸುವುದಾಗಿ ಭಾರತೀಯ ರೈಲ್ವೆ (Indian Railways) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಡೊಮ್ಕಲ್ ಪುರಸಭೆ ಪ್ರದೇಶದ ನೂರಾರು ಜನರು ಬುಧವಾರ ಬೆಳಿಗ್ಗೆ ಆಹಾರವಿಲ್ಲದಿದ್ದರಿಂದಾಗಿ ಮೂರು ಗಂಟೆಗಳ ಕಾಲ ರಾಜ್ಯ ಹೆದ್ದಾರಿಯನ್ನು ತಡೆ ಹಿಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.