ಸಿದ್ದರಾಮಯ್ಯ ವಿರುದ್ಧ ಮಾಡಿರುವ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿ, ಸಚಿವ ಸುಧಾಕರ್ ಆರೋಪಕ್ಕೂ-ಸಿಎಜಿ ವರದಿಯಲ್ಲಿ ಇರುವುದಕ್ಕೂ ಒಂದಕ್ಕೊಂದು ಸಂಬಧವೇ ಇಲ್ಲ ಎಂದು ಸಮರ್ಥನೆ ನೀಡಿದರು.
ಚಿಕ್ಕಬಳ್ಳಾಪುರದ ಸುಧಾಕರ್ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್.. ಸುಧಾಕರ್ ಡಾಕ್ಟರ್ ಓದಿದ್ದಾನಾ.. ಕಾಪಿ ಮಾಡಿದ್ದಾನೋ ಗೊತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಅಂತ ಇದ್ರೆ ಅದು ಸುಧಾಕರ್ ಮಾತ್ರ ಎಂದಿದ್ದಾರೆ.
ಸುಧಾಕರ್ಗೆ ಆಪರೇಷನ್ ಕಮಲಕ್ಕೊಳಗಾಗಬೇಡ ಅಂತಾ ಮಧ್ಯರಾತ್ರಿ ನಾನು ಪರಿಪರಿಯಾಗಿ ಹೇಳಿದೆ. ಆದ್ರೆ ಬೆಳಗ್ಗೆನೇ ಬಾಂಬೆಗೆ ಹೋಗ್ಬಿಟ್ಟ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.. ಭ್ರಷ್ಟಾಚಾರ ಆರೋಪದ ಬಗ್ಗೆ ನಿಮಗೆ ಏನಾದ್ರು ಧಮ್ಮು, ತಾಕತ್ ಇದ್ರೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಮಾಡಬಾರದು. ಅತಿ ಹೆಚ್ಚು ಓವರ್ ಆಕ್ಟಿಂಗ್ ಮಾಡದೆ ಸಾರ್ವಜನಿಕರೊಂದಿಗೆ ಫ್ರೆಂಡ್ಲಿ ಆಗಿ ನಿಲುವು ಕೈಗೊಳ್ಳಬೇಕು, ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಕೋವಿಡ್ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್ ಬಗ್ಗೆ ಸಾರ್ವಜನಿಕರು ಭಯ ಪಡಬೇಕಿಲ್ಲ. ತಜ್ಞರ ಸಲಹೆಯನ್ನು ಪಾಲನೆ ಮಾಡಿದರೆ ಕೋವಿಡ್ ಸಂಪೂರ್ಣ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
ಸುವರ್ಣಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರ. ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಡಾ.ಕೆ.ಸುಧಾಕರ್ ಟಾಂಗ್. ಅಪ್ರತಿಮ ವೀರ ಸ್ವಾತಂತ್ರ್ಯ ಹೋರಾಟಗಾರರ ವೀರ ಸಾವರ್ಕರ್ . ಸರ್ಕಾರ ಬದ್ದತೆ ದೇಶಭಕ್ತಿಯಿಂದ ಫೋಟೊ ಅನಾವರಣ ಮಾಡಿದೆ. ಕಾಂಗ್ರೆಸ್ನವರು ಎಲ್ಲವನ್ನು ರಾಜಕಾರಣ ದೃಷ್ಟಿಯಿಂದ ನೋಡ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಯಾವುದೆ ನೈಜ ವಿಷಯ ಇಲ್ಲ. ಜನಪರ ವಿಷಯಗಳು ಇಲ್ಲದ ಕಾರಣ ಈ ರೀತಿಯ ಗದ್ದಲ ಎಬ್ಬಿಸಿದ್ದಾರೆ
Dengue cases: ಕೋವಿಡ್ ಮತ್ತು ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಪ್ರತಿಭಟನೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಈ ನೆಲದ ಕಾನೂನನ್ನು ಧಿಕ್ಕರಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಾಲ್ಕನೇ ಅಲೆ ಬಂದಿಲ್ಲ. ಆದರೂ ಮಾಸ್ಕ್ ಧರಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
Health Minister Sudhakar:ಕನಿಷ್ಟ 4 ರಿಂದ 6 ವಾರ ಜನ ಎಚ್ಚರಿಕೆವಹಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಅಲ್ಲದೆ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
Karnataka Omicron cases: ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಹೊಸ ಸೋಂಕುಗಳ ದೃಢೀಕರಣದೊಂದಿಗೆ, ಕರ್ನಾಟಕವು ಇದುವರೆಗೆ ಕೋವಿಡ್-19 ರ ಒಮಿಕ್ರಾನ್ ರೂಪಾಂತರದ 13 ಪ್ರಕರಣಗಳನ್ನು ವರದಿ ಮಾಡಿದೆ.
Omicron in Karntaka: ಕೇಂದ್ರದ COVID-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಶೀಘ್ರದಲ್ಲೇ "ಸಲಹೆಗಳು ಮತ್ತು ನಿಬಂಧನೆಗಳನ್ನು" ರವಾನಿಸಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರ ನಡುವಿನ ಮುನಿಸು ಸ್ವಲ್ಪ ಮರೆಯಾಗಿತ್ತು. ಈಗ ಮತ್ತೆ ಅದು ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ. ದೂರು ಹೈಕಮಾಂಡ್ ಅಂಗಳವನ್ನೂ ತಲುಪಿದೆ ಅಥವಾ ತಲುಪಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.